Chandrayaan 3: ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ತನ್ನ ಉದ್ದೇಶಿತ ಗುರಿಗಳನ್ನೂ ಮೀರಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಝ ಲ್ಯಾಂಡರ್ ಯಶಸ್ವಿಯಾಗಿ ಹಾಪ್ (ನೆಗೆತ) ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಟ್ವೀಟ್ ಮೂಲಕ ತಿಳಿಸಿದೆ. ಅಂದರೆ, ವಿಕ್ರಮ್ ಲ್ಯಾಂಡರ್ ಸತತ ಎರಡನೆಯ ಬಾರಿಗೆ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದೆ. ಆದೇಶ ನೀಡಿದಾಗ, ಲ್ಯಾಂಡರ್ ತನ್ನ ಇಂಜಿನ್ಗಳನ್ನು ಚಾಲನೆಗೊಳಿಸಿ, ತನ್ನನ್ನು ತಾನು ಅಂದಾಜು 40 ಸೆಂಟಿಮೀಟರ್ ಎತ್ತರಕ್ಕೆ ಕೊಂಡೊಯ್ದು, ಅಲ್ಲಿಂದ 30-40 ಸೆಂಟಿಮೀಟರ್ ದೂರದಲ್ಲಿ ಸುರಕ್ಷಿತವಾಗಿ ಸೇಫ್ ಲ್ಯಾಂಡಿಂಗ್ ನಡೆಸಿತು ಎಂದು ಇಸ್ರೋ ಟ್ವೀಟ್ ಮಾಡಿದೆ.
Chandrayaan-3 Mission:
🇮🇳Vikram soft-landed on 🌖, again!Vikram Lander exceeded its mission objectives. It successfully underwent a hop experiment.
On command, it fired the engines, elevated itself by about 40 cm as expected and landed safely at a distance of 30 – 40 cm away.… pic.twitter.com/T63t3MVUvI
— ISRO (@isro) September 4, 2023
ಈ ಯಶಸ್ಸು ಏನನ್ನು ಪ್ರತಿನಿಧಿಸುತ್ತದೆ?
ವಿಕ್ರಮ್ ಲ್ಯಾಂಡರ್ ಹಾಪ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ.
ಮೊದಲನೆಯದಾಗಿ, ಈ ಪ್ರಯೋಗ ಬಾಹ್ಯಾಕಾಶ ನೌಕೆಯ ಇಂಜಿನ್ಗಳ ತಾಂತ್ರಿಕ ಸಾಮರ್ಥ್ಯ ಮತ್ತು ಲ್ಯಾಂಡಿಂಗ್ ವ್ಯವಸ್ಥೆಗಳ ಸಾಮರ್ಥ್ಯ ಮತ್ತು ನಂಬಿಕಾರ್ಹತೆಗಳನ್ನು ಸಾಬೀತುಪಡಿಸಿದೆ. ಇಂಜಿನ್ಗಳನ್ನು ಯಶಸ್ವಿಯಾಗಿ ಚಾಲನೆಗೊಳಿಸಿ, ತನ್ನನ್ನು ತಾನು ಮೇಲಕ್ಕೊಯ್ದು, ಮರಳಿ ಸುರಕ್ಷಿತವಾಗಿ ಲ್ಯಾಂಡಿಂಗ್ ನಡೆಸುವ ಮೂಲಕ ಲ್ಯಾಂಡರ್ ಚಂದ್ರನ ಮೇಲ್ಮೈ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ಸಂಚರಿಸುವ, ಕಾರ್ಯಾಚರಿಸಬಲ್ಲೆ ಎಂದು ಸಾರಿದೆ. ಈ ಯಶಸ್ಸು ಸಂಕೀರ್ಣ ಚಲನೆ ಮತ್ತು ಕಾರ್ಯಾಚರಣೆಗಳನ್ನು ನಡೆಸುವ ಭರವಸೆ ಮೂಡಿಸಿ, ಆ ಮೂಲಕ ಬಾಹ್ಯಾಕಾಶದಿಂದ ಮಾದರಿಗಳನ್ನು ಭೂಮಿಗೆ ತರುವುದು, ಮಾನವ ಸಹಿತ ಗಗನಯಾತ್ರೆ ಕೈಗೊಳ್ಳುವುದು ಸೇರಿದಂತೆ, ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಅವಶ್ಯಕವಾಗಿದೆ.
ಎರಡನೆಯದಾಗಿ, ಹಾಪ್ ಪ್ರಯೋಗದ ಯಶಸ್ಸು, ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಅನ್ವೇಷಕರಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸಿದೆ. ಸಣ್ಣ ವ್ಯಾಪ್ತಿಯಲ್ಲೇ ಆದರೂ, ಒಂದು ಬಾಹ್ಯಾಕಾಶ ನೌಕೆ ಮೇಲಕ್ಕೆ ಹಾರುವ ಸಾಮರ್ಥ್ಯ ಪ್ರದರ್ಶಿಸುವುದು ಚಂದ್ರನ ಮೇಲ್ಮೈಯ ದುರ್ಗಮ ಪ್ರದೇಶಗಳನ್ನು ತಲುಪಲು ಹೊಸ ಸಾಧ್ಯತೆಗಳನ್ನು ತೆರೆಯುತ್ತವೆ. ಇದು ಭವಿಷ್ಯದಲ್ಲಿ ಚಂದ್ರನ ಮೇಲ್ಮೈಯ ವಿವಿಧ ಪ್ರದೇಶಗಳಿಂದ ಮಾದರಿಗಳನ್ನು ಭೂಮಿಗೆ ತರುವಂತಹ ಪ್ರಯೋಗಗಳಿಗೆ ಸಹಕಾರಿಯಾಗಿರಲಿದ್ದು, ಚಂದ್ರನ ವಾತಾವರಣದ ಕುರಿತಾದ ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸಲಿದೆ.
ಇದನ್ನೂ ಓದಿ- ಭಾರತಕ್ಕಷ್ಟೆ ಅಲ್ಲ, ಇಡೀ ವಿಶ್ವಕ್ಕೆ ಚಂದ್ರಯಾನ-3 ಏಕೆ ಮುಖ್ಯವಾಗಿದೆ?
ಅದಲ್ಲದೆ, ರಾಂಪ್, ಚಾಸ್ಟ್ (ChaSTE), ಐಎಲ್ಎಸ್ಎ ರೀತಿಯ ಉಪಕರಣಗಳ ಯಶಸ್ವಿ ನಿಯೋಜನೆ ಮತ್ತು ಮರುನಿಯೋಜನೆ, ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ ಮತ್ತು ಸದೃಢವಾಗಿದೆ ಎಂದು ಸಾಬೀತುಪಡಿಸಿವೆ. ಆ ಮೂಲಕ ಭವಿಷ್ಯದ ಯೋಜನೆಗಳು ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುವಾಗ, ಈ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿರಬಹುದು.
ಆ ಮೂಲಕ, ವಿಕ್ರಮ್ ಲ್ಯಾಂಡರ್ ಹಾಪ್ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿರುವುದು ಬಾಹ್ಯಾಕಾಶ ನೌಕೆಯ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ನಂಬಿಕಾರ್ಹತೆಯನ್ನು ಸಾಬೀತುಪಡಿಸಿ, ಭವಿಷ್ಯದ ಚಂದ್ರ ಅನ್ವೇಷಣೆಗಳಿಗೆ ಸ್ಫೂರ್ತಿ ನೀಡಿದೆ.
ಚಾಂಗ್ಇ - 4 ಯೋಜನೆ: ಲ್ಯಾಂಡರ್ ಮತ್ತು ರೋವರ್ ನಡುವಿನ ಸಹಕಾರ
ಚೈನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ಸಿಎನ್ಎಸ್ಎ) ಕೈಗೊಂಡ ಚಾಂಗ್ಇ-4 ಯೋಜನೆ ಚಂದ್ರನ ಅನ್ವೇಷಣೆಯಲ್ಲಿ ಒಂದು ಮಹತ್ವದ ಸಾಧನೆಯಾಗಿದೆ. ಚಾಂಗ್ಇ-4ರ ಲ್ಯಾಂಡರ್ಗೆ ನೆಗೆಯುವ ಸಾಮರ್ಥ್ಯವಿರಲಿಲ್ಲ. ಆದರೆ, ಅದು ಯುತು 2 ರೋವರ್ಗೆ ಸೂಕ್ತ ನಿಲ್ದಾಣವಾಗಿತ್ತು. ಈ ಯುತು 2 ರೋವರ್ ಸಣ್ಣ ಪ್ರಮಾಣದಲ್ಲಿ ನೆಗೆಯಬಲ್ಲದಾಗಿತ್ತು.
1. ಯೋಜನಾ ಉದ್ದೇಶಗಳು: ಚಾಂಗ್ಇ-4 ಯೋಜನೆ ಪ್ರಮುಖವಾಗಿ ಚಂದ್ರನ ನಕ್ಷೆ ರಚಿಸಿರದ ದೂರದ ಬದಿಯನ್ನು ಅನ್ವೇಷಿಸುವ ಗುರಿ ಹೊಂದಿತ್ತು. ಈ ಪ್ರದೇಶ ವಿಶಿಷ್ಟ ಭೂವೈಜ್ಞಾನಿಕ ಲಕ್ಷಣಗಳನ್ನು ಹೊಂದಿದ್ದು, ಚಂದ್ರನ ಉಗಮ ಮತ್ತು ವಿಕಾಸವನ್ನು ತಿಳಿಯಲು ಮಹತ್ತರ ಮಾಹಿತಿಗಳನ್ನು ಒದಗಿಸುತ್ತದೆ.
2. ಲ್ಯಾಂಡರ್ ಮತ್ತು ರೋವರ್: ಈ ಯೋಜನೆ ಲ್ಯಾಂಡರ್ ಮತ್ತು ಯುತು 2 ಹೆಸರಿನ ರೋವರ್ಗಳನ್ನು ಒಳಗೊಂಡಿತ್ತು. ಈ ಲ್ಯಾಂಡರ್ ಸಂವಹನ ಮತ್ತು ವೈಜ್ಞಾನಿಕ ವೀಕ್ಷಣೆಗಳಿಗೆ ಸ್ಥಿರ ತಾಣವಾಗಿ ಕಾರ್ಯಾಚರಿಸಿದರೆ, ರೋವರ್ ಸುತ್ತ ಮುತ್ತ ಚಲಿಸಲು ಮತ್ತು ಅನ್ವೇಷಣೆ ನಡೆಸಲು ವಿನ್ಯಾಸಗೊಂಡಿತ್ತು.
3. ದೂರದ ಬದಿಯಲ್ಲಿ ಲ್ಯಾಂಡಿಂಗ್: ಚಾಂಗ್ಇ 4 ಜನವರಿ 2019ರಲ್ಲಿ ಚಂದ್ರನ ದೂರದ ಮೇಲ್ಮೈಯಲ್ಲಿ, ಅದರಲ್ಲೂ ಚಂದ್ರನ ಐಟ್ಕೆನ್ ಬೇಸಿನ್ನಲ್ಲಿ ಐತಿಹಾಸಿಕ ಲ್ಯಾಂಡಿಂಗ್ ನಡೆಸಿತು. ಇದು ಚಂದ್ರನ ದೂರದ ಬದಿಯ ಮೊತ್ತಮೊದಲ ಸಾಫ್ಟ್ ಲ್ಯಾಂಡಿಂಗ್ ಆಗಿತ್ತು.
4. ಹಾಪಿಂಗ್ ಸಾಮರ್ಥ್ಯ: ಯುತು 2 ವಿಶಿಷ್ಟವಾದ ಹಾಪಿಂಗ್ ಯಾಂತ್ರಿಕತೆಯನ್ನು ಪಡೆದಿತ್ತು. ಅದು ತನ್ನ ಕಾಲುಗಳನ್ನು ಚಾಚಿ, ಸಣ್ಣದಾಗಿ ಜಿಗಿದು, ಅದರ ಹಾದಿಯಲ್ಲಿರುವ ಅಡೆತಡೆಗಳನ್ನು ತಪ್ಪಿಸಿ, ಚಂದ್ರನ ಮೇಲ್ಮೈಯ ವಿವಿಧ ಪ್ರದೇಶಗಳನ್ನು ಅನ್ವೇಷಿಸಬಲ್ಲದಾಗಿತ್ತು. ಈ ಹಾಪಿಂಗ್ ಸಾಮರ್ಥ್ಯ ರೋವರ್ಗೆ ಸಣ್ಣ ಕಲ್ಲುಗಳು, ಸಣ್ಣ ಕುಳಿಗಳಂತಹ ಬೇರೆ ಬೇರೆ ಸವಾಲುಗಳನ್ನು ಮೀರಲು ಸಹಾಯಕವಾಗಿತ್ತು. ಆ ಮೂಲಕ, ಕೇವಲ ಚಕ್ರಗಳಿಂದ ಚಲಿಸಲು ಸಾಧ್ಯವಿಲ್ಲದಂತಹ ಪ್ರದೇಶಗಳನ್ನು ಇದು ತಲಪಲು ಸಾಧ್ಯವಿತ್ತು.
ಇದನ್ನೂ ಓದಿ- ಹಣೆಯಲ್ಲಿ ಸಿಂಧೂರ, ಕೊರಳಲ್ಲಿ ಮಾಂಗಲ್ಯ..! ಚಂದ್ರಯಾನ-3 ವಿಜ್ಞಾನಿಗಳನ್ನು ಹೊಗಳಿದ ಕಂಗನಾ
5. ವೈಜ್ಞಾನಿಕ ಪ್ರಯೋಗಗಳು: ಯುತು 2 ತನ್ನ ಕಾರ್ಯಾಚರಣಾ ಅವಧಿಯಲ್ಲಿ ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಂಡಿತ್ತು. ಅದು ಚಂದ್ರನ ಮೇಲ್ಮೈ ಸಂಯೋಜನೆಗಳ ಅಧ್ಯಯನ ಮಾಡಿ, ವಿಕಿರಣ ಮಟ್ಟವೂ ಸೇರಿದಂತೆ ಚಂದ್ರನ ಉಪಮೇಲ್ಮೈ ರಚನೆಯನ್ನು ವಿಶ್ಲೇಷಿಸಿತು.
6. ಸಂವಹನ ರಿಲೇ: ಲ್ಯಾಂಡರ್ ಒಂದೇ ಪ್ರದೇಶದಲ್ಲಿ ಸ್ಥಿರವಾಗಿದ್ದು, ರೋವರ್ ಮತ್ತು ಭೂಮಿಯ ನಡುವೆ ರಿಲೇ ಕೇಂದ್ರವಾಗಿ ಕಾರ್ಯಾಚರಿಸುತ್ತಿತ್ತು. ಆ ಮೂಲಕ ಸತತವಾಗಿ ಮಾಹಿತಿ ಪ್ರಸಾರಕ್ಕೆ ನೆರವಾಗಿತ್ತು.
7. ದೀರ್ಘಾವಧಿ: ಮೂಲತಃ ಸಣ್ಣ ಅವಧಿಯ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಿದ್ದರೂ, ಲ್ಯಾಂಡರ್ ಹಾಗೂ ಯುತು 2 ನಿರೀಕ್ಷಿತ ಕಾರ್ಯಾವಧಿಯನ್ನು ಮೀರಿ ಕಾರ್ಯಾಚರಿಸಿದ್ದವು. ಆ ಮೂಲಕ ಮಹತ್ವದ ಮಾಹಿತಿಗಳನ್ನು ಒದಗಿಸುತ್ತಿದ್ದವು.
ಚಾಂಗ್ಇ 4 ಯೋಜನೆ ಮತ್ತು ಯುತು 2 ರೋವರ್ನ ನೆಗೆಯುವ ಸಾಮರ್ಥ್ಯ ಚಂದ್ರನ ದೂರದ ಬದಿಯ ಕುರಿತು ನಮ್ಮ ಜ್ಞಾನವನ್ನು ಹೆಚ್ಚಿಸಿ, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಚೀನಾದ ಅಭಿವೃದ್ಧಿಯನ್ನು ಪ್ರದರ್ಶಿಸಿದೆ. ಅದರೊಡನೆ, ಚಂದ್ರನ ಭೂವಿಜ್ಞಾನ ಮತ್ತು ಇತಿಹಾಸವನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ, ರಕ್ಷಣಾ ಮತ್ತು ರಾಜಕೀಯ ವಿಶ್ಲೇಷಕರು)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.