Vegetable Price: ತರಕಾರ ಬೆಲೆ ನೋಡಿ ಗ್ರಾಹಕರು ಸುಸ್ತೋ ಸುಸ್ತು

Vegetable Price Today: ಎಲ್ಲೆಡೆ ತರಕಾರಿ ಬೆಲೆ ಆಗಸಕ್ಕೇರಿದ್ದು ಇದು ಜನ ಸಾಮಾನ್ಯರ ಮನೆಯ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರಿದೆ. 

Written by - Yashaswini V | Last Updated : Jul 5, 2023, 10:08 AM IST
  • ದೇಶಾದ್ಯಂತ ತರಕಾರಿಗಳ ಬೆಲೆಗಳು ತೀವ್ರವಾಗಿ ಹೆಚ್ಚುತ್ತಿವೆ.
  • ತರಕಾರಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ತರಕಾರ ಬೆಲೆ ನೋಡಿ ಗ್ರಾಹಕರು ಸುಸ್ತೋ ಸುಸ್ತು ಎನ್ನುತ್ತಿದ್ದಾರೆ.
Vegetable Price: ತರಕಾರ ಬೆಲೆ ನೋಡಿ ಗ್ರಾಹಕರು ಸುಸ್ತೋ ಸುಸ್ತು  title=

Vegetable Price Today: ಎಲ್ಲಾರು ಮಾಡುವುದು ಹೊಟ್ಟೆಗಾಗಿ... ಆದರೆ, ಪ್ರಸ್ತುತ ಮನೆಯ ದಿನಸಿ ಸಾಮಾಗ್ರಿಗಳು, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರು ಜೀವನ ನಡೆಸುವುದೇ ಹೇಗಪ್ಪಾ ಎಂಬಂತಾಗಿದೆ. ದಿನೇ ದಿನೇ ಗಗನಾಮುಖಿಯಾಗುತ್ತಿರುವ ತರಕಾರಿ ಬೆಲೆ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. 

ಹೌದು, ಒಂದೆಡೆ ಸರ್ಕಾರದ ಪುಕ್ಕಟೆ ಗ್ಯಾರಂಟಿಗಳನ್ನು ಪಡೆಯಲು ಜನರು ಉತ್ಸುಕರಾಗಿದ್ದಾರೆ. ಇನ್ನೊಂದೆಡೆ, ಜನರ ಜೀವನಕ್ಕೆ ಬೇಕಾದ ಅತ್ಯವಶ್ಯಕ ವಸ್ತುಗಳ ಬೆಲೆ ಗಗನ ಚುಂಬಿಸುತ್ತಿರುವುದರಿಂದ ಹಣ್ಣು-ತರಕಾರಿ, ಅಕ್ಕಿ, ಬೇಳೆ, ಕಾಳುಗಳ ಬೆಲೆ ಹೆಚ್ಚಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸಾವಿರಾರು ರೂಪಾಯಿ ದಿನಸಿ, ತರಕಾರಿ ಕೊಂಡರೂ ಕೂಡ ಒಂದು ಸಣ್ಣ ಬ್ಯಾಗ್ ಕೂಡ ತುಂಬಲ್ಲ ಅಂತಾರೆ ಸಾರ್ವಜನಿಕರು. 

ಇದನ್ನೂ ಓದಿ- Gold Price Today: ಆಷಾಢ ಬಂದ್ರೂ ಇಳಿಕೆ ಆಗಲೇ ಇಲ್ಲ ಹಳದಿ ಲೋಹ..!!

ದೇಶಾದ್ಯಂತ ತರಕಾರಿಗಳ ಬೆಲೆಗಳು ತೀವ್ರವಾಗಿ ಹೆಚ್ಚುತ್ತಿವೆ. ತರಕಾರಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ  ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ತರಕಾರ ಬೆಲೆ ನೋಡಿ ಗ್ರಾಹಕರು ಸುಸ್ತೋ ಸುಸ್ತು ಎನ್ನುತ್ತಿದ್ದಾರೆ. ಮೆಟ್ರೋ ನಗರಗಳಲ್ಲಿ ಟೊಮೆಟೊ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ರೂ.150 ತಲುಪಿದೆ. ಕೆಲ ದಿನಗಳ ಹಿಂದೆ ರೂ.100ರಿಂದ ರೂ.120ರಷ್ಟಿದ್ದ ಟೊಮೆಟೊ ಬೆಲೆ ಇದೀಗ ಅದಕ್ಕಿಂತಲೂ ಹೆಚ್ಚಾಗಿದೆ. ಈ ದಿನ ಬುಧವಾರ (05 ಜುಲೈ 2023) ದಂದು ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ಎಂದು ತಿಳಿಯೋಣ... 

ಇದನ್ನೂ ಓದಿ- ಫ್ರೀ ರೇಶನ್ ಜೊತೆಗೆ ಈ ಸೌಲಭ್ಯ ಕೂಡಾ ಇನ್ನು ಸಂಪೂರ್ಣ ಉಚಿತ ! ಪಡಿತರ ಚೀಟಿದಾರರಿಗೆ ಜಾಕ್ ಪಾಟ್

ಎಪಿಎಂಸಿಯಲ್ಲಿ ಇಂದು ತರಕಾರಿಗಳ ಬೆಲೆ ಎಷ್ಟಿದೆ ಎಂದು ನೋಡೊದಾದ್ರೆ ...
ತರಕಾರಿ ಹೆಸರು  ಬೆಲೆ (ರೂಪಾಯಿಗಳಲ್ಲಿ) 
ಟೋಮಾಟೋ  109-121
ಈರುಳ್ಳಿ‌ 59-65 
ಹಸಿರು ಮೆಣಸಿನಕಾಯಿ 62-69
ಬಿಟ್ರೋಟ್ 52-57
ಆಲೂಗಡ್ಡೆ 37-41
ಬೇಬಿ ಕಾರ್ನ್  64 - 71
ದಪ್ಪ‌ಮೆಣಸಿನ‌ಕಾಯಿ 55-61
ಹುರುಳಿಕಾಯಿ 55- 61
ಕ್ಯಾರೆಟ್ 55- 61 
ಹೂ ಕೂಸು 31-34 
ನುಗ್ಗೆಕಾಯಿ 115-127 
ದಪ್ಪ ಬದನೆಕಾಯಿ‌ 32-36
ಬೆಳ್ಳುಳ್ಳಿ 44- 48 
ಶುಂಠಿ 81- 89
ಬಟಾಣಿ 87-97 
ಬೆಂಡೆಕಾಯಿ 44-48
ಮೂಲಂಗಿ 36-39

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News