ಪ್ಲಾಸ್ಟಿಕ್ ಸರ್ಜರಿಯಿಂದ ದುರಂತ ಅಂತ್ಯ ಕಂಡ 43 ವರ್ಷದ ಖ್ಯಾತ ನಟಿ!

ಅರ್ಜೆಂಟೀನಾದ ನ್ಯಾಷನಲ್ ಅಡ್ಮಿನಿಸ್ಟ್ರೇಷನ್ ಆಫ್ ಡ್ರಗ್ಸ್, ಫುಡ್ ಅಂಡ್ ಮೆಡಿಕಲ್ ಟೆಕ್ನಾಲಜಿಯಿಂದ ನಿಷೇಧಿಸಲ್ಪಟ್ಟಿದ್ದ ಪಾಲಿಮಿಥೈಲ್ಮೆಥಾಕ್ರಿಲೇಟ್ ಚುಚ್ಚು ಮದ್ದನ್ನು ಸರ್ಜರಿ ಸಮಯದಲ್ಲಿ ನಟಿ ಸಿಲ್ವಿನಾ ಲೂನಾಗೆ ನೀಡಲಾಗಿತ್ತು.

Written by - Puttaraj K Alur | Last Updated : Sep 3, 2023, 10:42 AM IST
  • ಪ್ಲಾಸ್ಟಿಕ್ ಸರ್ಜರಿಯ ಅಡ್ಡಪರಿಣಾಮದಿಂದ ಅರ್ಜೆಂಟೀನಾದ ಖ್ಯಾತ ನಟಿ ದುರಂತ ಅಂತ್ಯ
  • ಕೇವಲ 43 ವರ್ಷಕ್ಕೆ ಅಕಾಲಿಕವಾಗಿ ಸಾವನ್ನಪ್ಪಿದ ನಟಿ ಸಿಲ್ವಿನಾ ಲೂನಾ
  • 2011ರಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ನಟಿ
ಪ್ಲಾಸ್ಟಿಕ್ ಸರ್ಜರಿಯಿಂದ ದುರಂತ ಅಂತ್ಯ ಕಂಡ 43 ವರ್ಷದ ಖ್ಯಾತ ನಟಿ! title=
ದುರಂತ ಅಂತ್ಯ ಕಂಡ 43 ವರ್ಷದ ಖ್ಯಾತ ನಟಿ!

ನವದೆಹಲಿ: ಪ್ಲಾಸ್ಟಿಕ್ ಸರ್ಜರಿಯ ಅಡ್ಡಪರಿಣಾಮದಿಂದ ಅರ್ಜೆಂಟೀನಾದ ಪ್ರಸಿದ್ಧ ನಟಿ, ರೂಪದರ್ಶಿ ಮತ್ತು ಟಿವಿ ನಿರೂಪಕಿ ಸಿಲ್ವಿನಾ ಲೂನಾ ದುರಂತ ಅಂತ್ಯ ಕಂಡಿದ್ದಾರೆ. ನಟಿಯ ಅಕಾಲಿಕ ನಿಧನವು ಅವರ ಕೋಟ್ಯಂತರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ.

43 ವರ್ಷದ ಈ ನಟಿ 2011ರಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಆಕೆಯ ವಕೀಲರಾದ ಫರ್ನಾಂಡೋ ಬರ್ಲಾಂಡೋ ಅವರು ನಟಿಯ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ದೀರ್ಘಕಾಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಳು. ಆಕೆ ಇನ್ನೂ ಬದುಕುವುದು ಕಷ್ಟವೆಂದು ವೈದ್ಯರು ನಟಿಯ ಕುಟುಂಬಸ್ಥರಿಗೆ ತಿಳಿಸಿದ್ದರು. ಹೀಗಾಗಿ ಕುಟುಂಬ ಸದಸ್ಯರು ಆಕೆಯ ಜೀವ ಬೆಂಬಲದಿಂದ ಸಂಪರ್ಕ ಕಡಿತಗೊಳಿಸುವಂತೆ ವೈದ್ಯರಿಗೆ ತಿಳಿಸಿದ್ದರು.   

 
 
 
 

 
 
 
 
 
 
 
 
 
 
 

A post shared by SILVINA LUNA (@silvinalunaoficial)

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರರು.. 9 ಮಂದಿ ಸಾವು!

ನಟಿ ಸಿಲ್ವಿನಾ ಲೂನಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಅರ್ಜೆಂಟೀನಾದ ನ್ಯಾಷನಲ್ ಅಡ್ಮಿನಿಸ್ಟ್ರೇಷನ್ ಆಫ್ ಡ್ರಗ್ಸ್, ಫುಡ್ ಅಂಡ್ ಮೆಡಿಕಲ್ ಟೆಕ್ನಾಲಜಿಯಿಂದ ನಿಷೇಧಿಸಲ್ಪಟ್ಟಿದ್ದ ಪಾಲಿಮಿಥೈಲ್ಮೆಥಾಕ್ರಿಲೇಟ್ ಚುಚ್ಚು ಮದ್ದನ್ನು ಸರ್ಜರಿ ಸಮಯದಲ್ಲಿ ನಟಿಗೆ ನೀಡಲಾಗಿತ್ತು. ಈ ಕಾರಣದಿಂದ ನಟಿಯ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು ಎಂದು ವರದಿಯಾಗಿದೆ.

ಸಿಲ್ವಿನಾ ಲೂನಾ ಸಾಯುವ ಕೆಲ ವಾರಗಳ ಮೊದಲು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಆದರೆ ಈ ಶಸ್ತ್ರಚಿಕಿತ್ಸೆಯು ಅಪಾಯಕಾರಿ ತಿರುವು ಪಡೆದುಕೊಂಡಿತ್ತು. ಬಳಿಕ ಮೂತ್ರಪಿಂಡ ವೈಫಲ್ಯ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ನಟಿಯನ್ನು ಉಳಿಸಲು ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: Cancer Treatment: 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ, ಇಲ್ಲಿ ನಡೆಯಿತು ಪವಾಡ!

ಲೂನಾಗೆ 2015ರಲ್ಲಿ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿತ್ತು. ನಟಿಗೆ ಕಿಡ್ನಿ ಕಸಿಯ ಅಗತ್ಯವಿತ್ತು ಮತ್ತು ಜೀವ ಉಳಿಸಿಕೊಳ್ಳಲು ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News