Shivratri 2023: ಈ ಬಾರಿಯ ಶ್ರಾವಣ ಶಿವರಾತ್ರಿಯ ದಿನ ನಿರ್ಮಾಣಗೊಳ್ಳುತ್ತಿದೆ 'ವೃದ್ಧಿ ಯೋಗ', ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ!

ಶ್ರಾವಣ ಶಿವರಾತ್ರಿಯ ದಿನ ದೇವಾಧಿದೇವ ಮಹಾದೇವನನ್ನು ವಿಧಿ-ವಿಧಾನಗಳ ಮೂಲಕ ಪೂಜಿಸುವುದರಿಂದ ಶಿವ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ. ಈ ಬಾರಿ ಶಿವರಾತ್ರಿಯ ದಿನ ವೃದ್ಧಿಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಈ ರಾಶಿಗಳ ಜನರ ಮೇಲೆ ಶಿವನ ವಿಶೇಷ ಕೃಪೆ ಇರಲಿದೆ.
 

ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯ ದಿನ ಶ್ರಾವಣ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಎರಡು ಶ್ರಾವಣ ಶಿವರಾತ್ರಿಗಳು ಬಂದಿವೆ. ಮೊದಲ ಶಿವರಾತ್ರಿ ಜುಲೈ 15 ರಂದು ಬೀಳುತ್ತಿದೆ. ಈ ದಿನ ವಿಧಿವಿಧಾನಗಳ ಮೂಲಕ ಶಿವನನ್ನು ಆರಾಧಿಸುವ ಪರಂಪರೆ ನಡೆದುಕೊಂಡು ಬಂದಿದೆ. ಈ ಬಾರಿ ಶಿವರಾತ್ರಿಯ ದಿನ ಅತ್ಯಂತ ಅದ್ಭುತ ಮತ್ತು ಶುಭವಾಗಿರುವ 'ವೃದ್ಧಿ ಯೋಗ' ರೂಪುಗೊಳ್ಳುತ್ತಿದೆ. ಇದಲ್ಲದೆ ಮೃಗಶೀರ್ಷ ಯೋಗ ಕೂಡ ರೂಪುಗೊಳ್ಳುತ್ತಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಶಿವರಾತ್ರಿ ಕೆಲ ರಾಶಿಗಳಿಗೆ ತುಂಬಾ ವಿಶೇಷವಾಗಿರಲಿದೆ. ಬನ್ನಿ ಯಾವ ರಾಶಿಗಳ ಜನರ ಮೇಲೆ ಈ ಬಾರಿ ಶಿವನ ವಿಶೇಷ ಕೃಪೆ ಇರಲಿದೆ ತಿಳಿದುಕೊಳ್ಳೋಣ,

 

ಇದನ್ನೂ ಓದಿ-ಆದಿತ್ಯನ ಮನೆಯಲ್ಲಿ ಮಂಗಳ-ಶುಕ್ರರ ಕೃಪೆಯಿಂದ ಅದ್ಭುತ ಯೋಗ, 3 ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಶ್ರಾವಣ ಶಿವರಾತ್ರಿಯ ದಿನ ದೇವಾಧಿದೇವ ಮಹಾದೇವನನ್ನು ವಿಧಿ-ವಿಧಾನಗಳ ಮೂಲಕ ಪೂಜಿಸುವುದರಿಂದ ಶಿವ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ. ಈ ಬಾರಿ ಶಿವರಾತ್ರಿಯ ದಿನ ವೃದ್ಧಿಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಈ ರಾಶಿಗಳ ಜನರ ಮೇಲೆ ಶಿವನ ವಿಶೇಷ ಕೃಪೆ ಇರಲಿದೆ.  

2 /5

ಸಿಂಹ ರಾಶಿ: ಶ್ರಾವಣ ಶಿವರಾತ್ರಿಯ ದಿನ ಸಿಂಹ ರಾಶಿಯ ಜಾತಕದವರ ಮೇಲೆ ಶಿವನ ವಿಶೇಷ ಕೃಪೆ ಇರಲಿದೆ. ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಇದರ ಜೊತೆಗೆ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಯೋಗದ ಜೊತೆಗೆ ಧನಲಾಭ ಕೂಡ ಉಂಟಾಗಲಿದೆ. ಸ್ವಂತ ಉದ್ಯಮ ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ಈ ದಿನ ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ.  

3 /5

ಧನು ರಾಶಿ: ಸಾಮಾನ್ಯವಾಗಿ ಧನು ರಾಶಿಗೆ ದೇವ ಗುರು ಬೃಹಸ್ಪತಿಯ ಆಧಿಪತ್ಯ ಇರುತ್ತದೆ. ಶಿವನ ಕೃಪೆಯಿಂದ ಹಾಳಾದ ನಿಮ್ಮ ಕೆಲಸ ಕಾರ್ಯಗಳು ಮತ್ತೆ ಕೈಗೂಡಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಕೂಡ ನಿಮಗೆ ಸಿಗಲಿದೆ. ಹೂಡಿಕೆಯ ಯೋಜನೆ ರೂಪಿಸುತ್ತಿದ್ದರೆ, ಈ ಅವಧಿಯಲ್ಲಿ ಮಾಡಲಾದ ಹೂಡಿಕೆ ಭವಿಷ್ಯದಲ್ಲಿ ನಿಮ್ಮ ಪಾಲಿಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಯಶಸ್ಸಿನ ಯೋಗ ನಿರ್ಮಾಣಗೊಳ್ಳುತ್ತಲಿವೆ. ಸಮಾಜದ ಜನರ ನಡುವೆ ನಿಮ್ಮ ಗೌರವ ಹೆಚ್ಚಾಗಲಿದೆ ಹಾಗೂ ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.  

4 /5

ಕುಂಭ ರಾಶಿ: ಶನಿ ಅಧಿಪತ್ಯದ ಕುಂಭ ರಾಶಿಯ ಮೇಲೆ ಈ ಬಾರಿ ಶಿವನ ವಿಶೇಷ ಕೃಪೆ ಇರಲಿದೆ. ಶ್ರಾವಣ ಶಿವರಾತ್ರಿಯ ದಿನ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಧನಲಾಭದ ಜೊತೆಗೆ ನಿಂತುಹೋದ ನಿಮ್ಮ ಎಲ್ಲಾ ಕೆಲಸಗಳಿಗೆ ಪುನಃ ಗತಿ ಸಿಗಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವವರ ಅನ್ವೇಷಣೆಗೆ ತೆರೆ ಬೀಳಲಿದೆ. ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)