ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆದ್ದ ದೇಶ ಯಾವುದು? ಭಾರತ ಮುಡಿಗೇರಿಸಿಕೊಂಡ ಮೆಡಲ್ಸ್ ಎಷ್ಟು?

highest medal winning country in asian games: ಈ ಬಾರಿಯ ಏಷ್ಯನ್ ಗೇಮ್ಸ್’ನಲ್ಲಿ 45 ರಾಷ್ಟ್ರಗಖ ಒಟ್ಟು 12,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇನ್ನು ಈ ವರದಿಯಲ್ಲಿ ಯಾವ ದೇಶ ಏಷ್ಯನ್ ಗೇಮ್ಸ್‌ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆದ್ದಿದೆ ಎಂಬುದರ ವರದಿಯನ್ನು ನೀಡಲಿದ್ದೇವೆ.

Written by - Bhavishya Shetty | Last Updated : Sep 23, 2023, 01:39 PM IST
    • ಇಂದಿನಿಂದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ 2023 ಆರಂಭವಾಗುತ್ತಿದೆ
    • ಚೀನಾದ ಹ್ಯಾಂಗ್‌ ಝೌನ ಒಲಿಪಿಂಕ್ಸ್ ಸ್ಪೋರ್ಟ್ಸ್ ಕೇಂದ್ರದಲ್ಲಿ ನಡೆಯಲಿದೆ
    • ಥಾಯ್ಲೆಂಡ್‌ 934 ಕ್ರೀಡಾಪಟುಗಳೊಂದಿಗೆ ಏಷ್ಯನ್ ಗೇಮ್ಸ್ ಕಣಕ್ಕಿಳಿಯುತ್ತಿದೆ
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆದ್ದ ದೇಶ ಯಾವುದು? ಭಾರತ ಮುಡಿಗೇರಿಸಿಕೊಂಡ ಮೆಡಲ್ಸ್ ಎಷ್ಟು? title=
highest medal winning country in asian games

highest medal winning country in asian games history: ಇಂದಿನಿಂದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ 2023 ಆರಂಭವಾಗುತ್ತಿದೆ. ಚೀನಾದ ಹ್ಯಾಂಗ್‌ ಝೌನ ಒಲಿಪಿಂಕ್ಸ್ ಸ್ಪೋರ್ಟ್ಸ್ ಕೇಂದ್ರದಲ್ಲಿ ಭಾರತೀಯ ಕಾಲಮಾನ 5.30ಕ್ಕೆ ನಡೆಯಲಿದೆ

ಈ ಬಾರಿಯ ಏಷ್ಯನ್ ಗೇಮ್ಸ್’ನಲ್ಲಿ 45 ರಾಷ್ಟ್ರಗಖ ಒಟ್ಟು 12,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇನ್ನು ಈ ವರದಿಯಲ್ಲಿ ಯಾವ ದೇಶ ಏಷ್ಯನ್ ಗೇಮ್ಸ್‌ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆದ್ದಿದೆ ಎಂಬುದರ ವರದಿಯನ್ನು ನೀಡಲಿದ್ದೇವೆ.

ಇದನ್ನೂ ಓದಿ: ಏಕದಿನ, ಟೆಸ್ಟ್, ಟಿ20… ಮೂರು ಸ್ವರೂಪದಲ್ಲೂ ಅಗ್ರ ‘ಭಾರತ’! ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ

ಇನ್ನು ಈ ಬಾರಿ ಥಾಯ್ಲೆಂಡ್‌ 934 ಕ್ರೀಡಾಪಟುಗಳೊಂದಿಗೆ ಏಷ್ಯನ್ ಗೇಮ್ಸ್ ಕಣಕ್ಕಿಳಿಯುತ್ತಿದೆ. ಆತಿಥೇಯ ಚೀನಾ 887 ಕ್ರೀಡಾಪಟುಗಳು ಮತ್ತು ಜಪಾನ್ 773 ಕ್ರೀಡಾಪಟುಗಳ ಜೊತೆ ಪದಕ ಬೇಟೆಗೆ ಸಜ್ಜಾಗುತ್ತಿದೆ.

ಸೆಪ್ಟೆಂಬರ್ 23ರಿಂದ ಪ್ರಾರಂಭವಾಗುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಭಾರತದ 653 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.  ನಡೆಸಲಿದ್ದಾರೆ. 16 ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ 40 ಕ್ರೀಡೆಗಳು ನಡೆಯಲಿದ್ದು, ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ಆಯೋಜನೆ ಮಾಡಲಾಗಿದೆ.

ಏಷ್ಯನ್ ಗೇಮ್ಸ್‌ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆದ್ದ ರಾಷ್ಟ್ರ:

ಈ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಚೀನಾದ ಕ್ರೀಡಾಪಟುಗಳು ಈವರೆಗೆ ಒಟ್ಟು 3,187 ಪದಕಗಳನ್ನು ಗೆದಿದ್ದು, ಅದರಲ್ಲಿ  1,473 ಚಿನ್ನದ ಪದಕ ಸೇರಿವೆ. ಎರಡನೇ ಸ್ಥಾನದಲ್ಲಿ ಜಪಾನ್ ಇದ್ದು, 1,032 ಚಿನ್ನ ಸಹಿತ 3,054 ಪದಕಗಳನ್ನು ಗೆದ್ದಿದೆ. ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದ್ದು, 745 ಚಿನ್ನದ ಪದಕಗಳು ಸೇರಿ 2,235 ಪದಕ ಗೆದ್ದಿದೆ.

ಇದನ್ನೂ ಓದಿ: 38 ವರ್ಷದ ಮಹಿಳೆಯ ಜೊತೆ ಎರಡನೇ ಮದುವೆ ಮಾಡಿಕೊಂಡ 68ರ ಹರೆಯದ ಭಾರತದ ಕ್ರಿಕೆಟಿಗ!

ಭಾರತದ ಪದಕ ಪಟ್ಟಿ:

ಇನ್ನು ಭಾರತ 1951 ರಿಂದಲೂ ಏಷ್ಯನ್ ಗೇಮ್ಸ್‌ ಆವೃತ್ತಿಗಳಲ್ಲಿ ಸ್ಪರ್ಧಿಸುತ್ತಿವೆ. ಏಷ್ಯನ್ ಗೇಮ್ಸ್ ಪ್ರತಿ ಆವೃತ್ತಿಯಲ್ಲಿ ಭಾರತ ಕನಿಷ್ಠ ಒಂದು ಚಿನ್ನದ ಪದಕವನ್ನು ಗೆದ್ದಿದೆ. ಇನ್ನು ಭಾರತ ಇದುವರೆಗೆ 665 ಪದಕಗಳನ್ನು ಗೆದ್ದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News