ನವದೆಹಲಿ: ವಾಸ್ತುಶಾಸ್ತ್ರದ ಪರಿಹಾರಗಳು ತುಂಬಾ ಪ್ರಾಮುಖ್ಯತೆ ಹೊಂದಿದೆ. ವಾಸ್ತು ಪ್ರಕಾರ ವಸ್ತುಗಳ ನಿರ್ವಹಣೆ ನಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯ ಮುಖ್ಯ ದ್ವಾರದ ನೇರ ಸಂಬಂಧವು ತಾಯಿ ಲಕ್ಷ್ಮಿದೇವಿಯೊಂದಿಗಿರುತ್ತದೆ ಎಂದು ನಂಬಲಾಗಿದೆ. ನೀವು ಮುಖ್ಯ ಬಾಗಿಲಲ್ಲಿ ಕೆಲವು ಪರಿಹಾರ ಕ್ರಮ ಮಾಡಿದ್ರೆ, ಲಕ್ಷ್ಮಿದೇವಿಯ ಆಶೀರ್ವಾದವು ನಿಮಗೆ ದೊರೆಯುತ್ತದೆ. ಇದರಿಂದ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆಯಿರುವುದಿಲ್ಲ. ಈ ಪರಿಹಾರ ಕ್ರಮಗಳ ಬಗ್ಗೆ ತಿಳಿಯಿರಿ.
ತಾಯಿ ಲಕ್ಷ್ಮಿದೇವಿಯ ಪರಿಹಾರ ಕ್ರಮಗಳು!
ವಾಸ್ತುಪ್ರಕಾರ ಗಣೇಶನ ಮೂರ್ತಿಯನ್ನು ಮನೆಯ ಮುಖ್ಯ ಬಾಗಿಲಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನ ವಿಗ್ರಹವನ್ನು ಮನೆಯ ಮುಖ್ಯ ಬಾಗಿಲಿನಲ್ಲಿಡಬೇಕು. ಈ ರೀತಿ ವಿಗ್ರಹವನ್ನು ಇರಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ.
ಇದನ್ನೂ ಓದಿ: ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ; ಇಲ್ಲವೆ ನೋಡಿ ಸಲಹೆಗಳು
- ಲಕ್ಷ್ಮಿದೇವಿಯ ಪಾದಗಳನ್ನು ಮನೆಯ ಮುಖ್ಯ ಬಾಗಿಲಿನ ಮೇಲೆ ಇಡಬೇಕು. ಗಮನಿಸಬೇಕಾದ ವಿಷಯವೆಂದರೆ ತಾಯಿ ಲಕ್ಷ್ಮಿದೇವಿಯ ಪಾದಗಳನ್ನು ಮನೆಯೊಳಗೆ ಮಾಡಬೇಕು, ಪ್ರತಿದಿನ ಸಂಜೆ ಹಿಟ್ಟಿನ ರಂಗೋಲಿಯನ್ನು ಮಾಡುವುದು ಸಹ ಮಂಗಳಕರವಾಗಿದೆ. ಹೀಗೆ ಮಾಡುವುದರಿಂದ ಶುಭ ಫಲ ಸಿಗುತ್ತದೆ.
- ಮನೆಯ ಶಾಂತಿ ಮತ್ತು ಸಂತೋಷಕ್ಕೆ ಧಕ್ಕೆಯಾಗುತ್ತಿದ್ದರೆ, ಮನೆಯ ಮುಖ್ಯ ದ್ವಾರದಲ್ಲಿ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತುಹಾಕಬೇಕು. ಶನಿವಾರದಂದು ನಿಂಬೆ-ಮೆಣಸಿನಕಾಯಿಯನ್ನು ಕಪ್ಪು ದಾರದಲ್ಲಿ ಕಟ್ಟಿ ಅದನ್ನು ಮುಖ್ಯ ಬಾಗಿಲಿಗೆ ಹಾಕಬೇಕು.
- ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಮೇಲೆ ತೋರಣವನ್ನು ಇಡಬೇಕು. ತೋರಣವನ್ನು ಮಾವು ಮತ್ತು ಅರಳಿ ಎಲೆಗಳಿಂದ ಮಾತ್ರ ಮಾಡಬೇಕು. ಮುಖ್ಯ ಬಾಗಿಲಿನ ಮೇಲೆ ತೋರಣವನ್ನು ಇಡುವುದರಿಂದ ದುಷ್ಟ ಅಥವಾ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ. ಹೀಗೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
ಇದನ್ನೂ ಓದಿ: Astro Suggestions: ನಿಮ್ಮ ಮಗುವಿಗೆ ಹಲ್ಲುಗಳು ಬರುವುದು ಕೂಡ ಶುಭ-ಅಶುಭ ಸಂಕೇತಗಳನ್ನು ನೀಡುತ್ತವೆ ನಿಮಗೆ ಗೊತ್ತಾ?
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.