Kichha 47: ಈ ಕ್ರೇಜಿ ಕಾಂಬಿನೇಷನ್‌ನಲ್ಲಿ ಕಿಚ್ಚನ ಮುಂದಿನ ಸಿನಿಮಾ!...ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೆಗಾ ಪ್ರಾಜೆಕ್ಟ್?

Kichha Sudeep Next Movie :  ಸ್ಯಾಂಡಲ್‌ವುಡ್‌ ಬಾದ್‌ ಶಾ ಕಿಚ್ಚನ ಹುಟ್ಟು ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯ ಸುದೀಪ್‌ ಕಿಚ್ಚ46ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾದರೆ ಅವರ ಮುಂದಿನ ಸಿನಿಮಾ ಯಾವುದು ಅನ್ನೋದು ಅಭಿಮಾನಿಗಳ ಪ್ರಶ್ನೆ.  

Written by - Savita M B | Last Updated : Aug 29, 2023, 01:38 PM IST
  • 46 ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಲಿದೆ
  • ಸದ್ಯ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಜಂಟಿಯಾಗಿ ಸಿನಿಮಾ ಮಾಡಲಾಗುತ್ತಿದೆ
  • ಇತ್ತೀಚೆಗೆ ಕಿಚ್ಚ ಸುದೀಪ್‌ ಸಹ ಹೊಂಬಾಳೆ ಸಂಸ್ಥೆ ಜೊತೆಗೆ ಉತ್ತಮ ಒಡನಾಟದಲ್ಲಿದ್ದಾರೆ
Kichha 47: ಈ ಕ್ರೇಜಿ ಕಾಂಬಿನೇಷನ್‌ನಲ್ಲಿ ಕಿಚ್ಚನ ಮುಂದಿನ ಸಿನಿಮಾ!...ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೆಗಾ ಪ್ರಾಜೆಕ್ಟ್?  title=

Kichha Sudeep  : ಕಿಚ್ಚ ಸುದೀಪ್‌ ನಟಿಸುತ್ತಿರುವ ಕಿಚ್ಚ 46 ಸಿನಿಮಾ ಒಂದೇ ಸಮಯದಲ್ಲಿ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಲಿದೆ. ಇನ್ನು ಸುದೀಪ್‌ ಅವರು ವಿಕ್ರಾಂತ್‌ ರೋಣ ಚಿತ್ರದ ಬಳಿಕ ಸುಮಾರು 1 ವರ್ಷ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಕೆಸಿಸಿ, ಸಿಸಿಎಲ್‌ ಕ್ರಿಕೆಟ್, ಚುನಾವಣೆ ಪ್ರಚಾರಗಳಲ್ಲಿ ಕಿಚ್ಚ ಬ್ಯುಸಿಯಾಗಿದ್ದರು.

ಇತ್ತೀಚೆಗಷ್ಟೇ ತಮ್ಮ ಕಿಚ್ಚ46 ಸಿನಿಮಾ ಘೋಷಿಸಿದ್ದರು. ಸದ್ಯ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಜಂಟಿಯಾಗಿ ಸಿನಿಮಾ ಮಾಡಲಾಗುತ್ತಿದ್ದು, ಮಹಾಬಲಿಪುರಂನಲ್ಲಿ ಅದ್ಧೂರಿ ಸೆಟ್‌ ನಿರ್ಮಿಸಿ ಸಿನಿಮಾದ ಶೂಟಿಂಗ್‌ ಮಾಡಲಾಗುತ್ತಿದೆ. 

ಇದನ್ನೂ ಓದಿ-ಕೇರಳದಲ್ಲಿ ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 10 ಚಿತ್ರಗಳಿವು..!

ಇನ್ನು ಕಿಚ್ಚ46 ಸಿನಿಮಾದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿರುವ ಸುದೀಪ್‌ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಶೀಘ್ರದಲ್ಲಿ ಶೂಟಿಂಗ್‌ ಆರಂಭವಾಗಲಿದ್ದು, ಕಿಚ್ಚ ಮತ್ತೆ ಸೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮತ್ತೊಂದು ಟೀಸರ್ ಅಥವಾ ಪೋಸ್ಟರ್ ಸುದೀಪ್ ಹುಟ್ಟುಹಬ್ಬಕ್ಕೆ ರಿವೀಲ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ಸದ್ಯ ಕಿಚ್ಚ ಸುದೀಪ್‌ ತಮ್ಮ ಕಿಚ್ಚ46 ನಂತರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಕಿಚ್ಚ ಸುದೀಪ್‌ ಸಹ ಹೊಂಬಾಳೆ ಸಂಸ್ಥೆ ಜೊತೆಗೆ ಉತ್ತಮ ಒಡನಾಟದಲ್ಲಿದ್ದಾರೆ. ಇದರಿಂದಾಗಿ ಶೀಘ್ರದಲ್ಲೇ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲಾಗುತ್ತಿದೆ ಎನ್ನುವ ಸುದ್ದಿ ಓಡಾಡುತ್ತಿದೆ. 

ಇದನ್ನೂ ಓದಿ-ಕುತೂಹಲ ಮೂಡಿಸಿದೆ "ತತ್ಸಮ ತದ್ಭವ" ಚಿತ್ರದ ಟ್ರೇಲರ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News