ಮುಂಬೈ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ.
A formidable total at the Wankhede thanks to QDK's sublime 81 💙
Let's defend this, boys ✌️#ESAday #OneFamily #CricketMeriJaan #MumbaiIndians #ESA #MIvRR @ril_foundation @QuinnyDeKock69 pic.twitter.com/6BbNZHtM2S
— Mumbai Indians (@mipaltan) April 13, 2019
ಆರಂಭಿಕ ಆಟಗಾರರಾಗಿ ಮೈದಾನಕ್ಕೆ ಇಳಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್ ಗೆ 96 ರನ್ ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಭದ್ರ ಬುನಾಧಿ ಹಾಕಿದರು.ರೋಹಿತ್ ಶರ್ಮಾ 32 ಎಸೆತಗಳಲ್ಲಿ 47 ರನ್ ಗಳಿಸಿದರೆ ಡಿಕಾಕ್ 81 ರನ್ ಗಳಿಸಿದರು.ಇದರಲ್ಲಿ ಭರ್ಜರಿ ನಾಲ್ಕು ಸಿಕ್ಸರ್ ಹಾಗೂ ಆರು ಬೌಂಡರಿಗಳ ಮೂಲಕ ರಾಜಸ್ತಾನದ ಬೌಲರ್ ಗಳಿಗೆ ನೀರಿಳಿಸಿದರು.
Sensational from QDK!
A well compiled fifty from just 34 balls 👏👏👏#OneFamily #CricketMeriJaan #MumbaiIndians #MIvRR @ril_foundation @QuinnyDeKock69 pic.twitter.com/boGfiEWCjU
— Mumbai Indians (@mipaltan) April 13, 2019
ನಂತರ ಬಂದಂತಹ ಸುರ್ಯಕುಮಾರ್ ಯಾದವ್ , ಕಿರಣ್ ಪೋಲ್ಲಾರ್ಡ್ ಬೇಗನೆ ವಿಕೆಟ್ ಒಪ್ಪಿಸಿದರು, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 11 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 187 ಕ್ಕೆ ಹೆಚ್ಚಿಸುವಂತೆ ಮಾಡಿದರು. ರಾಜಸ್ತಾನದ ತಂಡದ ಪರ ಜೋಫ್ರಾ ಆರ್ಚರ್ ಅವರು ಮೂರು ವಿಕೆಟ್ ಗಳನ್ನು ತೆಗೆದುಕೊಳ್ಳುವ ಮೂಲಕ ಯಶಸ್ವಿ ಬೌಲರ್ ಎನಿಸಿದರು.
ಈಗ ಸದ್ಯ ರಾಜಸ್ತಾನ 6.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ.