Andrew Symonds: ಆಸ್ಟ್ರೇಲಿಯಾದ ಅನುಭವಿ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಳೆದ ವರ್ಷ ಇದೇ ದಿನ ಜಗತ್ತಿಗೆ ವಿದಾಯ ಹೇಳಿದ್ದರು. ಕ್ವೀನ್ಸ್ ಲ್ಯಾಂಡ್ ನ ಟೌನ್ಸ್ವಿಲ್ಲೆಯಲ್ಲಿ ಸೈಮಂಡ್ಸ್ ಕಾರು ಅಪಘಾತಕ್ಕೀಡಾಗಿತ್ತು. ಆಂಡ್ರ್ಯೂ ಸೈಮಂಡ್ಸ್ ವಿಶ್ವದ ಶ್ರೇಷ್ಠ ಆಲ್ ರೌಂಡರ್’ಗಳಲ್ಲಿ ಒಬ್ಬರಾಗಿದ್ದರು, ಆದರೆ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿವಾದಗಳಲ್ಲಿ ಭಾಗಿಯಾಗಿದ್ದರು ಎಂದರೆ ನಂಬಲು ಅಸಾಧ್ಯ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಸ್ಟ್ರೇಲಿಯಾದ ಅನುಭವಿ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಳೆದ ವರ್ಷ ಇದೇ ದಿನ ಜಗತ್ತಿಗೆ ವಿದಾಯ ಹೇಳಿದ್ದರು. ಕ್ವೀನ್ಸ್ ಲ್ಯಾಂಡ್ ನ ಟೌನ್ಸ್ವಿಲ್ಲೆಯಲ್ಲಿ ಸೈಮಂಡ್ಸ್ ಕಾರು ಅಪಘಾತಕ್ಕೀಡಾಗಿತ್ತು. ಆಂಡ್ರ್ಯೂ ಸೈಮಂಡ್ಸ್ ವಿಶ್ವದ ಶ್ರೇಷ್ಠ ಆಲ್ ರೌಂಡರ್’ಗಳಲ್ಲಿ ಒಬ್ಬರಾಗಿದ್ದರು, ಆದರೆ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿವಾದಗಳಲ್ಲಿ ಭಾಗಿಯಾಗಿದ್ದರು ಎಂದರೆ ನಂಬಲು ಅಸಾಧ್ಯ.
ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ 1975 ರಲ್ಲಿ ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ನಲ್ಲಿ ಜನಿಸಿದರು. ಆದರೆ ಕ್ರಿಕೆಟ್ ಆಡಿದ್ದು, ಆಸ್ಟ್ರೇಲಿಯಾಗಾಗಿ. ಸೈಮಂಡ್ಸ್ 1998 ರಲ್ಲಿ ODI ಪಾದಾರ್ಪಣೆ ಮಾಡಿದ್ದರು. ಇನ್ನು ಎಲ್ಲಾ ಮೂರು ಮಾದರಿಗಳಲ್ಲಿ ತಮ್ಮ ಅದ್ಭುತ ಆಟ ಪ್ರದರ್ಶಿಸಿದರು.
ಸ್ಫೋಟಕ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ 2009ರಲ್ಲಿ ಮದ್ಯದ ಚಟದಿಂದಾಗಿ ಕ್ರಿಕೆಟ್ ನಿಂದ ದೂರ ಉಳಿಯಬೇಕಾಯಿತು. 2009ರಲ್ಲಿ ಟಿ20 ವಿಶ್ವಕಪ್ ನ ವೇಳೆ ಮದ್ಯಪಾನ ಮಾಡಿ ನಿಯಮಗಳನ್ನು ಉಲ್ಲಂಘಿಸಿದರು ಎಂದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಅಷ್ಟೇ ಅಲ್ಲದೆ ಮಧ್ಯದಲ್ಲಿಯೇ ಮನೆಗೆ ಕಳುಹಿಸಲಾಯಿತು.
2008 ರಲ್ಲಿ, ಆಂಡ್ರ್ಯೂ ಸೈಮಂಡ್ಸ್ ಮತ್ತು ಹರ್ಭಜನ್ ಸಿಂಗ್ ನಡುವೆ ಮಂಕಿಗೇಟ್ ವಿವಾದ ನಡೆದಿತ್ತು. ಸಿಡ್ನಿ ಟೆಸ್ಟ್ ನಲ್ಲಿ ಹರ್ಭಜನ್ ಮೇಲೆ ಜನಾಂಗೀಯ ಟೀಕೆಗಳ ಆರೋಪ ಹೊರಿಸಲಾಗಿತ್ತು. ಮೈದಾನದಲ್ಲಿ ಭಜ್ಜಿ ತನ್ನನ್ನು 'ಮಂಕಿ' ಎಂದು ಕರೆಯುತ್ತಿದ್ದರು ಎಂದು ಸೈಮಂಡ್ಸ್ ಆರೋಪಿಸಿದ್ದಾರೆ. ಆದರೆ ಅವರು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಬಳಸುವ ‘ ಮಾ ಕಿ’ ಶಬ್ದವನ್ನು ಹೇಳಿದ್ದರು.
ಕ್ರಿಕೆಟ್ನಿಂದ ನಿವೃತ್ತಿಯಾದ ನಂತರವೂ ಆಂಡ್ರ್ಯೂ ಸೈಮಂಡ್ಸ್ ವಿವಾದಗಳಿಂದ ದೂರಸರಿದಿರಲಿಲ್ಲ. 2021 ರಲ್ಲಿ, ಕಾಮೆಂಟರಿ ಮಾಡುವಾಗ ಮಾರ್ನಸ್ ಲಬುಶೆನ್ ಅವರ ಬ್ಯಾಟಿಂಗ್ ಬಗ್ಗೆ ಅಸಭ್ಯ ಟೀಕೆಗಳನ್ನು ಮಾಡಿದ್ದರು.
ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್, 198 ODI ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1462 ರನ್, ಟೆಸ್ಟ್ನಲ್ಲಿ 5088 ಮತ್ತು ಟಿ20ಯಲ್ಲಿ 337 ರನ್ ಗಳಿಸಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ ಕೂಡ 39 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.