Share Market Update: ಮಾರುಕಟ್ಟೆಯಲ್ಲಿ ಭಾರಿ ಗೂಳಿ ಜಿಗಿತ, 63000 ಗಡಿ ದಾಟಿದ ಸೆನ್ಸೆಕ್ಸ್

Stock Market Update: ಷೇರುಪೇಟೆಯಲ್ಲಿ ಸತತ ನಾಲ್ಕನೇ ದಿನವಾದ ಇಂದೂ ಕೂಡ ಭಾರಿ ಖರೀದಿ ಪ್ರಕ್ರಿಯೆ ನಡೆದಿದೆ. ಬಿಎಸ್‌ಇ ಸೆನ್ಸೆಕ್ಸ್ 122 ಅಂಕ ಏರಿಕೆಯಾಗಿ 62,969ಕ್ಕೆ ತಲುಪಿದೆ. ನಿಫ್ಟಿ ಕೂಡ 35 ಅಂಕಗಳ ಜಿಗಿತದೊಂದಿಗೆ 18,633ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.   

Written by - Nitin Tabib | Last Updated : May 30, 2023, 04:07 PM IST
  • ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಶಾಮಿಲಾಗಿರುವ 30 ಷೇರುಗಳ ಪೈಕಿ 20 ಷೇರುಗಳಲ್ಲಿ ಭಾರಿ ಬಲ ಕಂಡುಬಂದಿದೆ.
  • ಇದರಲ್ಲಿ ಎಚ್‌ಸಿಎಲ್ ಟೆಕ್ ಷೇರುಗಳು ಶೇ. 1.5 ಬಲದೊಂದಿಗೆ ತನ್ನ ವಹಿವಾಟು ನಡೆಸುತ್ತಿದೆ.
  • ನೆಸ್ಲೆ ಇಂಡಿಯಾದ ಷೇರುಗಳ ಸೂಚ್ಯಂಕದಲ್ಲಿ ಸುಮಾರು ಶೇಕಡ 1 ರಷ್ಟು ಕುಸಿತದೊಂದಿಗೆ ಟಾಪ್ ಲೂಸರ್ ಆಗಿ ಹೊರಹೊಮ್ಮಿವೆ.
Share Market Update: ಮಾರುಕಟ್ಟೆಯಲ್ಲಿ ಭಾರಿ ಗೂಳಿ ಜಿಗಿತ, 63000 ಗಡಿ ದಾಟಿದ ಸೆನ್ಸೆಕ್ಸ್ title=

Sensex Update: ಷೇರುಪೇಟೆಯಲ್ಲಿ ಸತತ ನಾಲ್ಕನೇ ದಿನವಾದ ಇಂದು ಅಂದರೆ ಮಂಗಳವಾರವೂ ಭಾರಿ ಖರೀದಿ ಪ್ರಕ್ರಿಯೆ ನಡೆದಿದೆ. ಬಿಎಸ್‌ಇ ಸೆನ್ಸೆಕ್ಸ್ 122 ಅಂಕ ಏರಿಕೆಯೊಂದಿಗೆ 62,969ಕ್ಕೆ ತಲುಪಿದೆ. ನಿಫ್ಟಿ ಕೂಡ 35 ಅಂಕಗಳ ಜಿಗಿತದೊಂದಿಗೆ 18,633ಕ್ಕೆ ಮುಕ್ತಾಯ ಕಂಡಿದೆ. ಮಾರುಕಟ್ಟೆಯಲ್ಲಿನ ರ್ಯಾಲಿಗೆ ಬ್ಯಾಂಕಿಂಗ್ ಷೇರುಗಳ ಬೆಂಬಲ ದೊರೆತಿದೆ. ಇದರ ಹೊರತಾಗಿ, ಎಫ್‌ಎಂಸಿಜಿ ಮತ್ತು ಮಾಧ್ಯಮ ಷೇರುಗಳಲ್ಲಿಯೂ ಹುರುಪಿನ ಖರೀದಿ ಕಂಡುಬಂದಿದೆ. ಸೋಮವಾರದ ಆರಂಭದಲ್ಲಿ ಸೆನ್ಸೆಕ್ಸ್ 344 ಅಂಕಗಳ ಏರಿಕೆಯೊಂದಿಗೆ 62,846 ಅಂಕಗಳಿಗೆ ತಲುಪಿತ್ತು.

ಷೇರು ಮಾರುಕಟ್ಟೆಯಲ್ಲಿನ ಜಿಗಿತಕ್ಕೆ ಕಾರಣ 
>> ಜಾಗತಿಕ ಮಾರುಕಟ್ಟೆಯಿಂದ ಧನಾತ್ಮಕ ಸಂಕೇತ
>> ಡಾಲರ್ ಸೂಚ್ಯಂಕದಲ್ಲಿ ಕುಸಿತ
>> ಹೆವಿವೇಯ್ಟ್ ಸ್ಟಾಕ್‌ಗಳಲ್ಲಿ ಬೆಂಬಲವನ್ನು ಖರೀದಿಸುವುದು

ಸೆನ್ಸೆಕ್ಸ್‌ನಲ್ಲಿ ಒಳಗೊಂಡಿರುವ ಷೇರುಗಳ ಸ್ಥಿತಿಗತಿ ಹೇಗಿತ್ತು?
ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಶಾಮಿಲಾಗಿರುವ 30 ಷೇರುಗಳ ಪೈಕಿ 20 ಷೇರುಗಳಲ್ಲಿ ಭಾರಿ ಬಲ ಕಂಡುಬಂದಿದೆ. ಇದರಲ್ಲಿ ಎಚ್‌ಸಿಎಲ್ ಟೆಕ್ ಷೇರುಗಳು ಶೇ. 1.5 ಬಲದೊಂದಿಗೆ ತನ್ನ ವಹಿವಾಟು ನಡೆಸುತ್ತಿದೆ. ನೆಸ್ಲೆ ಇಂಡಿಯಾದ ಷೇರುಗಳ ಸೂಚ್ಯಂಕದಲ್ಲಿ ಸುಮಾರು ಶೇಕಡ 1 ರಷ್ಟು ಕುಸಿತದೊಂದಿಗೆ ಟಾಪ್ ಲೂಸರ್ ಆಗಿ ಹೊರಹೊಮ್ಮಿವೆ.

ಇದನ್ನೂ ಓದಿ-RBI Alert: ಆಯ್ದ ಬ್ಯಾಂಕುಗಳಲ್ಲಿನ ಅಸ್ಥಿರತೆಯ ಕುರಿತು ಕಳವಳ ವ್ಯಕ್ತಪಡಿಸಿದ ಆರ್ಬಿಐ ಗವರ್ನರ್

ಜಾಗತಿಕ ಮಾರುಕಟ್ಟೆಯ ಸ್ಥಿತಿಗತಿ ಹೇಗಿತ್ತು?
>> ಜಾಗತಿಕ ಮಾರುಕಟ್ಟೆಗಳಲ್ಲಿ ಸಮ್ಮಿಶ್ರ ವ್ಯಾಪಾರ ಕಂಡುಬಂದಿದೆ
>> ನಿನ್ನೆಯ ಭರ್ಜರಿ ಲಾಭದ ಬಳಿಕ ಇಂದು ಜಪಾನ್ ಮಾರುಕಟ್ಟೆ ಮಂದಗತಿಯಲ್ಲಿ ತನ್ನ ವಹಿವಾಟನ್ನು ನಡೆಸಿದೆ. 
>> ಜಪಾನ್‌ನ ಮಾರುಕಟ್ಟೆ ನಿನ್ನೆ ತನ್ನ 33 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿತ್ತು
>> ದೀರ್ಘ ವಾರಾಂತ್ಯದ ನಂತರ, ಕೊರಿಯಾದ ಮಾರುಕಟ್ಟೆಯ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.
>> ಬೇರ್  ಮಾರ್ಕೆಟ್ ಪ್ರವೇಶಿಸಲು ಚೀನಾ ಮಾರುಕಟ್ಟೆ ಸಿದ್ಧತೆ ನಡೆಸುತ್ತಿದೆ
>> ಕಳೆದ 5 ದಿನಗಳಿಂದ ಹಾಂಗ್ ಕಾಂಗ್‌ನಲ್ಲಿ ಮಾರುಕಟ್ಟೆ ಕುಸಿಯುತ್ತಿದೆ.

ಇದನ್ನೂ ಓದಿ-Petrol-Diesel ಬೆಲೆಯಲ್ಲಿ ಭಾರಿ ಇಳಿಕೆ, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯೇ ಇದಕ್ಕೆ ಕಾರಣ

ಜಾಗತಿಕ ಸರಕು ಮಾರುಕಟ್ಟೆಯ ಸ್ಥಿತಿಗತಿ ಹೇಗಿತ್ತು?
>> ಕಚ್ಚಾ ತೈಲವನ್ನು ಹೊರತುಪಡಿಸಿ ಎಲ್ಲಾ ಸರಕುಗಳಲ್ಲಿ ದುರ್ಬಲ ವ್ಯಾಪಾರ ಕಂಡುಬಂದಿದೆ
>> ಬಲವಾದ ಒತ್ತಡದ ಹಿನ್ನೆಲೆ ಡಾಲರ್ ಸೂಚ್ಯಂಕ, 104 ಮೀರಿ ಮುಂದುವರಿಯುತ್ತಿದೆ.
>> ದೀರ್ಘ ವಾರಾಂತ್ಯದ ನಂತರ ಅಮೆರಿಕದ ಮಾರುಕಟ್ಟೆಗಳು ಮಂಗಳವಾರ ತೆರೆದುಕೊಳ್ಳಲಿವೆ.
>> ಸಾಲದ ಮಿತಿಯನ್ನು ಹೆಚ್ಚಿಸುವ ಬಲವಾದ ಸಾಧ್ಯತೆಯ ಹಿನ್ನೆಲೆ ಕಚ್ಚಾ ತೈಲ ಬಲ ಪಡೆದುಕೊಂಡಿದೆ.
>> ಆದಾಗ್ಯೂ, ಫೆಡ್‌ನ ಬಡ್ಡಿದರಗಳು ಹೆಚ್ಚಾಗುವ ಭೀತಿಯ ಹಿನ್ನೆಲೆ ಲಾಭವು ಸೀಮಿತವಾಗಿತ್ತು.
>> ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಗೆ ಹಿನ್ನಡೆಯಾಗಿದೆ
>> ಶಾಂಘೈ ಮೆಟಲ್ಸ್ ಲಾಭದೊಂದಿಗೆ ವಹಿವಾಟನ್ನು ನಿಲ್ಲಿಸಿದೆ, UK ನಲ್ಲಿ ಬ್ಯಾಂಕ್ ರಜೆಯ ಕಾರಣ LME ನಾಳೆ ಅಂತ್ಯವಾಗಲಿದೆ.
>> ಶಾಂಘೈ ತಾಮ್ರ ಮತ್ತು ಸತುವು ಶೇ. 2 ರಿಂದ 2.5% ರಷ್ಟು ಲಾಭದ ಜೊತೆಗೆ ವಹಿವಾಟನ್ನು ನಿಲ್ಲಿಸಲಿವೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News