NRI: ಅಬ್ಬಬ್ಬಾ…! ಜಸ್ಟ್ 5 ತಿಂಗಳಲ್ಲಿ ಭಾರತದಿಂದ ಚೀನಾಕ್ಕೆ ತೆರಳಿದ ಜನರ ಸಂಖ್ಯೆ ಇಷ್ಟೊಂದಾ?

China Issued 60000 visas to Indians: ಭಾರತ ಸೇರಿದಂತೆ ವಿವಿಧ ದೇಶಗಳ ಜನರಿಗೆ ಮತ್ತೆ ಚೀನಾ ಪ್ರವೇಶಿಸಲು ಅವಕಾಶ ನೀಡುತ್ತಿರುವುದಾಗಿ ಅಲ್ಲಿನ ಸರ್ಕಾರ ಈ ವರ್ಷದ ಮಾರ್ಚ್‌ ನಲ್ಲಿ ಘೋಷಿಸಿತ್ತು. ಆ ಸಮಯದಲ್ಲಿ, ಸುಮಾರು ಮೂರು ವರ್ಷಗಳ ನಂತರ ವಿದೇಶಿಯರಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಚೀನಾ ಹೇಳಿತ್ತು.

Written by - Bhavishya Shetty | Last Updated : May 31, 2023, 10:01 AM IST
    • ಮೊದಲ ಐದು ತಿಂಗಳಲ್ಲಿ ಭಾರತೀಯರಿಗೆ 60,000 ವೀಸಾಗಳನ್ನು ನೀಡಲಾಗಿದೆ
    • ಚೀನಾ ಪ್ರವೇಶಿಸಲು ಅವಕಾಶ ನೀಡುತ್ತಿರುವುದಾಗಿ ಅಲ್ಲಿನ ಸರ್ಕಾರ ಈ ವರ್ಷದ ಮಾರ್ಚ್‌ ನಲ್ಲಿ ಘೋಷಿಸಿತ್ತು.
    • ಎಲ್ಲಾ ವೀಸಾಗಳು ಮಾನ್ಯವಾಗಿರುತ್ತವೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಘೋಷಿಸಿದೆ
NRI: ಅಬ್ಬಬ್ಬಾ…! ಜಸ್ಟ್ 5 ತಿಂಗಳಲ್ಲಿ ಭಾರತದಿಂದ ಚೀನಾಕ್ಕೆ ತೆರಳಿದ ಜನರ ಸಂಖ್ಯೆ ಇಷ್ಟೊಂದಾ?  title=
China Visa

China Issued 60000 visas to Indians: ಭಾರತೀಯರಿಗೆ ವೀಸಾ ವಿತರಣೆಗೆ ಸಂಬಂಧಿಸಿದಂತೆ ಚೀನಾ ಇತ್ತೀಚೆಗೆ ಹಲವು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಈ ವರ್ಷದ ಮೊದಲ ಐದು ತಿಂಗಳಲ್ಲಿ ಭಾರತೀಯರಿಗೆ 60,000 ವೀಸಾಗಳನ್ನು ನೀಡಲಾಗಿದೆ. ಈ ಬಗ್ಗೆ ಭಾರತದಲ್ಲಿನ ಚೀನಾ ರಾಯಭಾರಿ ಕಚೇರಿಯ ಪ್ರತಿನಿಧಿ ವಾಂಗ್ ಝೋಜಿಯಾನ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: IPL ನಲ್ಲಿ ಧೂಳೆಬ್ಬಿಸಿದ್ದ ಈ ಆಟಗಾರ 8 ವರ್ಷಗಳ ಬಳಿಕ Team Indiaಗೆ ಮತ್ತೆ ಎಂಟ್ರಿ!

ಶಿಕ್ಷಣ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಕುಟುಂಬ ಸದಸ್ಯರ ಭೇಟಿಯಂತಹ ಕಾರಣಗಳಿಗಾಗಿ ಚೀನಾದ ರಾಯಭಾರಿ ಕಚೇರಿಗಳು ಈ ವರ್ಷ ಭಾರತೀಯರಿಗೆ 60,000 ವೀಸಾಗಳನ್ನು ನೀಡಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: NIA Raid: ಭಯೋತ್ಪಾದಕ ಕೃತ್ಯಕ್ಕೆ ಹಣ ಬಳಕೆ ಆರೋಪ: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ NIA ದಾಳಿ

ಭಾರತ ಸೇರಿದಂತೆ ವಿವಿಧ ದೇಶಗಳ ಜನರಿಗೆ ಮತ್ತೆ ಚೀನಾ ಪ್ರವೇಶಿಸಲು ಅವಕಾಶ ನೀಡುತ್ತಿರುವುದಾಗಿ ಅಲ್ಲಿನ ಸರ್ಕಾರ ಈ ವರ್ಷದ ಮಾರ್ಚ್‌ ನಲ್ಲಿ ಘೋಷಿಸಿತ್ತು. ಆ ಸಮಯದಲ್ಲಿ, ಸುಮಾರು ಮೂರು ವರ್ಷಗಳ ನಂತರ ವಿದೇಶಿಯರಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಚೀನಾ ಹೇಳಿತ್ತು. ಭಾರತದಲ್ಲಿನ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್‌ಗಳು ನಂತರ ವೀಸಾ ನೀಡುವಿಕೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದವು. ಇನ್ನು ಮಾರ್ಚ್ 28, 2020 ರ ಮೊದಲು ನೀಡಲಾದ ಎಲ್ಲಾ ವೀಸಾಗಳು ಮಾನ್ಯವಾಗಿರುತ್ತವೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಘೋಷಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News