IND vs WI: ಅಂತಿಮ ಟೆಸ್ಟ್’ಗೆ ತಂಡ ಪ್ರಕಟ: ಈ ಸ್ಟಾರ್ ಆಫ್-ಸ್ಪಿನ್ನರ್’ಗೆ ಅವಕಾಶ ಕೊಟ್ಟ ಸಮಿತಿ

West Indies team for Test Cricket: ಹೊಸ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನ ಉದ್ಘಾಟನಾ ಪಂದ್ಯದಲ್ಲಿ ಕೆರಿಬಿಯನ್ ತಂಡವು ನಿರಾಶಾದಾಯಕ ಇನ್ನಿಂಗ್ಸ್ ಮತ್ತು 141 ರನ್‌ಗಳ ಸೋಲನ್ನು ಅನುಭವಿಸಿತ್ತು.

Written by - Bhavishya Shetty | Last Updated : Jul 18, 2023, 12:59 PM IST
    • ಅಂತಿಮ ಟೆಸ್ಟ್‌ಗಾಗಿ ತಮ್ಮ 13 ಆಟಗಾರರ ತಂಡದಲ್ಲಿ ಬದಲಾವಣೆಯನ್ನು ಮಾಡಿದೆ
    • ಟೆಸ್ಟ್‌ ನಲ್ಲಿನ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವ ವೆಸ್ಟ್ ಇಂಡೀಸ್,
    • ನಿರಾಶಾದಾಯಕ ಇನ್ನಿಂಗ್ಸ್ ಮತ್ತು 141 ರನ್‌ಗಳ ಸೋಲನ್ನು ಅನುಭವಿಸಿತ್ತು
IND vs WI: ಅಂತಿಮ ಟೆಸ್ಟ್’ಗೆ ತಂಡ ಪ್ರಕಟ: ಈ ಸ್ಟಾರ್ ಆಫ್-ಸ್ಪಿನ್ನರ್’ಗೆ ಅವಕಾಶ ಕೊಟ್ಟ ಸಮಿತಿ title=
West Indies team for Final Test

West Indies team for Test Cricket: ಭಾರತ ವಿರುದ್ಧದ ಮೊದಲ ಟೆಸ್ಟ್‌ ನಲ್ಲಿನ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವ ವೆಸ್ಟ್ ಇಂಡೀಸ್, ಇದೀಗ ಟ್ರಿನಿಡಾಡ್‌ ನಲ್ಲಿ ಮುಂಬರುವ ಎರಡನೇ ಮತ್ತು ಅಂತಿಮ ಟೆಸ್ಟ್‌ಗಾಗಿ ತಮ್ಮ 13 ಆಟಗಾರರ ತಂಡದಲ್ಲಿ ಬದಲಾವಣೆಯನ್ನು ಮಾಡಿದೆ.

ಇದನ್ನೂ ಓದಿ: ತ್ರಿಶತಕ ಬಾರಿಸಿದ ಈ ಸ್ಫೋಟಕ ಬ್ಯಾಟ್ಸ್’ಮನ್’ಗೆ ನಿವೃತ್ತಿ ನೀಡಲು ಒತ್ತಾಯಿಸುತ್ತಿದೆ ಆಯ್ಕೆ ಸಮಿತಿ!

ಡೊಮಿನಿಕಾದಲ್ಲಿ ನಡೆದ ಪಂದ್ಯದಲ್ಲಿ ಪ್ರಭಾವ ಬೀರಲು ಹೆಣಗಾಡಿದ್ದ ರೇಮನ್ ರೀಫರ್ ಬದಲಿಗೆ ಯುವ ಆಫ್ ಸ್ಪಿನ್ನರ್ ಕೆವಿನ್ ಸಿಂಕ್ಲೇರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆತಿಥೇಯರು ನಿರ್ಧರಿಸಿದ್ದಾರೆ.

ಹೊಸ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನ ಉದ್ಘಾಟನಾ ಪಂದ್ಯದಲ್ಲಿ ಕೆರಿಬಿಯನ್ ತಂಡವು ನಿರಾಶಾದಾಯಕ ಇನ್ನಿಂಗ್ಸ್ ಮತ್ತು 141 ರನ್‌ಗಳ ಸೋಲನ್ನು ಅನುಭವಿಸಿತ್ತು. ಆದರೆ, ಈ ಗುರುವಾರ ಕ್ವೀನ್ಸ್ ಪಾರ್ಕ್ ಓವಲ್‌ ನಲ್ಲಿ ಎರಡನೇ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

ಡೊಮಿನಿಕಾದಲ್ಲಿ ಆಡಿದ ತಂಡವನ್ನೇ ವೆಸ್ಟ್ ಇಂಡೀಸ್ ಹೆಚ್ಚಾಗಿ ಉಳಿಸಿಕೊಂಡಿದೆ. ಒಂದು ಗಮನಾರ್ಹವಾದ ಬದಲಾವಣೆಯೆಂದರೆ ರೇಮನ್ ರೀಫರ್ ಬದಲಿಗೆ ಯುವ ಆಫ್ ಸ್ಪಿನ್ನರ್ ಕೆವಿನ್ ಸ್ಥಾನ ಪಡೆದುಕೊಂಡಿದ್ದಾರೆ

23 ವರ್ಷದ ಸಿಂಕ್ಲೇರ್ ಸೇರ್ಪಡೆ ವೆಸ್ಟ್ ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್‌ ಗೆ ಹೆಚ್ಚುವರಿ ಧೈರ್ಯವನ್ನು ನೀಡಲಿದ್ದು, ಬೌಲಿಂಗ್ ವಿಭಾಗಕ್ಕೆ ಬಲ ಬರಲಿದೆ. ಸಿಂಕ್ಲೇರ್ ಅಂತರಾಷ್ಟ್ರೀಯ ಕ್ರಿಕೆಟ್‌ ಗೆ ಹೊಸದೇನಲ್ಲ. ಈಗಾಗಲೇ ಏಳು ODI ಮತ್ತು ಆರು T20I ಗಳಲ್ಲಿ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಿದ್ದಾರೆ. ಜಿಂಬಾಬ್ವೆಯಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು.

ಗಯಾನಾದಲ್ಲಿ ಮೂಲದವರಾದ ಸಿಂಕ್ಲೇರ್ ಅವರು, ವಿಕೆಟ್‌ ಗಳನ್ನು ಪಡೆದ ನಂತರ ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡುತ್ತಾರೆ. ಟ್ರಿನಿಡಾಡ್‌ ನಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಲು ಅವರು ಪ್ಲೇಯಿಂಗ್ 11ನಲ್ಲಿ ಆಯ್ಕೆಯಾದರೆ, ಬಲಗೈ ಸ್ಪಿನ್ನರ್ ರಹಕೀಮ್ ಕಾರ್ನ್‌ವಾಲ್ ಗೆ ಜೊತೆಯಾಗಿ ಟೀಂ ಇಂಡಿಯಾಗೆ ಕಂಟಕವಾಗಿ ಕಾಡಲಿದ್ದಾರೆ. ಈ ಪಾಲುದಾರಿಕೆಯು ವೆಸ್ಟ್ ಇಂಡೀಸ್‌ ನ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಬಲಪಡಿಸುತ್ತದೆ ಎಂದು ಹೇಳಬಹುದು.

ಭಾರತ ವಿರುದ್ಧದ ಎರಡನೇ ಟೆಸ್ಟ್‌ಗೆ ವೆಸ್ಟ್ ಇಂಡೀಸ್ ತಂಡ:

ಕ್ರೈಗ್ ಬ್ರಾಥ್‌ವೈಟ್ (ಕ್ಯಾ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಜೆ, ಟಾಗೆನರೈನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೆವಿನ್ ಕೆಮರ್ ರೋಚಿ, ಕೆವಿನ್ ಕೆಮರ್ ರೋಚಿ, ಸಿಂಕ್ಲೇರ್, ಜೋಮೆಲ್ ವಾರಿಕನ್

ಇದನ್ನೂ ಓದಿ: ವಿಂಡೀಸ್ ವಿರುದ್ಧದ 2ನೇ ಟೆಸ್ಟ್’ನಿಂದ ‘ಉಪನಾಯಕ’ನಾಗಿದ್ದ ಈ ಕ್ರಿಕೆಟಿಗ ಔಟ್!

ಮೀಸಲು ಆಟಗಾರರು: ಟೆವಿನ್ ಇಮ್ಲಾಚ್, ಅಕೀಮ್ ಜೋರ್ಡಾನ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News