ಮಹಿಳೆಗೆ ಪೊಲೀಸರು ಬೆಲ್ಟ್ನಿಂದ ಹೊಡೆಯುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಮಹಿಳಾ ಆಯೋಗದ ಸದಸ್ಯೆ ರೇಣು ಭಾಟಿಯಾ ಪೊಲೀಸ್ ಕಮಿಷನರ್ ಮತ್ತು ಡಿಜಿಪಿ ತನಿಖೆಗೆ ಮನವಿ ಮಾಡಿದ್ದಾರೆ.
ಫರಿದಾಬಾದ್: ಪೊಲೀಸರ ಅಮಾನವೀಯ ವರ್ತನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದೆ. ಪೊಲೀಸ್ ಠಾಣೆಯಲ್ಲಿ ಪುರುಷ ಪೊಲೀಸರು ಮಹಿಳೆಗೆ ಬೆಲ್ಟ್ನಿಂದ ಹೊಡೆಯುತ್ತಿರುವ ದೃಶ್ಯ ಫರಿದಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಬಾಲಬ್ಗಾರ್ನ ಆದರ್ಶ್ ನಗರ ಪೊಲೀಸ್ ಠಾಣೆಯದ್ದು ಎಂದು ದೃಢಪಡಿಸಲಾಗಿದೆ. ಈ ವೈರಲ್ ವಿಡಿಯೋವನ್ನು ಅನುಸರಿಸಿ, ಮಹಿಳಾ ಆಯೋಗದ ಸದಸ್ಯೆ ರೇಣು ಭಾಟಿಯಾ ಪೊಲೀಸ್ ಕಮಿಷನರ್ ಮತ್ತು ಡಿಜಿಪಿ ತನಿಖೆಗೆ ಮನವಿ ಮಾಡಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಧ್ಯದಲ್ಲಿ ನಿಂತಿದ್ದಾರೆ. ಪೊಲೀಸರು ಅವರ ಸುತ್ತ ಸುತ್ತುತ್ತಾ ವಿಚಾರಣೆ ನಡೆಸುತ್ತಿರುವ ವೇಳೆ ಮಹಿಳೆಗೆ ಬೆಲ್ಟ್ನಿಂದ ಹೊಡೆಯಲಾಗುತ್ತಿದೆ. ಪೊಲೀಸ್ ಒಬ್ಬರು ತಮ್ಮ ಮೊಬೈಲ್ ನಲ್ಲಿ ಈ ಇಡೀ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಈ ವಿಡಿಯೋವನ್ನು ಹಲವು ತಿಂಗಳುಗಳಷ್ಟು ಹಳೆಯ ವಿಡಿಯೋ ಎನ್ನಲಾಗುತ್ತಿದೆ. ಈ ಘಟನೆ ಬಾಲಬ್ಗಾರ್ನ ಆದರ್ಶ್ ನಗರ ಪೊಲೀಸ್ ಠಾಣೆನಲ್ಲಿ ನಡೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಅದೇ ಸಮಯದಲ್ಲಿ ಮಹಿಳೆಯೊಂದಿಗೆ ಕ್ರೂರವಾಗಿ ವರ್ತಿಸಿರುವ ಪೊಲೀಸರನ್ನು ಗುರುತಿಸಲಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪೊಲೀಸ್ ಸಿಬ್ಬಂದಿಯನ್ನು ಗುರುತಿಸಲಾಗಿದೆ ಮತ್ತು ವಿಡಿಯೋದ ತನಿಖೆಯ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ಹೇಳಿದ್ದಾರೆ.
ಬಲ್ಲಭಗಢ್ನ ಎಸಿಪಿ ಜೈವರ್ ರಥ್ ಅವರು ಈ ವಿಡಿಯೋವನ್ನು ವೀಕ್ಷಿಸಿದ್ದು, ಇದು ಬಹಳ ಅವಮಾನಕರ ಎಂದಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತೆ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ, ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಇದೊಂದು ಅಮಾನವೀಯ ಘಟನೆಯಾಗಿದ್ದು, ಈ ಪ್ರಕರಣದ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗದ ಸದಸ್ಯೆ ರೇಣು ಭಾಟಿಯಾ ಪೊಲೀಸ್ ಕಮಿಷನರ್ ಮತ್ತು ಡಿಜಿಪಿ ತನಿಖೆಗೆ ಮನವಿ ಮಾಡಿದ್ದಾರೆ.