Shivshakti Point Sunrise: ಇನ್ನೊಂದೆಡೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗಲಿದೆ. ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಸೂರ್ಯನ ಶಾಖದಿಂದ ಶಕ್ತಿಯನ್ನು ಪಡೆದು ಮತ್ತೆ ಕಾರ್ಯ ಪ್ರಾರಂಭಿಸುತ್ತದೆ.
ಕೆಲವು ದಿನಗಳ ಹಿಂದಷ್ಟೇ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೃದುವಾಗಿ ಲ್ಯಾಂಡ್ ಆಗಿ ಚಂದ್ರಯಾನ 3 ಯಶಸ್ವಿಯಾಗಿತ್ತು. ಇದೀಗ ಮತ್ತೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿದೆ. ಏನಿದು ಎರಡೆರಡು ಬಾರಿ ಲ್ಯಾಂಡಿಂಗ್ ಅಂತಿರಾ.? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
Pragyana Rover on Moon:ಏಳು ದಿನಗಳ ಪ್ರಯಾಣದಲ್ಲಿ ಪ್ರಗ್ಯಾನ್ ರೋವರ್ ನೀಡಿದ ಮಾಹಿತಿಯ ಪ್ರಕಾರ ಆಮ್ಲಜನಕ, ಗಂಧಕ, ಕಬ್ಬಿಣ ಮತ್ತು ನಿಕಲ್ ಚಂದ್ರನ ಮೇಲೆ ಇದೆ ಎನ್ನುವುದು ಖಚಿತವಾಗಿದೆ.
Aditya-L1 Mission: ಸೆಪ್ಟೆಂಬರ್ ಮೊದಲ ವಾರದಲ್ಲಿ ಸೂರ್ಯನ ಅಧ್ಯನಕ್ಕೆ ‘Aditya L-1’ ಯೋಜನೆ ಕೈಗೊಳ್ಳಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದರು.
Chandrayaan-3 mission: ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಾಕ್ ಪ್ರಜೆಯ ಹಾಸ್ಯದ ಉತ್ತರಕ್ಕೆ ನೆಟಿಜನ್ಗಳು ಫಿದಾ ಆಗಿದ್ದಾರೆ. @Joydas ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಇಡೀ ದೇಶವೇ ನಿರೀಕ್ಷೆ ಹೊಂದಿದ್ದ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ ಶ್ರಮಿಸಿದ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳು ಹಾಗೂ ಸಿಬ್ಬಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. "ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿಟ್ಟಿದೆ.
Chandrayaan-3 Moon Landing: ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಕಾರಣ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಹೀಗಾಗಿ ಅಲ್ಲಿಂದಲೇ ದೇಶವಾಸಿಗಳ ಜೊತೆ ವರ್ಚುವಲ್ ರೀತಿಯಲ್ಲಿ ಚಂದ್ರಯಾನ-3 ವೀಕ್ಷಿಸಲಿದ್ದಾರೆ
ಇಂದು ಚಂದ್ರಯಾನ -3 ಲ್ಯಾಂಡಿಂಗ್ಗೆ ಕ್ಷಣಗಣನೆ ಚಂದ್ರಯಾನ-3 ಲ್ಯಾಂಡಿಂಗ್ಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಇಂದು ಸಂಜೆ 5.27ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಕಲ ಸಿದ್ಧತೆ ನಡೆಸುತ್ತಿದೆ.
ಭಾರತದ ಮಹತ್ವಾಕಾಂಕ್ಷೆಯ ಮಿಶನ್ ಚಂದ್ರಯಾನ್-2 ರ ವಿಕ್ರಮ್ ಲ್ಯಾಂಡರ್ ಅನ್ನು ನಾವು ಪತ್ತೆಹಚ್ಚಿರುವುದಾಗಿ ಹೇಳಿಕೊಂಡ ಅಮೇರಿಕದ ಬಾಹ್ಯಾಕಾಶ ಸಂಸ್ಥೆ(NASA)ಗೆ ಇಸ್ರೋ ತಿರುಗೇಟು ನೀಡಿದೆ.
ಇಸ್ರೋ(ISRO)ದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ್-2 ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಪತನಗೊಂಡಿತ್ತು. ಇದೀಗ ಅದರ ಅವಶೇಷಗಳನ್ನು ನಾಸಾ(NASA) ಪತ್ತೆಹಚ್ಚಿದ್ದು, ಅದರ ಕೀರ್ತಿಯನ್ನು ಚೆನ್ನೈ ಮೂಲದ ಯುವ ಇಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ಅವರಿಗೆ ನೀಡಿದೆ.
ನಾಸಾ ತನ್ನ ಲೂನಾರ್ ರೆಕಾನೈಸನ್ಸ್ ಆರ್ಬಿಟರ್ (LRO) ಕ್ಯಾಮೆರಾ ಕ್ಲಿಕ್ ಮಾಡಿದ ಚಿತ್ರಗಳನ್ನು ಪೋಸ್ಟ್ ಮಾಡಿದೆ. ಇದು ಚಂದ್ರನ ಮೇಲೆ ಸೈಟ್ನ ಬದಲಾವಣೆಗಳನ್ನು ಮತ್ತು ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಯಲ್ಲಿ ಕಠಿಣವಾದ ಇಳಿಯುವಿಕೆಯನ್ನು ಮಾಡಿದ ಮೊದಲು ಮತ್ತು ನಂತರದ ಪ್ರಭಾವದ ಸ್ಥಳವನ್ನು ತೋರಿಸುತ್ತದೆ. ಲ್ಯಾಂಡರ್ನ ಪ್ರಭಾವದ ಸ್ಥಳ ಮತ್ತು ಅನುಕ್ರಮವಾಗಿ ನೀಲಿ ಮತ್ತು ಹಸಿರು ಚುಕ್ಕೆಗಳೊಂದಿಗೆ ವಿಕ್ರಮ್ ಲ್ಯಾಂಡರ್ ಇಳಿದಿರುವಾಗ ರಚಿತವಾದ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನೂ ಇದು ತೋರಿಸಿದೆ.
ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಗೆ ಕಠಿಣವಾಗಿ ಇಳಿಸಿದ ನಂತರ ಇಸ್ರೋ ಅದರೊಂದಿಗೆ ಸಂಪರ್ಕ ಸ್ಥಾಪಿಸಲು ಕನಿಷ್ಠ 14 ದಿನಗಳು ಬೇಕು ಎಂದು ತಿಳಿಸಿತ್ತು . ಈ 14 ದಿನಗಳಲ್ಲಿ, ಥರ್ಮಲ್ ಆಪ್ಟಿಕಲ್ ಛಾಯಾಚಿತ್ರಗಳ ಸಹಾಯದಿಂದ ಇಸ್ರೋ ವಿಕ್ರಮ್ ಲ್ಯಾಂಡರ್ ಗುರಿಯನ್ನು ಸಾಧಿಸಿದೆ ಎನ್ನಲಾಗಿದೆ.
ಒಂದು ಕಡೆ ಇಸ್ರೋ ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ನೊಂದಿಗೆ ಸಂಪರ್ಕವನ್ನು ಕಲ್ಪಿಸುವ ಪ್ರಯತ್ನಗಳನ್ನು ಮುಂದುವರೆಸಿದ್ದರೆ, ಇತ್ತ ಕಡೆ ಈಗ ನಾಗಪುರ್ ಸಿಟಿ ಪೋಲಿಸ್ ಟ್ವೀಟ್ ಜನರ ಮನಗೆದ್ದಿದೆ.
ಚಂದ್ರನ ಮೇಲ್ಮೈಗಿಂತ 2.1 ಕಿ.ಮೀ ದೂರದಲ್ಲಿದ್ದಾಗ ಬಾಹ್ಯಾಕಾಶ ಏಜೆನ್ಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಇರುವ ಸ್ಥಳ ಪತ್ತೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಭಾನುವಾರ ಹೇಳಿದ್ದಾರೆ.
ಜೀವನದಲ್ಲಿ ಏರಿಳಿತಗಳು ಇದ್ದದ್ದೇ. ಸಂಪರ್ಕ ಕಡಿದುಕೊಂಡಾಗ ಎಲ್ಲರಿಗೂ ಬೇಸರವಾಗಿರುವುದನ್ನು ನಾನು ನೋಡಿದೆ. ಇದು ಕಡಿಮೆ ಸಾಧನೆಯಲ್ಲ. ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ- ಇಸ್ರೋ ವಿಜ್ಞಾನಿಗಳಿಗೆ ಟ್ವೀಟ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಂತ್ವನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.