ಕೂದಲು ಉದುರುವುದು ನಿಯಂತ್ರಿಸುವುದು ಮಾತ್ರವಲ್ಲ ಆ ಜಾಗದಲ್ಲಿ ಕೂದಲು ಬೆಳೆಯುವಂತೆಯೂ ನೋಡಿಕೊಳ್ಳಬೇಕಾಗುತ್ತದೆ.
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿ ಬಹುತೇಕರು ಎದುರಿಸುವ ಸಮಸ್ಯೆ. ಕೂದಲು ಉದುರುವುದಕ್ಕೆ ನಾನಾ ಕಾರಣಗಳಿವೆ. ನಾವು ಸೇವಿಸುವ ಆಹಾರ, ಅನುಸರಿಸುವ ಲೈಫ್ ಸ್ಟೈಲ್, ಫ್ಯಾಷನ್ ಹಿಂದೆ ಬಿದ್ದು ಉಪಯೋಗಿಸುವ ಶಾಂಪೂ, ಸಾಬೂನು, ಸ್ಪ್ರೇ, ಜೆಲ್ ಇವುಗಳೆಲ್ಲವೂ ಇದಕ್ಕೆ ಕಾರಣ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಒಮ್ಮೆ ಕೂದಲು ಉದುರಲು ಆರಂಭಿಸಿದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಕೂದಲು ಉದುರುವುದು ನಿಯಂತ್ರಿಸುವುದು ಮಾತ್ರವಲ್ಲ ಆ ಜಾಗದಲ್ಲಿ ಕೂದಲು ಬೆಳೆಯುವಂತೆಯೂ ನೋಡಿಕೊಳ್ಳಬೇಕಾಗುತ್ತದೆ. ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತವೆ ಈ ವಸ್ತುಗಳು .
ತೆಂಗಿನ ಎಣ್ಣೆ ವಿಟಮಿನ್ ಇಯಲ್ಲಿ ಸಮೃದ್ದವಾಗಿದೆ. ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸಲು ತೆಂಗಿನೆಣ್ಣೆ ಸಹಾಯ ಮಾಡುತ್ತದೆ. ಈರುಳ್ಳಿ ಎಣ್ಣೆ ಕೂದಲು ಉದುರುವುದನ್ನು ತಡೆಯುವುದಲ್ಲದೆ ಕೂದಲಿನ ಬೆಳೆವಣಿಗೆಗೆ ಸಹಾಯ ಮಾಡುತ್ತದೆ.
ಮದರಂಗಿ : ಸಾಮಾನ್ಯವಾಗಿ ಕೂದಲಿಗೆ ಬಣ್ಣ ನೀಡಲು ಇದನ್ನೂ ಬಳಸಲಾಗುತ್ತದೆ. ಆದರೆ ಇದು ಕೂದಲ ಬೆಳವಣಿಗೆಗೆ ಕೂಡಾ ಸಹಾಯ ಮಾಡುತ್ತದೆ.
ಮೊಟ್ಟೆ : ಮೊಟ್ಟೆಯ ಲೋಳೆಯನ್ನು ತೆಂಗಿನ ಎಣ್ಣೆಯ ಜೊತೆ ಬೆರೆಸಿ ಕೂದಲಿಗೆ ಮಸಾಜ್ ಮಾಡಿಕೊಂಡರೆ ಬೋಳು ತಲೆ ಸಮಸ್ಯೆ ನಿವಾರಿಸಬಹುದು.
ಚಕ್ಕೆ ಮತ್ತು ಆಲಿವ್ ಆಯಿಲ್ : ಚಕ್ಕೆ ಪುಡಿಯನ್ನು ಆಲಿವ್ ಆಯಿಲ್ ಜೊತೆ ಬೆರೆಸಿ ಈ ಮಿಶ್ರಣವನ್ನು ನೆತ್ತಿಗೆ, ಕೂದಲಿಗೆ ಹಚ್ಚಿದರೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುತ್ತದೆ.
ತೆಂಗಿನೆಣ್ಣೆ : ಕೂದಲು ಉದುರದಂತೆ ತಡೆಯಲು ಮತ್ತು ಕೂದಲು ಬೆಳೆಯಲು ತೆಂಗಿನೆಣ್ಣೆ ನೈಸರ್ಗಿಕ ಪರಿಹಾರ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)