ನವದೆಹಲಿ: ಅನುಮತಿ ಇಲ್ಲದೆ ಚುನಾವಣಾ ರ್ಯಾಲಿಯನ್ನು ಆಯೋಜಿಸಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಕೇಸ್ ದಾಖಲಿಸಲು ಚುನಾವಣಾ ಆಯೋಗ ಪೂರ್ವ ದೆಹಲಿ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಏಪ್ರಿಲ್ 25 ರಂದು ದೆಹಲಿಯ ಜಂಗ್ಪುರಾದಲ್ಲಿ ಆಯೋಜಿಸಿದ್ದ ರ್ಯಾಲಿಗಾಗಿ ಗೌತಮ್ ಗಂಭೀರ್ ಅವರು ಚುನಾವಣಾ ಆಯೋಗದ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರ ಹಿನ್ನಲೆಯಲ್ಲಿ ಅವರ ವಿರುದ್ದ ದೂರು ದಾಖಲಿಸಲು ಆದೇಶಿಸಿದೆ.
Election Commission directs East Delhi Returning Officer to file an FIR against Gautam Gambhir, BJP's candidate from East Delhi parliamentary constituency for "holding a rally in East Delhi without permission." (file pic) pic.twitter.com/TyvztxOqv3
— ANI (@ANI) April 27, 2019
ಇತ್ತೀಚಿಗಷ್ಟೇ ಬಿಜೆಪಿ ಪಕ್ಷಕ್ಕೆ ಸೇರಿದ್ದ ಗೌತಮ್ ಗಂಭೀರ್, ಈಗ ಪೂರ್ವ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅರವಿಂದರ್ ಸಿಂಗ್ ಲವ್ಲಿ ಮತ್ತು ಎಎಪಿಯ ಅಭ್ಯರ್ಥಿ ಅತೀಶಿ ಅವರನ್ನು ಎದುರಿಸಲಿದ್ದಾರೆ. 2014 ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ರಾಜ್ಮೋಹನ್ ಗಾಂಧಿಯವರನ್ನು ಬಿಜೆಪಿಯ ಗಿರಿ 190,400 ಮತಗಳಿಂದ ಸೋಲಿಸಿದ್ದರು.
ಮಾಜಿ ಕ್ರಿಕೆಟಿಗ ಗಂಭೀರ್ ದೆಹಲಿಯಲ್ಲಿ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ, ರೂ.12 ಕೋಟಿ ವಾರ್ಷಿಕ ಆದಾಯವನ್ನು ಹೊಂದಿದ್ದಾರೆ. 58 ಟೆಸ್ಟ್ ಮತ್ತು 147 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದಲ್ಲದೆ 2007 ರಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್ ಮತ್ತು 2011 ರಲ್ಲಿ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್ ಗೆದ್ದ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದರು.