Nitin Desai : ಮುಂದಿನ ವಾರ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಕಲಾ ನಿರ್ದೇಶಕ ನೇಣಿಗೆ ಶರಣು..!

Director Nitin Desai : ಬಾಲಿವುಡ್‌ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ನೇಣಿಗೆ ಶರಣಾಗಿದ್ದಾರೆ. ಹಲವು ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರ್ತಿಸಿಕೊಂಡಿದ್ದರು.  

Written by - Savita M B | Last Updated : Aug 2, 2023, 11:41 AM IST
  • ನಿರ್ದೇಶಕ ನಿತಿನ್ ದೇಸಾಯಿ ಅವರು ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ್ದರು
  • ಉತ್ತಮ ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರಪ್ರಶಸ್ತಿ ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದರು
  • ಸೂಪರ್‌ ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು.
Nitin Desai : ಮುಂದಿನ ವಾರ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಕಲಾ ನಿರ್ದೇಶಕ ನೇಣಿಗೆ ಶರಣು..!  title=

Bollywood : ನಿರ್ದೇಶಕ ನಿತಿನ್ ದೇಸಾಯಿ ಅವರು ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ ಇವರು ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿ ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದರು.

ಸಂಜಯ್‌ ಲೀಲಾ ಬನ್ಸಾಲಿ, ವಿದ್ಯು ವಿನೋದ್ ಚೋಪ್ರಾ, ಹೀಗೆ ಹಲವಾರು ದೊಡ್ಡ ದೊಡ್ಡ ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಇವರು ತಮ್ಮ ಉತ್ತಮ ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರಪ್ರಶಸ್ತಿ ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇದನ್ನೂ ಓದಿ-ಪವನ್‌ ಕಲ್ಯಾಣ್‌ BRO ಸಿನಿಮಾ ನಟಿಗೆ ಮತ್ತೇ ನಿರಾಶೆ..! ಕಾರಣ ಏನ್‌ ಗೊತ್ತಾ..?

ನಿರ್ದೇಶಕ ಮುಂದಿನ ವಾರ (ಆಗಸ್ಟ್‌ 9) ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್‌ ಕರ್ಜತ್‌ನ ಎನ್‌ಡಿ ಸ್ಟುಡಿಯೋದಲ್ಲಿ ನೇಣಿಗೆ ಶರಣಾಗಿದ್ದಾರೆ.

ಕಲಾ ನಿರ್ದೇಶಕ ನಿತಿನ್‌ ದೇಸಾಯಿ ಲಗಾನ್, ದೇವದಾಸ್, ಜೋದಾ ಅಕ್ಬರ್, ಹಮ್ ದಿಲ್ ದೆ ಜುಕೆ ಸನಂ, ಪ್ರೇಮ್ ರತನ್ ದನ್ ಪಾಯೋದಂತಹ ಸೂಪರ್‌ ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು. 

ಇದನ್ನೂ ಓದಿ-SIIMA 2023 Nominations: ಕಾಂತಾರಾ V/S KGF-2; ಪ್ರಶಸ್ತಿ ರೇಸ್‌ನಲ್ಲಿ ಭಾರೀ ಪೈಪೋಟಿ..!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News