ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದಾದ್ಯಂತ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
ಇದೇ ವೇಳೆ 2019 ರಲ್ಲಿ ನರೇಂದ್ರ ಮೋದಿಗೆ 1977ರಲ್ಲಿನ ಇಂದಿರಾ ಗಾಂಧಿ ಸೋಲನ್ನು ಮಾಯಾವತಿ ನೆನಪಿಸಿದ್ದಾರೆ.ಆಗ ತುರ್ತುಪರಿಸ್ಥಿತಿ ನಡೆದ ನಂತರದ ಚುನಾವಣೆಯಲ್ಲಿ ಸಮಾಜವಾದಿ ನಾಯಕ ರಾಜ್ ನಾರಾಯಣ್ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯನ್ನು ಸೋಲಿಸಿದ್ದರು.ಈಗ ಇಂತಹ ಸನ್ನಿವೇಶ ವಾರಣಾಸಿಯಲ್ಲಿ ಮೋದಿಗೆ ಎದುರಾಗಲಿದೆ ಎಂದು ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.
पूर्वांचल के साथ यह वादाखिलाफी व विश्वासघात तब हुआ है जब पीएम व यूपी के सीएम इसी क्षेत्र का प्रतिनिधित्व करते हैं। योगी को तो गोरखपुर ने ठुकरा दिया है तो क्या ऐसे में पीएम श्री मोदी की जीत से ज्यादा वाराणसी में उनकी हार ऐतिहासिक नहीं होगी? क्या वाराणसी 1977 का रायबरेली दोहराएगा?
— Mayawati (@Mayawati) May 18, 2019
ಮಾಯಾವತಿ ತಮ್ಮ ಟ್ವೀಟ್ ನಲ್ಲಿ ಪ್ರತಿಕ್ರಿಯಿಸುತ್ತಾ " ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿ ಈ ಪುರವಾಂಚಲ್ ಪ್ರದೇಶಕ್ಕೆ ನೀಡಿರುವ ಭರವಸೆ ಹುಸಿಯಾಗಿದೆ ಯೋಗಿ ಅವರನ್ನು ಗೋರಖ್ಪುರ್ ದಲ್ಲಿ ತಿರಸ್ಕರಿಸಿದ್ದಾರೆ, ಆದ್ದರಿಂದ ಈ ಪರಿಸ್ಥಿತಿಯಲ್ಲಿ, ವಾರಣಾಸಿಯಲ್ಲಿ ಮೋದಿ ಅವರ ಸೋಲು ಅವರ ವಿಜಯಕ್ಕಿಂತಲೂ ಹೆಚ್ಚು ಐತಿಹಾಸಿಕವಾಗಿದೆ. 1977ರ ರಾಯ್ ಬರೇಲಿ ಸ್ಥಿತಿ ಇಲ್ಲಿ ಉಂಟಾಗಬಹುದು "ಹಿಂದಿ ಟ್ವೀಟ್ ನಲ್ಲಿ ಮಾಯಾವತಿ ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಮಾಯಾವತಿ "ಗುಜರಾತ್ ಮಾದರಿ ಪ್ರಧಾನಿ ಮೋದಿ ಉತ್ತರ ಪ್ರದೇಶದ ಪುರ್ವಂಚಲ್ ಪ್ರದೇಶದಲ್ಲಿನ ಬಡತನ, ನಿರುದ್ಯೋಗ ಮತ್ತು ಹಿಂದುಳಿದಿರುವಿಕೆಯನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾಗಲಿಲ್ಲ, ಅದರ ಬದಲಾಗಿ ಇಲ್ಲಿ ಮೋದಿ-ಯೋಗಿ ಡಬಲ್ ಇಂಜಿನ್ ಸರಕಾರವು ದೇಶಕ್ಕೆ ಕೋಮು ಉದ್ವೇಗ, ದ್ವೇಷ ಮತ್ತು ಹಿಂಸಾಚಾರವನ್ನು ಮಾತ್ರ ನೀಡಿದೆ" ಎಂದು ಹೇಳಿದ್ದಾರೆ