Director Siddique : ಭಾರತೀಯ ಚಿತ್ರರಂಗದಲ್ಲಿ ದುರಂತಗಳ ಸರಣಿ ನಡೆಯುತ್ತಿದೆ. ಕನ್ನಡ ಚಿತ್ರರಂಗದ ನಂತರ ಇದೀಗ ಮಲಯಾಳಂ ಸಿನಿಮಾರಂಗದಲ್ಲಿ ದುರಂತವೊಂದು ನಡೆದಿದೆ. ಖ್ಯಾತ ನಿರ್ದೇಶಕ ಹಾಗೂ ಚಿತ್ರಕಥೆಗಾರ ಸಿದ್ದಿಕ್ (63) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಿಕ್ ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ಅವರಿಗೆ ಹೃದಯಾಘಾತವಾಗಿದೆ ಎಂದು ಆಸ್ಪತ್ರೆ ಮೂಲಗಳು ಬಹಿರಂಗಪಡಿಸಿವೆ. ಮಂಗಳವಾರ ರಾತ್ರಿ 9.13ಕ್ಕೆ ಸಿದ್ದಿಕ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅವರ ಕುಟುಂಬದ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಿದ್ದಿಕ್ ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಹುಟ್ಟು ಹಬ್ಬಕ್ಕೆ ʼಗಂಟೂರು ಕಾರʼ ಪೋಸ್ಟರ್ ರಿಲೀಸ್..! ಮಾಸ್ ಲುಕ್ನಲ್ಲಿ ಸೂಪರ್ ಸ್ಟಾರ್
ಸಿದ್ದಿಕ್ ಅವರು ಆಗಸ್ಟ್ 01, 1960 ರಂದು ಕೊಚ್ಚಿಯಲ್ಲಿ ಜನಿಸಿದರು. ವಿದ್ಯಾಭ್ಯಾಸ ಮುಗಿಸಿ ಕೆಲ ವರ್ಷಗಳ ಕಾಲ ಹಿರಿಯ ನಿರ್ದೇಶಕ ಫಾಜಿಲ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಆ ನಂತರ ಸಿದ್ದಿಕ್ ಗೆಳೆಯ ಲಾಲ್ ಜೊತೆ ಸೇರಿ ಸಿನಿಮಾ ಮಾಡಲು ಶುರು ಮಾಡಿದರು. ಇವರಿಬ್ಬರೂ ಸೇರಿ ಮಾಡಿದ ರಾಮಜಿ ರಾವ್ ಸ್ಪೀಕಿಂಗ್, ಗಾಡ್ ಫಾದರ್, ಇನ್ ಹರಿಹರ್ ನಗರ್, ವಿಯೆಟ್ನಾಂ ಕಾಲೋನಿ, ಕಾಬುಲಿ ವಾಲಾ ಚಿತ್ರಗಳು ಸೂಪರ್ ಹಿಟ್ ಆದವು.
ಈ ಕಾರಣದಿಂದಾಗಿ, ಈ ಇಬ್ಬರ ಜೋಡಿಯು ಉದ್ಯಮದಲ್ಲಿ ಸಿದ್ದಿಕ್-ಲಾಲ್ ಎಂದು ಗುರುತಿಸಲ್ಪಟ್ಟಿತು. ಹಿಟ್ಲರ್, ಫ್ರೆಂಡ್ಸ್, ಕ್ರಾನಿಕ್ ಬ್ಯಾಚುಲರ್, ಬಾಡಿಗಾರ್ಡ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನೂ ಸಿದ್ದಿಕ್ ನಿರ್ದೇಶಿಸಿದ್ದಾರೆ. ಅವರ 2011 ರ ಚಲನಚಿತ್ರ ಬಾಡಿಗಾರ್ಡ್ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಸೃಷ್ಟಿಸಿತು. ಈ ಚಿತ್ರವನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ವೆಂಕಟೇಶ್ ಮತ್ತು ತಮಿಳಿನಲ್ಲಿ ವಿಜಯ್ ನಾಯಕನಾಗಿ ರಿಮೇಕ್ ಮಾಡಲಾಗಿತ್ತು.
ಇದನ್ನೂ ಓದಿ: ಹಾಟ್ ಪೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ರಾಮಾಚಾರಿ ಚಾರು..ಪೋಟೋಸ್ ನೋಡಿ
ಸಿದ್ದಿಕ್ ಅವರಿಗೆ ಪತ್ನಿ ಸಜಿತಾ ಹಾಗೂ ಮೂವರು ಮಕ್ಕಳಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಚ್ಚಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇರಿಸಲಾಗುವುದು. ಅದೇ ದಿನ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.