Hair on Body Indication: ಸಾಮುದ್ರಿಕ ಶಾಸ್ತ್ರದ ಪ್ರಕಾರ, ನಮ್ಮ ದೇಹದ ರಚನೆ, ಮಚ್ಚೆಗಳು ಮತ್ತು ನಮ್ಮ ದೇಹದ ವಿವಿಧ ಭಾಗಗಳಲ್ಲಿರುವ ಕೂದಲು, ನಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತವೆ. ಸಾಮಾನ್ಯವಾಗಿ, ದೇಹದ ಪ್ರತಿಯೊಂದು ಭಾಗದಲ್ಲೂ ತಿಳಿ ಕೂದಲುಗಳು ಅಥವಾ ರೋಮ ಕಂಡುಬರುತ್ತದೆ. ಕೆಲವರ ಕಾಲಿನಲ್ಲಿ ಹೆಚ್ಚು ಕೂದಲು ಇದ್ದರೆ, ಕೆಲವರ ಕೈಯಲ್ಲಿ ಹೆಚ್ಚು ಕೂದಲು ಇರುತ್ತದೆ. ಪುರುಷರ ದೇಹದಲ್ಲಿ ಮಹಿಳೆಯರಿಗಿಂತ ಹೆಚ್ಚು ಕೂದಲು ಇರುತ್ತದೆ.
ಇದನ್ನೂ ಓದಿ: Hair Care Tips: ಲವಂಗ ಕೂದಲನ್ನು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡುತ್ತದೆ, ಇದನ್ನು ಹೀಗೆ ಬಳಸಿ!
ಸಾಮುದ್ರಿಕ ಶಾಸ್ತ್ರದಲ್ಲಿ ಹೇಳುವಂತೆ ದೇಹದ ಈ ಭಾಗದಲ್ಲಿ ಕೂದಲಿದ್ದರೆ ಅದು ಶುಭ ಸೂಚನೆಯನ್ನು ನೀಡುತ್ತವೆಯಂತೆ, ಶ್ರೀಮಂತಿಕೆ, ನೆಮ್ಮದಿ, ಅದೃಷ್ಟವೆಲ್ಲವೂ ಕೈಹಿಡಿಯುತ್ತದೆ ಎಂದು ಉಲ್ಲೇಖಿಸಲಾಗಿದೆ.
ಮಹಿಳೆಯರು ತಮ್ಮ ತೋಳುಗಳಲ್ಲಿ ಕೂದಲನ್ನು ಹೊಂದಿದ್ದರೆ ಮಂಗಳಕರ: ಕೆಲವು ಮಹಿಳೆಯರು ತಮ್ಮ ತೋಳುಗಳಲ್ಲಿ ಕೂದಲನ್ನು ಹೊಂದಿರುತ್ತಾರೆ. ಅಂತಹ ಮಹಿಳೆಯರು ಅದೃಷ್ಟದಲ್ಲಿ ಬಹಳ ಶ್ರೀಮಂತರು ಎಂದು ನಂಬಲಾಗಿದೆ. ಅಲ್ಲದೆ, ಅಂತಹ ಮಹಿಳೆಯರು ಉತ್ಸಾಹದಿಂದ ಪ್ರತಿ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಮತ್ತು ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡುವುದಿಲ್ಲವಂತೆ.
ಎದೆಯ ಮೇಲೆ ಕೂದಲು- ಎದೆಯ ಮೇಲೆ ಕೂದಲು ಇರುವವರು ಸಂತೃಪ್ತ ವ್ಯಕ್ತಿತ್ವದವರು ಎಂದು ಸಾಮುದ್ರಿಕ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಜನರಿಗೆ ಎಂದಿಗೂ ಹಣದ ಕೊರತೆಯಿರುವುದಿಲ್ಲ.
ಬೆನ್ನಿನ ಮೇಲೆ ಕೂದಲು- ಸಾಮುದ್ರಿಕ ಶಾಸ್ತ್ರದ ಪ್ರಕಾರ ಬೆನ್ನಿನ ಭಾಗದಲ್ಲಿ ಕೂದಲು ಇದ್ದರೆ, ಅಂತಹ ಜನರು ಧೈರ್ಯಶಾಲಿಗಳಾಗಿರುತ್ತಾರೆ. ಈ ಜನರನ್ನು ನಿಷ್ಠಾವಂತ ಮತ್ತು ಜವಾಬ್ದಾರಿಯುತ ವ್ಯಕ್ತಿತ್ವದವರು ಎಂದು ಪರಿಗಣಿಸಲಾಗುತ್ತದೆ. ಬೆನ್ನಿನ ಮೇಲೆ ಕೂದಲು ಇರುವವರು ಸಂಪತ್ತಿನ ದೃಷ್ಟಿಯಿಂದಲೂ ತುಂಬಾ ಅದೃಷ್ಟವಂತರಂತೆ
ಕಿವಿಯ ಮೇಲೆ ಕೂದಲು: ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಯ ಮೇಲೆ ಅಥವಾ ಒಳಗೆ ಕೂದಲು ಇದ್ದರೆ ಬಹಳ ಅದೃಷ್ಟವಂತೆ. ಅವರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎನ್ನಲಾಗುತ್ತದೆ.
ಇದನ್ನೂ ಓದಿ: ಈ ಘಟನೆಗಳು ನಿಮಗೆ ಶ್ರೀಮಂತಿಕೆ ಬರುವ ಶುಭ ಸೂಚನೆ ನೀಡುತ್ತವೆ..! ಸೂಕ್ಷ್ಮವಾಗಿ ಗಮನಿಸಿ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.