ನವ ದೆಹಲಿ: ಭಾನುವಾರ (ಡಿ.17) ಗುಜರಾತ್ ನಾಲ್ಕು ವಿಧಾನಸಭಾ ಸ್ಥಾನಗಳ ಆರು ಮತದಾನ ಕೇಂದ್ರಗಳಲ್ಲಿ ಮರು-ಮತದಾನ ನಡೆಯಲಿದೆ. ವಾಡಗಾಂ, ವಿರಗಮ್, ಡಸ್ಕರೋಯಿ ಮತ್ತು ಸಾವಲಿಪಟ್ಟಿಯಲ್ಲಿ ಸೇರಿವೆ. ವಾಲ್ಗಾಂವ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ದಲಿತ ನಾಯಕ ಜಿಗ್ನೇಶ್ ಮೆವಾನಿ ಸ್ಪರ್ಧಿಸುತ್ತಿದ್ದಾರೆ. ವಿರಾಮ್ಗಾಂ ವಿಧಾನಸಭಾ ಕ್ಷೇತ್ರವನ್ನು ಪಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರ ಸ್ಥಾನ ಎಂದು ಪರಿಗಣಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಮರು ಮತದಾನಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇವಿಎಂನಲ್ಲಿನ ದೋಷಗಳ ಕಾರಣ ಚುನಾವಣಾ ಆಯೋಗವು ಈ ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ನಂಬಲಾಗಿದೆ.
ಗುಜರಾತ್ನಲ್ಲಿ ಮೊದಲ ಹಂತದ ಮತದಾನದಲ್ಲಿಯೂ ಸಹ, ಹಲವಾರು ಕ್ಷೇತ್ರಗಳಲ್ಲಿ ಇವಿಎಂ ದೋಷಾರೋಪಣೆ ಬಹಿರಂಗಗೊಂಡಿದೆ ಎಂಬುದು ಗಮನಾರ್ಹ ಸಂಗತಿ.
ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಡಿಸೆಂಬರ್ 9 ರಂದು, 89 ಸ್ಥಾನಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ನಂತರ ಡಿಸೆಂಬರ್ 14, 93 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಎರಡು ಹಂತಗಳಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 68.41ರಷ್ಟು ಸರಾಸರಿ ಮತದಾನ ಆಗಿತ್ತು. ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂತಿಮ ಅಂಕಿ ಅಂಶಗಳ ಪ್ರಕಾರ, ಡಿಸೆಂಬರ್ 14 ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಶೇಕಡಾ 69.99 ರಷ್ಟು ಮತದಾನ ದಾಖಲಾಗಿದೆ.
Re-polling to be conducted at 6 polling stations in Vadgam, Viramgam, Daskroi and Savli, tomorrow #GujaratElection2017 pic.twitter.com/ag8i4MXLIu
— ANI (@ANI) December 16, 2017
ಶನಿವಾರ (ಡಿಸೆಂಬರ್ 9) ಮೊದಲ ಹಂತದಲ್ಲಿ ಸೌರಾಷ್ಟ್ರ, ಕಚ್ ಮತ್ತು ದಕ್ಷಿಣ ಗುಜರಾತ್ನಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯಿತು ಮತ್ತು 66.75 ರಷ್ಟು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಈ ಬಾರಿ ಗುಜರಾತ್ ವಿಧಾನಸಭೆಗೆ ಮತದಾನವು ಹಿಂದಿನ ಚುನಾವಣೆಗೆ ಹೋಲಿಸಿದರೆ 2.91 ರಷ್ಟು ಕಡಿಮೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, 71.32 ರಷ್ಟು ಮತದಾನವನ್ನು ನೋಂದಾಯಿಸಲಾಗಿದೆ. ಗುಜರಾತ್ ಚುನಾವಣೆಯ ಫಲಿತಾಂಶ ಡಿ.18 ರಂದು ಪ್ರಕಟಗೊಳ್ಳಲಿದೆ.