Coconut Water: ಎಳನೀರು ಸೇವನೆಯಿಂದ ತೂಕ ನಷ್ಟವಾಗುತ್ತಾ..?

Health benefits of coconut water: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸಿದರೆ ಸುಲಭವಾಗಿ ನೀವು ತೂಕವನ್ನು ಕಳೆದುಕೊಳ್ಳಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮಗೆ ಸಹಕಾರಿಯಾಗಿದೆ.

Written by - Puttaraj K Alur | Last Updated : Sep 16, 2023, 09:45 PM IST
  • ಎಳನೀರು ಕಡಿಮೆ ಕ್ಯಾಲೋರಿ, ಪೊಟ್ಯಾಶಿಯಂ, ಫೈಬರ್ & ಪ್ರೋಟೀನ್ ಹೊಂದಿದೆ
  • ಎಳನೀರು ಸೇವನೆಯು ತೂಕ ನಷ್ಟಕ್ಕೆ ಉತ್ತಮವೆಂದು ಹೇಳಲಾಗುತ್ತದೆ
  • ಎಳನೀರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮಗೆ ಸಹಕಾರಿ
Coconut Water: ಎಳನೀರು ಸೇವನೆಯಿಂದ ತೂಕ ನಷ್ಟವಾಗುತ್ತಾ..? title=
ಎಳನೀರು ಸೇವನೆಯಿಂದ ತೂಕ ನಷ್ಟವಾಗುತ್ತಾ?

ನವದೆಹಲಿ: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದ ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ತೂಕವು ಅನೇಕರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ತೂಕ ಕಳೆದುಕೊಳ್ಳಲು ಡಯಟ್, ವ್ಯಾಯಾಮ, ಜಿಮ್ ಸೇರಿದಂತೆ ಹಲವು ರೀತಿಯಲ್ಲಿ ಸರ್ಕಸ್ ಮಾಡುತ್ತಾರೆ. ಕೆಲವರು ಪ್ರತಿದಿನವೂ ಎಳನೀರು ಸೇವನೆಯಿಂದ ತೂಕ ಕಳೆದುಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ.

ಎಳನೀರು ಸೇವನೆಯಿಂದ ನಿಜವಾಗಿಯೂ ತೂಕ ಕಳೆದುಕೊಳ್ಳಬಹುದೇ? ಅನ್ನೋದು ಅನೇಕರ ಪ್ರಶ್ನೆಯಾಗಿರುತ್ತದೆ. ಇದಕ್ಕೆ ಉತ್ತರವನ್ನು ಇಂದು ನಾವು ನಿಮಗೆ ಹೇಳುತ್ತೇವೆ. ಎಳನೀರು ಕಡಿಮೆ ಕ್ಯಾಲೋರಿ ಹೊಂದಿದ್ದು, ಇದು ಪೊಟ್ಯಾಶಿಯಂ, ಫೈಬರ್ ಮತ್ತು ಪ್ರೋಟೀನ್ ಸೇರಿದಂತೆ ನೈಸರ್ಗಿಕ ಕಿಣ್ವಗಳು, ಖನಿಜಗಳನ್ನು ಹೊಂದಿರುತ್ತದೆ. ಇದು ತೂಕ ನಷ್ಟಕ್ಕೆ ಉತ್ತಮವೆಂದು ಹೇಳಲಾಗುತ್ತದೆ.

ಇದನ್ನೂ ಓದಿ: ಪಪ್ಪಾಯಿ ತಿಂದ ತಕ್ಷಣ ಇವುಗಳನ್ನು ತಿನ್ನುತ್ತೀರಾ? ಹೀಗೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಹಣ್ಣಿನ ರಸಕ್ಕೆ ಹೋಲಿಸಿದರೆ ಎಳನೀರಿನಲ್ಲಿ ಕಡಿಮೆ ಸಕ್ಕರೆ ಇರುತ್ತದೆ. ಎಳನೀರನ್ನು ಹಗಲು ಅಥವಾ ರಾತ್ರಿಯ ವೇಳೆಯೂ ಸೇವಿಸಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸಿದರೆ ಸುಲಭವಾಗಿ ನೀವು ತೂಕವನ್ನು ಕಳೆದುಕೊಳ್ಳಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮಗೆ ಸಹಕಾರಿಯಾಗಿದೆ.

ಎಳನೀರು ಸೇವನೆಯು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ತೂಕ ನಷ್ಟಕ್ಕೆ ನೆರವಾಗುತ್ತದೆ. ಇದಲ್ಲದೇ ಮಲಬದ್ಧತೆ ಮತ್ತು ನಿರ್ಜಲೀಕರಣ ವಿರುದ್ಧ ಹೋರಾಡುತ್ತದೆ. ಹೀಗಾಗಿ ನಿಯಮಿತವಾಗಿ ಎಳನೀರು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳ ಜೊತೆಗೆ ತೂಕ ನಷ್ಟವನ್ನು ಸಹ ಮಾಡಿಕೊಳ್ಳಬಹುದು.  

ಇದನ್ನೂ ಓದಿ: ಏನಿದು ನಿಫಾ ವೈರಸ್? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಅನುಸರಿಸಿ..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News