ಫ್ರೀ ಕೊಡು ಅಂತ ಯಾರು ಕೇಳಿದ್ರು..? ಮಹಿಳೆಯರ ಪ್ರಶ್ನೆ

ವಿದ್ಯುತ್ ಬಿಲ್ ಮೂರು ಪಟ್ಟು ಜಾಸ್ತಿ ಬಂದಿದೆ. ನಾವೇನು ಇವರಿಗೆ ಫ್ರೀ ಕೊಡು ಅಂತ ಕೇಳಿದ್ವೇನಣ್ಣ.ಬಡವರು ಬಗ್ಗರಿಗೆ ಮನೆಗಳನ್ನ ಕೊಡಬಹುದಿತ್ತು, ಆಸ್ಪತ್ರೆಗಳಳನ್ನ ಕೊಡಬಹುದಿತ್ತು. ಫ್ರೀ ಮಾಡಿ ಅಂತ ನಾವೇನಾದರೂ ಕೇಳಿದ್ವಾ ? ಈಗ ನಮಗೆ ಸಮಸ್ಯೆಯಾಗುತ್ತಿದೆ ಎಂದು ಮಹಿಳೆಯರು ಮಾಜಿ ಶಾಸಕ ರೇಣುಕಾಚಾರ್ಯ ಬಳಿ ತಮ್ಮ ಸಂಕಷ್ಟವನ್ನ ತೋಡಿಕೊಂಡಿದ್ದಾರೆ.

Written by - Manjunath N | Last Updated : Jun 16, 2023, 10:00 PM IST
  • ನಾವು ಕೂಲಿ ಮಾಡಿಕೊಂಡು ಬದುಕುವವರು ಇಷ್ಟೊಂದು ಬಿಲ್ ನ್ನ ನಾವು ಹೇಗೆ ಕಟ್ಟುವುದು ಎಂದು ಪ್ರಶ್ನೆಯನ್ನ ಮಾಡಿದ್ದಾರೆ.
  • ಇನ್ನು ಅಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಇವರು ಮೊದಲು ಕೇಂದ್ರ ಸರ್ಕಾರದ ಬಳಿ ಮಾತನಾಡಿದ್ದರಾ?
  • ಎಲೆಕ್ಷನ್ ಮುಂಚೆ ಇವರು ಎಲ್ಲವನ್ನ ಹೇಳಿಕೊಂಡು ಈಗ ಈ ರೀತಿ ಮಾಡಿದರೆ ಎನ್ನುತ್ತಿದ್ದಾರೆ.
ಫ್ರೀ ಕೊಡು ಅಂತ ಯಾರು ಕೇಳಿದ್ರು..? ಮಹಿಳೆಯರ ಪ್ರಶ್ನೆ title=

ದಾವಣಗೆರೆ: ವಿದ್ಯುತ್ ಬಿಲ್ ಮೂರು ಪಟ್ಟು ಜಾಸ್ತಿ ಬಂದಿದೆ. ನಾವೇನು ಇವರಿಗೆ ಫ್ರೀ ಕೊಡು ಅಂತ ಕೇಳಿದ್ವೇನಣ್ಣ.ಬಡವರು ಬಗ್ಗರಿಗೆ ಮನೆಗಳನ್ನ ಕೊಡಬಹುದಿತ್ತು, ಆಸ್ಪತ್ರೆಗಳಳನ್ನ ಕೊಡಬಹುದಿತ್ತು. ಫ್ರೀ ಮಾಡಿ ಅಂತ ನಾವೇನಾದರೂ ಕೇಳಿದ್ವಾ ? ಈಗ ನಮಗೆ ಸಮಸ್ಯೆಯಾಗುತ್ತಿದೆ ಎಂದು ಮಹಿಳೆಯರು ಮಾಜಿ ಶಾಸಕ ರೇಣುಕಾಚಾರ್ಯ ಬಳಿ ತಮ್ಮ ಸಂಕಷ್ಟವನ್ನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ನನ್ನ ರಾಜಕೀಯ ನಿಲುವಿನಲ್ಲಿ ರಾಜಿಯಿಲ್ಲ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮಕ್ಕೆ ರೇಣುಕಾಚಾರ್ಯ ಭೇಟಿ ನೀಡಿದ ವೇಳೆ ಮಹಿಳೆಯರು ಅಳಲನ್ನ ಹೇಳಿಕೊಂಡಿದ್ಧಾರೆ. ನಾವು ಕೂಲಿ ಮಾಡಿಕೊಂಡು ಬದುಕುವವರು ಇಷ್ಟೊಂದು ಬಿಲ್ ನ್ನ ನಾವು ಹೇಗೆ ಕಟ್ಟುವುದು ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಇನ್ನು ಅಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಇವರು ಮೊದಲು ಕೇಂದ್ರ ಸರ್ಕಾರದ ಬಳಿ ಮಾತನಾಡಿದ್ದರಾ? ಎಲೆಕ್ಷನ್ ಮುಂಚೆ ಇವರು ಎಲ್ಲವನ್ನ ಹೇಳಿಕೊಂಡು ಈಗ ಈ ರೀತಿ ಮಾಡಿದರೆ ಹೇಗೆ ಎನ್ನುತ್ತಿದ್ದಾರೆ.

ಮತ್ತೊಂದೆಡೆ ನಮಗೆ ಏನು ಕೊಡುತ್ತಿಲ್ಲಣ್ಣ,ಎಲ್ಲ ನಮ್ಮ ಮೇಲೇನೆ ಹೊರೆ ಮಾಡುತ್ತಿದ್ದಾರೆ.ನಾವು ಅವರಿಗೆ ಓಟ್ ಹಾಕಿದ್ದೇವೆ.ಅವರಷ್ಟೆ ಓಟ್ ಹಾಕಿದ್ದಾರಾ ?.ನಾವು ಏನು ಮಾಡೋನಣ್ಣ ಎಂದು ರೇಣುಕಾಚಾರ್ಯ ಮುಂದೆ ಮಹಿಳೆಯರ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: 'ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ಮತದಾರರು ಬಿಜೆಪಿಯ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿರುವುದು'

ಈ ವೇಳೆ ಎಂ ಪಿ ರೇಣುಕಾಚಾರ್ಯ ಕೂಡ ಸರ್ಕಾರದ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಈಗ ಸರ್ಕಾರ ವಿದ್ಯುತ್ ಬಿಲ್ ನ್ನ ಒಂದಕ್ಕೆ ಐದು ಪಟ್ಟು ಜಾಸ್ತಿ ಮಾಡಿದೆ. ಇವರು ಕೇಂದ್ರ ಸರ್ಕಾರವನ್ನ ಕೇಳದೆ ಈಗ ಅಕ್ಕಿಯಲ್ಲಿ ಕೂಡ ಗೊಂದಲ ಮಾಡಿಕೊಂಡಿದ್ದಾರೆ.ಉಚಿತ ಬಸ್ ಪ್ರಯಾಣ ಎಂದು ಹೇಳಿದ್ದಾರೆ. ಸರಿಯಾಗಿ ಬಸ್ ಗಳನ್ನ ಕೂಡ ಹೆಚ್ಚು ಬಿಡುತ್ತಿಲ್ಲ.ಬಸ್ ಗಾಗಿ ಮಹಿಳೆಯರು ಹೊಡೆದಾಡುವ ಪರಿಸ್ಥಿತಿ ಬಂದಿದೆ. ಹೀಗಾಗಿ, ನಾವು ಈ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜನಾಂದೋಲನ ಮಾಡುತ್ತೇವೆ ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News