ಚಿನ್ನ ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ ! ನಿಮ್ಮ ನಗರದಲ್ಲಿ ಎಷ್ಟಿದೆ ರೇಟ್ ?

Gold Price Today, August 30: ನಿಮಗೂ ಚಿನ್ನ ಖರೀದಿಸುವ ಯೋಜನೆ ಇದ್ದರೆ,  ಚಿನ್ನ ಖರೀದಿಗೆ ಮುನ್ನ ದರಗಳನ್ನು ತಿಳಿದುಕೊಳ್ಳಿ. 

Written by - Ranjitha R K | Last Updated : Aug 30, 2023, 02:17 PM IST
  • ವಾರದ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆ
  • ಇಂದು MCXನಲ್ಲಿ ಎಷ್ಟಿದೆ ದರ ?
  • ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು
ಚಿನ್ನ ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ ! ನಿಮ್ಮ ನಗರದಲ್ಲಿ ಎಷ್ಟಿದೆ ರೇಟ್ ? title=

Gold Price Today, August 30 : ಈ ವಾರದ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇಂದು ಕೂಡಾ ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಚಿನ್ನದ ಬೆಲೆ 60,000ಕ್ಕಿಂತ ಕಡಿಮೆ ದರದಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೇ ಇಂದು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬೆಳ್ಳಿ ಇಂದು ಸುಮಾರು 76,000 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ನಿಮಗೂ ಚಿನ್ನ ಖರೀದಿಸುವ ಯೋಜನೆ ಇದ್ದರೆ,  ಚಿನ್ನ ಖರೀದಿಗೆ ಮುನ್ನ ದರಗಳನ್ನು ತಿಳಿದುಕೊಳ್ಳಿ. 

ಇಂದು MCXನಲ್ಲಿ ಎಷ್ಟಿದೆ ದರ ? :  
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ಶೇ.0.09 ರಷ್ಟು ಏರಿಕೆಯೊಂದಿಗೆ 10 ಗ್ರಾಂಗೆ 59318 ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.22ರಷ್ಟು ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 76274 ರೂ. ವಹಿವಾಟು ನಡೆಸುತ್ತಿದೆ. 

ಇದನ್ನೂ ಓದಿ : ಇಂದಿನಿಂದಲೇ ಖಾತೆಗೆ ಬೀಳಲಿದೆ ಗೃಹ ಲಕ್ಷ್ಮೀ ಯೋಜನೆಯ ಹಣ : ಈ ಮಹಿಳೆಯರ ಖಾತೆಗೆ ಮಾತ್ರ ಹಣ ವರ್ಗಾವಣೆ

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು? : 
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.0.9ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ 1,936.84 ಡಾಲರ್‌ಗೆ ತಲುಪಿದೆ. ಇದರ ಹೊರತಾಗಿ, ಬೆಳ್ಳಿ 1.9 ಶೇಕಡಾ ಏರಿಕೆಯಾಗಿ ಔನ್ಸ್ 24.71 ಡಾಲರ್ ಆಗಿದೆ. ಪ್ಲಾಟಿನಂನ ಬೆಲೆಯು 1.5 ಪ್ರತಿಶತದಷ್ಟು  ಏರಿದ್ದು 978.45 ಡಾಲರ್ ಆಗಿದೆ.  

ನಿಮ್ಮ ನಗರದ ಬೆಲೆಯನ್ನು ಪರಿಶೀಲಿಸೋಣ : 
ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಮಿಸ್ ಕಾಲ್ ಕೊಡುತ್ತೀರೋ ಅದೇ ಸಂಖ್ಯೆಗೆ ಮೆಸೇಜ್ ಬರುತ್ತದೆ. 

ಇದನ್ನೂ ಓದಿ : ಡಿಎ ಹೆಚ್ಚಳಕ್ಕೂ ಹೊಸ ಫಾರ್ಮುಲಾ! ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ ಸುದ್ದಿ!

ಆ್ಯಪ್‌ನಿಂದ ಸಿಗಲಿದೆ  ಸಂಪೂರ್ಣ ಮಾಹಿತಿ  : 
ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ  ಚಿನ್ನದ ಶುದ್ಧತೆಯನ್ನು ಕಂಡುಹಿಡಿಯಬಹುದು. ಇದಲ್ಲದೇ ಈ ಆಪ್ ಮೂಲಕವೂ ದೂರು ಕೂಡಾ ನೀಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News