ರಾಜ್ಯದ ಮೂರನೇ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಸೆ.25ರಿಂದ ಆರಂಭ

Vande Bharat Express : ಕರ್ನಾಟಕ ರಾಜ್ಯದಲ್ಲಿ ಮೂರನೇ ವಂದೇ ಭಾರತ ರೈಲು ಸೆಪ್ಟೆಂಬರ್‌ 25 ರಿಂದ ಪ್ರಾರಂಭವಾಗಲಿದ್ದು, ಅದು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸಲಿದೆ.

Written by - Zee Kannada News Desk | Last Updated : Sep 21, 2023, 03:30 PM IST
  • ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಯಾಣದ ಸಮಯ ಸುಮಾರು ಎಂಟೂವರೆ ಗಂಟೆಗಳಲ್ಲಿ 610ಕಿ.ಮೀ ಎಂದು ನಿರೀಕ್ಷಿಸಲಾಗಿದೆ.
  • ರಾಜ್ಯದಲ್ಲಿ ಮೂರನೇ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಪ್ರಾರಂಭವಾಗುತ್ತಿದೆ.
  • ಬೆಂಗಳೂರಿನ ಯಶವಂತಪುರ ನಿಲ್ದಾಣ ಮತ್ತು ಹೈದರಾಬಾದ್‌ನ ಕಾಚೇಗೌಡ ನಿಲ್ದಾಣದ ನಡುವೆ ಸಂಚರಿಸಲಿದೆ.
ರಾಜ್ಯದ ಮೂರನೇ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಸೆ.25ರಿಂದ ಆರಂಭ title=

Bangalore-Hyderabad : ಕರ್ನಾಟಕ ರಾಜ್ಯದಲ್ಲಿ ಮೂರನೇ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಪ್ರಾರಂಭವಾಗುತ್ತಿದೆ. ಇದಕ್ಕೂ ಮೊದಲ ವಂದೇ ಭಾರತ ಎಕ್ಸಪ್ರೆಸ್‌ ರೈಲು ಮೈಸೂರಿನಿಂದ ಚೆನೈಗೆ ಬೆಂಗಳೂರು ಮಾರ್ಗವಾಗಿ ಮತ್ತು ಎರಡನೇ ವಂದೇ ಭಾರತ ಎಕ್ಸಪ್ರೆಸ್‌ ರೈಲು ಬೆಂಗಳೂರಿನಿಂದ ಧಾರವಾಡದವರೆಗೂ ಪ್ರಯಾಣಿಸುತ್ತವೆ. ಇದೀಗ ಕರ್ನಾಟಕದ ಮೂರನೇ ವಂದೇ ಭಾರತ ಎಕ್ಸಪ್ರೆಸ್‌ ರೈಲು ಪ್ರಾರಂಭವಾಗಲಿದ್ದು, ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸಲಿದೆ.

ಎರಡೂ ಐಟಿ ಹಬ್‌ಗಳನ್ನು ಸಂಪರ್ಕಿಸುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನೆ ಸೆ.24ರಂದು ಆಗಲಿದ್ದು, ಒಂದು ದಿನದ ನಂತರ ಸೆಪ್ಟೆಂಬರ್ 25 ರಂದು ರೈಲು ಪ್ರಾರಂಭವಾಗಲಿದೆ.

ಇದನ್ನು ಓದಿ : ಈ ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಭಾರೀ ವರ್ಷಧಾರೆ! ಜಲಪ್ರಳಯದ ಮುನ್ನೆಚ್ಚರಿಕೆ

ಬೆಂಗಳೂರಿನ ಯಶವಂತಪುರ ನಿಲ್ದಾಣ ಮತ್ತು ಹೈದರಾಬಾದ್‌ನ ಕಾಚೇಗೌಡ ನಿಲ್ದಾಣದ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಯಾಣದ ಸಮಯ ಸುಮಾರು ಎಂಟೂವರೆ ಗಂಟೆಗಳಲ್ಲಿ 610ಕಿ.ಮೀ ಎಂದು ನಿರೀಕ್ಷಿಸಲಾಗಿದೆ.

ಈ ರೈಲು ಸೇವೆಯನ್ನು ಭಾರತೀಯ ರೈಲ್ವೆಯ ದಕ್ಷಿಣ ಮಧ್ಯ ರೈಲ್ವೆ ವಿಭಾಗವು ನಿರ್ವಹಿಸುತ್ತದೆ ಮತ್ತು ಇದು ಮಹಬೂಬ್‌ನಗರ, ಕರ್ನೂಲ್, ಅನಂತಪುರ ಮತ್ತು ಧರ್ಮಾವರಂನಲ್ಲಿ ನಿಲ್ಲುತ್ತದೆ. 

ಪ್ರಾಯೋಗಿಕವಾಗಿ ಚಾಲನೆ ನೀಡಲಿರುವ ರೈಲು ಗುರುವಾರ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಹೈದರಾಬಾದ್‌ನ ಕಾಚೆಗುಡದಿಂದ ಬೆಳಿಗ್ಗೆ 5.30 ಕ್ಕೆ ಹೊರಟು ಮಧ್ಯಾಹ್ನ 2 ರ ಸುಮಾರಿಗೆ ಯಶವಂತಪುರ ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2.45ಕ್ಕೆ ಹೊರಟು ರಾತ್ರಿ 11.15ಕ್ಕೆ ಹೈದರಾಬಾದ್ ತಲುಪಲಿದೆ.

ಇದನ್ನು ಓದಿ - Woman Reservation Bill: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಮತ ಚಲಾಯಿಸಿದ ಆ ಇಬ್ಬರು ಯಾರು?

 ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ ಸರಾಸರಿ 71 ಕಿಮೀ ವೇಗದಲ್ಲಿ ಚಲಿಸುತ್ತದೆ. ರೈಲು ಸೇವೆಯ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಅನೇಕ ಐಟಿ ವೃತ್ತಿಪರರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ಬೆಂಗಳೂರು ಮತ್ತು ಹೈದರಾಬಾದ್ ನಡುವೆ ನಿಯಮಿತವಾಗಿ ಪ್ರಯಾಣಿಸುವುದರಿಂದ, ವಂದೇ ಭಾರತ್ ರೈಲು ಪ್ರಯಾಣವನ್ನು ವೇಗವಾಗಿ ಮತ್ತು ಹೆಚ್ಚು ಆರಾಮದಾಯಕವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಾಲಾವಕಾಶದ ದೃಷ್ಟಿಯಿಂದ ಈ ರೈಲು ಕಡಿಮೆ ಅವಧಿಯಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ಗೆ ತಲುಪಲಿದೆ. ಸಾಮಾನ್ಯವಾಗಿ ಬೆಂಗಳೂರು ಮತ್ತು ಹೈದರಾಬಾದ್‌ಗೆ ಡುರಾಂಟೊ ಎಕ್ಸ್‌ಪ್ರೆಸ್ ಸಂಚರಿಸುವ ರೈಲಾಗಿದ್ದು, ಸರಿಸುಮಾರು ಒಂಬತ್ತರಿಂದ ಹತ್ತು ಗಂಟೆಗಳ ಪ್ರಯಾಣದ ಸಮಯವನ್ನು ತೆಗೆದುಕೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News