ಮಗನ ಮೇಲೆ ಆಸಿಡ್ ದಾಳಿ, ತಂದೆಗೆ 16 ವರ್ಷ ಜೈಲು!

ಮೂಲತಃ ಅಫ್ಘಾನಿಸ್ತಾನದ 40 ವರ್ಷ ವಯಸ್ಸಿನ ತಂದೆ ತನ್ನ ಮಗನ ಮೇಲೆಯೇ ಆಸಿಡ್ ದಾಳಿ ನಡೆಸಲು ಯೋಚಿಸಿದ್ದನು ಎಂದು ನ್ಯಾಯಾಧೀಶ ರಾಬರ್ಟ್ ಜಾಕ್ವೆಸ್ ಹೇಳಿದರು.

Last Updated : Mar 7, 2019, 02:38 PM IST
ಮಗನ ಮೇಲೆ ಆಸಿಡ್ ದಾಳಿ, ತಂದೆಗೆ 16 ವರ್ಷ ಜೈಲು! title=

ಲಂಡನ್: ಮೂರು ವರ್ಷಗಳ ತನ್ನ ಮಗನ ಮೇಲೆ ಆಸಿಡ್ ದಾಳಿ ನಡೆಸಲು ಯೋಜಿಸಿದ್ದ ವ್ಯಕ್ತಿಗೆ 16 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಐದು ಮಂದಿ ದೋಷಿಗಳಾಗಿದ್ದು, ಪತ್ನಿಯು ತನ್ನ ಚಿಕ್ಕ ಮಗುವನ್ನು ನೋಡಿಕೊಳ್ಳುತ್ತಿಲ್ಲ ಎಂಬುದನ್ನು ಸಾಬೀತು ಪಡಿಸಲು ಮಗುವಿನ ತಂದೆ ಈ ಕೆಲಸ ಮಾಡಿದ್ದಾನೆ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.

ಮೂಲತಃ ಅಫ್ಘಾನಿಸ್ತಾನದ 40 ವರ್ಷ ವಯಸ್ಸಿನ ತಂದೆ ತನ್ನ ಮಗನ ಮೇಲೆಯೇ ಆಸಿಡ್ ದಾಳಿ ನಡೆಸಲು ಯೋಚಿಸಿದ್ದನು ಎಂದು ನ್ಯಾಯಾಧೀಶ ರಾಬರ್ಟ್ ಜಾಕ್ವೆಸ್ ಹೇಳಿದರು.

ಅಪರಾಧಿಯ ಹೆಸರು ಸಂತ್ರಸ್ತರ ಗುರುತನ್ನು ಗೌಪ್ಯವಾಗಿರಿಸಿಕೊಳ್ಳಲು ಪ್ರಾಸಿಕ್ಯೂಟರ್ಗಳು ವಿನಂತಿಸಿದ್ದು, ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಅಪರಾಧಿಯ ಹೆಂಡತಿ 2016 ರಲ್ಲಿ ಆತನನ್ನು ತೊರೆದರು. ಇದರ ನಂತರ ಅವನು ಮಗುವಿನ ಮೇಲೆ ದಾಳಿ ಮಾಡಲು ಮತ್ತೋರ್ವ ವ್ಯಕ್ತಿಗೆ ಹಣ ನೀಡಿದ್ದ. ಈ ದಾಳಿ ಜುಲೈ 2018 ರಲ್ಲಿ ನಡೆದಿದೆ.

Trending News