ಚಲಿಸುತ್ತಿರುವಾಗಲೇ ಹೊರಬಂತು 50 ಜನರಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಕ್ರ..! ವಿಡಿಯೋ ನೋಡಿ

ಶಕ್ತಿ ಯೋಜನೆಯಿಂದಾಗಿ ಬಸ್‌ಗಳು ಡೆಕೋಟಾ ಬಸ್‌ಗಳಾಗಿ ಪರಿವರ್ತನೆಯಾಗ್ತಿವೆ. ಜನಸಂದಣಿಯಿಂದಾಗಿ ಬಸ್‌ಗಳ ಒಂದೊಂದೇ ಭಾಗಗಳು ಕಳಚಿಬೀಳ್ತಿವೆ ಅಂತ ಸ್ಥಳೀಯರ ಆರೋಪ ಮಾಡುತ್ತಿದ್ದಾರೆ. 

Written by - Krishna N K | Last Updated : Aug 20, 2023, 11:40 AM IST
  • ಹೊರಬಂತು ಚಲಿಸುತ್ತಿದ್ದ ಬಸ್‌ನ ಹಿಂಬದಿ ಚಕ್ರ
  • ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಘಟನೆ
  • ಘಟನೆಯ ಸಂಪೂರ್ಣ ವಿಡಿಯೋ ವೈರಲ್‌
ಚಲಿಸುತ್ತಿರುವಾಗಲೇ ಹೊರಬಂತು 50 ಜನರಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಕ್ರ..! ವಿಡಿಯೋ ನೋಡಿ title=

ಗದಗ : ಚಲಿಸುತ್ತಿರುವಾಗಲೇ ಬಸ್‌ನ ಹಿಂಬದಿ ಚಕ್ರ ಹೊರಬಂದ ಘಟನೆ ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ನಡೆದಿದೆ. ಘಟನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಬೆಚ್ಚಿಬಿಳಿಸುವಂತಿದೆ. 

ಗದಗ ದಿಂದ ನರಗುಂದದ ಕಡೆ ಹೊರಟಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಮಗದ ಬಸ್ ಹಿಂಬದಿ ಚಕ್ರ ಕಿತ್ತು ಬಂದು ರಸ್ತೆಗೆ ಉರುಳಿದೆ. ಘಟನೆಯಿಂದ ಎಚ್ಚೆತ್ತುಕೊಂಡ ಚಾಲಕ ತಕ್ಷಣ ಬಸ್‌ ನಿಲ್ಲಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸುಮಾರು 50 ಜನ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿಯವರು ಸ್ಥಳೀಯವಾಗಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಎಂದ ಎಸ್ಟಿ ಸೊಮಶೇಖರ್

ಘಟನೆಯಿಂದ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಭಯಭೀತರಾಗಿದ್ದರು. ಬಸ್‌ನ ಹಿಂದೆ‌ ಬರುತ್ತಿದ್ದ ಕಾರಿನಲ್ಲಿ ಪ್ರಯಾಣಿಸುದ್ದ ಜನ ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳು ಡೆಕೋಟಾ ಬಸ್‌ಗಳಾಗಿ ಪರಿವರ್ತನೆಯಾಗ್ತಿವೆ. ಜನಸಂದಣಿಯಿಂದಾಗಿ ಬಸ್‌ಗಳ ಒಂದೊಂದೇ ಭಾಗಗಳು ಕಳಚಿಬೀಳ್ತಿವೆ ಅಂತ ಸ್ಥಳೀಯರ ಆರೋಪ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News