ನವದೆಹಲಿ: ಓರ್ವ ಭಾರತೀಯ ಮತ್ತು ಮೂವರು ಭಾರತ ಮೂಲದವರು ಅಮೆರಿಕಾದ ಸಿನ್ಸಿನ್ನಾಟಿಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಆದರೆ ದ್ವೇಷಪೂರಿತ ಕೊಲೆ ಸಾಧ್ಯತೆಯನ್ನು ಸ್ವರಾಜ್ ತಳ್ಳಿಹಾಕಿದ್ದಾರೆ.
"ಭಾನುವಾರ ಸಂಜೆ ಸಿನ್ಸಿನ್ನಾಟಿಯಲ್ಲಿ ನಾಲ್ಕು ಜನರನ್ನು ಹತ್ಯೆ ಮಾಡಿರುವುದಾಗಿ ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಭಾರತೀಯ ರಾಯಭಾರಿ @IndianEmbassyUS ನನಗೆ ಮಾಹಿತಿ ನೀಡಿದ್ದಾರೆ. ಅವರಲ್ಲಿ ಒಬ್ಬರು ಅಮೆರಿಕಾಕ್ಕೆ ಭೇಟಿ ನೀಡಿದ್ದ ಭಾರತೀಯ ನಾಗರಿಕನಾದರೆ, ಉಳಿದ ಮೂವರು ಭಾರತ ಮೂಲದವರಾಗಿದ್ದಾರೆ" ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
Indian Ambassador in United States @IndianEmbassyUS has informed me about the killing of four persons in Cincinnati on Sunday evening. One of them was an Indian national on a visit to US while others were persons of Indian origin. /1
— Chowkidar Sushma Swaraj (@SushmaSwaraj) April 30, 2019
"ಪ್ರಸ್ತುತ ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಇದು ದ್ವೇಷಕ್ಕಾಗಿ ನಡೆದಿರುವ ಅಪರಾಧವಲ್ಲ" ಎಂದು ಸ್ವರಾಜ್ ಹೇಳಿದರು. "ನ್ಯೂಯಾರ್ಕ್ನಲ್ಲಿರುವ ನಮ್ಮ ಕಾನ್ಸುಲ್ ಜನರಲ್ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಹಕಾರ ನೀಡುತ್ತಿದ್ದು, ಈ ಬಗ್ಗೆ ನನಗೆ ಮಾಹಿತಿ ನೀಡುತ್ತಿದ್ದಾರೆ" ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
The matter is under investigation by the Police but it is not a hate crime. Our Consul General in New York is coordinating with the concerned authorities and will keep me informed me on this. @IndiainNewYork /2
— Chowkidar Sushma Swaraj (@SushmaSwaraj) April 30, 2019