ಸಂಸತ್ತಿನಲ್ಲಿ ಗದ್ದಲ-ಕೋಲಾಹಲ! ಮಣಿಪುರ ವಿಚಾರದಲ್ಲಿ ತಾರಕಕ್ಕೇರಿದ ವಾದ: ಲೋಕಸಭೆ ಮುಂದೂಡಿಕೆ

Monsoon Session latest Udpate: ವಿವಿಧ ವಿಷಯಗಳ ಕುರಿತು ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಪ್ರತಿಪಕ್ಷಗಳು ಆಗಾಗ್ಗೆ ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ.

Written by - Bhavishya Shetty | Last Updated : Jul 27, 2023, 01:18 PM IST
    • ಮಣಿಪುರದ ಕುರಿತು ಸಂಸತ್ತಿನಲ್ಲಿ ಗದ್ದಲ ನಿರಂತರವಾಗಿ ಹೆಚ್ಚುತ್ತಿದೆ
    • ಹಿಂಸಾಚಾರದ ಬಗ್ಗೆ ಪ್ರತಿಪಕ್ಷಗಳು ಮತ್ತು ಕೇಂದ್ರವು ಸದನದಲ್ಲಿ ವಾಗ್ವಾದ ನಡೆಸುತ್ತಿವೆ.
    • ದಿನವೂ ಗದ್ದಲ ನಡೆಯುತ್ತಿದ್ದು, ಸದನದ ಕಲಾಪ ನಡೆಸಲು ಕಷ್ಟವಾಗುತ್ತಿದೆ.
ಸಂಸತ್ತಿನಲ್ಲಿ ಗದ್ದಲ-ಕೋಲಾಹಲ! ಮಣಿಪುರ ವಿಚಾರದಲ್ಲಿ ತಾರಕಕ್ಕೇರಿದ ವಾದ: ಲೋಕಸಭೆ ಮುಂದೂಡಿಕೆ  title=
Manipur issue in Loksabha

Monsoon Session latest Udpate: ಮಣಿಪುರದ ವಿಚಾರದಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇಂದು, ಮಣಿಪುರ ವಿಷಯದ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಭಟಿಸಲು ಸದನದಲ್ಲಿ ವಿರೋಧ ಪಕ್ಷ ಇಂಡಿಯಾ (ಐಎನ್‌ಡಿಐಎ) ಬಣದ ಎಲ್ಲಾ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದ್ದರು. ಆದರೆ, ಗದ್ದಲದಿಂದಾಗಿ ಇಂದು ಕೂಡ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಬೇಕಾಯಿತು.

ಇದನ್ನೂ ಓದಿ: Dharwad News: ಇಂದು ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಣಿಪುರದ ಕುರಿತು ಸಂಸತ್ತಿನಲ್ಲಿ ಗದ್ದಲ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ಹಲವು ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರತಿಪಕ್ಷಗಳು ಮತ್ತು ಕೇಂದ್ರವು ಸದನದಲ್ಲಿ ವಾಗ್ವಾದ ನಡೆಸುತ್ತಿವೆ. ದಿನವೂ ಗದ್ದಲ ನಡೆಯುತ್ತಿದ್ದು, ಸದನದ ಕಲಾಪ ನಡೆಸಲು ಕಷ್ಟವಾಗುತ್ತಿದೆ. ಈ ಮಧ್ಯೆ, ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕಪ್ಪು ಬಟ್ಟೆ ಧರಿಸಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಮಣಿಪುರ ವಿಚಾರವಾಗಿ ಸಂಸತ್ತಿನಲ್ಲಿ ಹೇಳಿಕೆ ನೀಡದಿರುವುದನ್ನು ವಿರೋಧಿಸಿ ಐ.ಎನ್.ಡಿ.ಐ.ಎ. ಎಲ್ಲಾ ಸಂಸದರು ಕಪ್ಪು ಬಟ್ಟೆ ಧರಿಸಿ ಬರುವಂತೆ ತಿಳಿಸಲಾಗಿದೆ.

ವಿವಿಧ ವಿಷಯಗಳ ಕುರಿತು ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಪ್ರತಿಪಕ್ಷಗಳು ಆಗಾಗ್ಗೆ ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ. ಮಣಿಪುರ ವಿಷಯದ ಚರ್ಚೆ ಆರಂಭವಾಗುವ ಮುನ್ನವೇ ಸಂಸತ್ತಿನಲ್ಲಿ ಮೋದಿ ಅವರು ಈ ಕುರಿತು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರು ಪಟ್ಟು ಬಿಡದ ಕಾರಣ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗಿತ್ತು. ಜುಲೈ 20 ರಂದು ಆರಂಭವಾದ ಮುಂಗಾರು ಅಧಿವೇಶನ ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ.

ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ, 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನ ಮುಖ್ಯ ಸಚೇತಕ ಮೂರು ಸಾಲಿನ ವಿಪ್ ಹೊರಡಿಸಿದ್ದಾರೆ. ರಾಜ್ಯಸಭೆಯ ಎಲ್ಲಾ ಸಂಸದರಿಗೆ ಸದನದಲ್ಲಿ ಹಾಜರಿರುವಂತೆ ಸೂಚನೆಗಳನ್ನು ನೀಡಲಾಗಿದೆ. ರಾಜ್ಯಸಭೆಯಲ್ಲಿ ಸರ್ಕಾರವನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಲೋಕಸಭೆಯ ನಂತರ ಕಾಂಗ್ರೆಸ್ ಈಗ ರಾಜ್ಯಸಭೆಯಲ್ಲಿ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದೆ. ಇಂದು ರಾಜ್ಯಸಭೆಯಲ್ಲಿ ಬಹುಮುಖ್ಯ ವಿಷಯಗಳು ಚರ್ಚೆಯಾಗಲಿವೆ.

ಸುಗ್ರೀವಾಜ್ಞೆ ಮೇಲೆ ಕಾಂಗ್ರೆಸ್ ಭರವಸೆ:

ದೆಹಲಿಯಲ್ಲಿ ಅಧಿಕಾರಿಗಳ ಪೋಸ್ಟಿಂಗ್ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ತರಲು ಕೇಂದ್ರ ಸರ್ಕಾರವು ಬಹುತೇಕ ಸಿದ್ಧತೆಗಳನ್ನು ನಡೆಸಿದೆ ಮತ್ತು ಈ ವಿಷಯದಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಎಲ್ಲಾ ಸಂಸದರು ಸದನದಲ್ಲಿ ಇರುವಂತೆ ಸೂಚಿಸಿದೆ. ಬುಧವಾರವೂ ಲೋಕಸಭೆಯ ಎಲ್ಲಾ ಸಂಸದರು ಕಲಾಪದಲ್ಲಿ ಹಾಜರಿರುವಂತೆ ಕಾಂಗ್ರೆಸ್ ಸೂಚನೆ ನೀಡಿತ್ತು.

ಇದನ್ನೂ ಓದಿ: Central Bank of India Recruitment 2023: ಬ್ಯಾಂಕಿಂಗ್ ನೇಮಕಾತಿಗೆ ಇಂದೇ ಅರ್ಜಿ ಸಲ್ಲಿಸಿ

ಮತ್ತೊಂದೆಡೆ, ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಆದರೆ, ಚರ್ಚೆಗೆ ಸಮಯ ನಿಗದಿಯಾಗಿಲ್ಲ. ಎಲ್ಲ ಪಕ್ಷಗಳ ಜತೆ ಮಾತುಕತೆ ನಡೆಸಿ ಸಮಯ ನಿರ್ಧರಿಸಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಪ್ರಸ್ತಾಪಿಸಿದ್ದು, 50 ಕ್ಕೂ ಹೆಚ್ಚು ವಿರೋಧ ಪಕ್ಷದ ಸಂಸದರು ಅದನ್ನು ಬೆಂಬಲಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News