ಮಹೇಶ್ ಹುಟ್ಟು ಹಬ್ಬಕ್ಕೆ ʼಗಂಟೂರು ಕಾರʼ ಪೋಸ್ಟರ್ ರಿಲೀಸ್‌..! ಮಾಸ್ ಲುಕ್‌ನಲ್ಲಿ ಸೂಪರ್ ಸ್ಟಾರ್

HBD Mahesh babu : ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು-ತ್ರಿವಿಕ್ರಮ್ ಕಾಂಬೋದಲ್ಲಿ ಮೂಡಿ ಬರುತ್ತಿರುವ ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಗುಂಟೂರು ಕಾರ'. ಇಂದು ಮಹೇಶ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.  

Written by - Krishna N K | Last Updated : Aug 9, 2023, 11:11 AM IST
  • ಇಂದು ಟಾಲಿವುಡ್‌ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಹುಟ್ಟುಹಬ್ಬ.
  • ‘ಗುಂಟೂರು ಕಾರಂ’ ಚಿತ್ರತಂಡ ಮಹೇಶ್‌ ಬರ್ತ್‌ಡೇ ಗೆ ಬಿಗ್‌ ಗಿಫ್ಟ್‌ ನೀಡಿದೆ.
  • ಮಹೇಶ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಮಹೇಶ್ ಹುಟ್ಟು ಹಬ್ಬಕ್ಕೆ ʼಗಂಟೂರು ಕಾರʼ ಪೋಸ್ಟರ್  ರಿಲೀಸ್‌..! ಮಾಸ್ ಲುಕ್‌ನಲ್ಲಿ ಸೂಪರ್ ಸ್ಟಾರ್ title=

Guntur Kaaram Movie Update : ಇಂದು ಟಾಲಿವುಡ್‌ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಹುಟ್ಟುಹಬ್ಬ. ತ್ರಿವಿಕ್ರಮ್ ನಿರ್ದೇಶನದ ‘ಗುಂಟೂರು ಕಾರಂ’ ಚಿತ್ರತಂಡ ಮಹೇಶ್‌ ಬರ್ತ್‌ಡೇ ಗೆ ಬಿಗ್‌ ಗಿಫ್ಟ್‌ ಒಂದನ್ನು ನೀಡಿದ್ದು, ಪೋಸ್ಟರ್ ರಿಲೀಸ್‌ ಮಾಡಿದೆ. 

ಹೌದು.. ಮಹೇಶ್‌ ಬಾಬು ತಮ್ಮ 48ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ ಗುಂಟೂರು ಕಾರಂ ಪೋಸ್ಟರ್‌ ರಿಲೀಸ್‌ ಆಗಿದೆ. ಇದರಲ್ಲಿ ಮಹೇಶ್ ಲುಂಗಿಯಲ್ಲಿ ಕುಳಿತು ಒಂದು ಕೈಯಲ್ಲಿ ಲೈಟರ್ ಹಿಡಿದು ಇನ್ನೊಂದು ಕೈಯಿಂದ ಸಿಗರೇಟು ಹಚ್ಚುತ್ತಿರುವ ದೃಶ್ಯವಿದೆ. ಈ ಮಾಸ್ ಲುಕ್ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. 

ಇದನ್ನೂ ಓದಿ: ಮುಂಗಾರು ಮಳೆ ಚೆಲುವೆಯ ಹಾಟ್‌ ಲುಕ್‌..ಪೋಟೋಸ್‌ ನೋಡಿ

ಇನ್ನು ಗುಂಟೂರು ಕಾರ ಚಿತ್ರದ ಪೋಸ್ಟರ್, ಹಾಡುಗಳು ಮತ್ತು ಗ್ಲಿಂಪ್ಸ್ ಈಗಾಗಲೇ ಅಭಿಮಾನಿಗಳನ್ನು ಒಂದು ರೇಂಜ್‌ನಲ್ಲಿ ಆಕರ್ಷಿಸಿದೆ. ಇದಲ್ಲದೆ, ಇತ್ತೀಚಿನ ಪೋಸ್ಟರ್ ಮೂಲಕ ನಿರ್ಮಾಪಕರು ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಎಸ್ಎಸ್ ಥಮನ್ ಈ ಯೋಜನೆಯಿಂದ ಹೊರಗುಳಿದಿದ್ದಾರೆ. ಅಲ್ಲದೆ ಈ ಬಾರಿ ಫೈಟ್ ಮಾಸ್ಟರ್ ಗಳಾದ ರಾಮ್-ಲಕ್ಷ್ಮಣ್ ಕೂಡ ಸಿನಿಮಾದಿಂದ ಹಿಂದೆ ಸರಿದಿದ್ದು, ಅವರ ಸ್ಥಾನಕ್ಕೆ ತಮಿಳಿನ ಫೈಟ್ ಮಾಸ್ಟರ್‌ಗಳಾದ ಅನ್ ಬ್ಯುರಿಡ್ ಅವರನ್ನು ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಬೇಕು.

ಇದನ್ನೂ ಓದಿ: ಶ್ರುತಿ ಹಾಸನ್‌ಗೆ ತನ್ನ ಬಾಯ್‌ಫ್ರೆಂಡ್‌ ಹೂಸು ತುಂಬಾ ಇಷ್ಟವಂತೆ!

ಈ ಚಿತ್ರದಲ್ಲಿ ರಮ್ಯಾ ಕೃಷ್ಣ, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಹುಟ್ಟುಹಬ್ಬಕ್ಕೆ ಪೋಸ್ಟರ್ ಮಾತ್ರ ಬಿಡುಗಡೆಯಾಗಿದ್ದರಿಂದ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದಾರೆ. ಸಿನಿಮಾದಿಂದ ಲಿರಿಕಲ್ ಸಾಂಗ್ ಅಥವಾ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದರೆ ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News