Chandrayaan-3 and Virat Kohli Record: ಇಸ್ರೋದ ಚಂದ್ರಯಾನ 3 ಪೋಸ್ಟ್ ಸಾಮಾಜಿಕ ಮಾಧ್ಯಮ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ದಾಖಲೆಯನ್ನು ಸೃಷ್ಟಿಸಿದೆ. ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದು, ಚಂದ್ರಯಾನ 3 ಪೋಸ್ಟ್ ಈಗ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಗಿ ಹೊರಹೊಮ್ಮಿದೆ. ವಿರಾಟ್ ಕೊಹ್ಲಿಯವರ ದಾಖಲೆಯ ಪೋಸ್ಟ್ 796.1K ಲೈಕ್’ಗಳನ್ನು ಪಡೆದುಕೊಂಡಿತ್ತು. ಆದರೆ ಚಂದ್ರಯಾನದ ಪೋಸ್ಟ್’ಗೆ ಇದುವರೆಗೆ 827.6K ಲೈಕ್’ಗಳು ಬಂದಿವೆ.
ಇದನ್ನೂ ಓದಿ: ಒಂದು ಓವರ್’ನಲ್ಲಿ 100ಕ್ಕೂ ಹೆಚ್ಚು ಮೀಟರ್ ದೂರಕ್ಕೆ 4 ದೈತ್ಯ ಸಿಕ್ಸರ್ ಬಾರಿಸಿದ ಆಟಗಾರ! ವಿಡಿಯೋ
ಆಗಸ್ಟ್ 23 ರಂದು ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್ ನಂತರ ಭಾರತ ಇತಿಹಾಸವನ್ನು ಸೃಷ್ಟಿಸಿದೆ. ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದ್ದಲ್ಲದೆ, ಚಂದ್ರನ ಮೇಲೆ ಇಳಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
23 ಅಕ್ಟೋಬರ್ 2022 ರಂದು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಹ್ಲಿ 53 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. 19ನೇ ಓವರ್’ನಲ್ಲಿ ಕೊಹ್ಲಿ ಸತತ 2 ಸಿಕ್ಸರ್ ಬಾರಿಸಿದ್ದರು.
ISRO's #Chandrayaan3 post with 827.6K likes becomes the MOST liked post in the history of India🇮🇳 by BEATING #ViratKohli's 796.1K likes. pic.twitter.com/W0UCc5fJFq
— Manobala Vijayabalan (@ManobalaV) August 27, 2023
ಚಂದ್ರಯಾನದ ಯಶಸನ್ನು ಆಗಸ್ಟ್ 23ರಂದು ಇಡೀ ದೇಶವೇ ಒಟ್ಟಾಗಿ ಆಚರಿಸಿತು. ದೇಶದ ಈ ಗೆಲುವಿಗೆ ಸಾಮಾಜಿಕ ಜಾಲತಾಣಗಳಿಂದ ಹಿಡಿದು ಎಲ್ಲೆಡೆ ಜನರು ಪರಸ್ಪರ ಅಭಿನಂದಿಸುತ್ತಿದ್ದರು. ಕ್ರೀಡಾ ಲೋಕದಿಂದ ಹಿಡಿದು ಸಿನಿಮಾ ತಾರೆಯರವರೆಗೂ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ವಿಜಯೋತ್ಸವ ಆಚರಿಸಿದರು.
ಚಂದ್ರಯಾನ 3 ಯಶಸ್ಸಿನ ಬಳಿಕ ಇಸ್ರೋ ಟ್ವೀಟ್ ಮಾಡಿದ್ದು, “ನಾನು ನನ್ನ ಗಮ್ಯಸ್ಥಾನವನ್ನು ತಲುಪಿದ್ದೇನೆ ಮತ್ತು ನೀವೂ ಕೂಡ. ನಾನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದೇನೆ” ಎಂದು ಬರೆದಿತ್ತು. ಈ ಪೋಸ್ಟ್’ಗೆ ಲೈಕ್’ಗಳು ಮತ್ತು ಕಾಮೆಂಟ್’ಗಳ ಸುರಿಮಳೆಯೇ ಹರಿದಿತ್ತು. ಈ ಪೋಸ್ಟ್ ಕೊಹ್ಲಿಯ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ: ಕ್ರಿಕೆಟ್’ನಲ್ಲಿ ರೆಡ್ ಕಾರ್ಡ್ ನಿಯಮ! ಶಿಕ್ಷೆಗೆ ಒಳಗಾದ ಮೊದಲ ಆಟಗಾರ ಈ ಆಫ್ ಸ್ಪಿನ್ನರ್
ಸದ್ಯ ವಿರಾಟ್ ಕೊಹ್ಲಿ ಏಷ್ಯಾಕಪ್’ಗಾಗಿ ಟೀಂ ಇಂಡಿಯಾದೊಂದಿಗೆ ಶೀಘ್ರದಲ್ಲೇ ಶ್ರೀಲಂಕಾಕ್ಕೆ ತೆರಳಲಿದ್ದಾರೆ. ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ ವಿರುದ್ಧ ಸೆಪ್ಟೆಂಬರ್ 2 ರಂದು ನಡೆಯಲಿದೆ. ಮುಂದಿನ ತಿಂಗಳು (ಅಕ್ಟೋಬರ್ 14) ವಿಶ್ವಕಪ್’ನಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವೆ ಹಣಾಹಣಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ