ಬೆಂಗಳೂರು: ಜಿಂದಾಲ್ಗೆ ಕಂಪನಿಗೆ 3,667 ಎಕರೆ ಭೂಮಿ ನೀಡುವ ಮೈತ್ರಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಿನ್ನೆಯಿಂದ ಆರಂಭವಾದ ಎರಡು ದಿನಗಳ ಬಜೆಪಿ ಅಹೋರಾತ್ರಿ ಧರಣಿ ಶನಿವಾರವೂ ಮುಂದುವರೆದಿದೆ.
ಬೆಂಗಳೂರಿನ ಆನಂದ್ ರಾವ್ ಸರ್ಕಲ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ರಾತ್ರಿಯಲ್ಲಾ ಧರಣಿ ಸ್ಥಳದಲ್ಲೇ ಮಲಗಿ, ಇಂದು ಬೆಳಿಗ್ಗೆ ಮತ್ತೆ ಪ್ರತಿಭಟನೆ ಮುಂದುವರೆಸಿದ್ದಾರೆ.
Karnataka: BJP State Chief BS Yeddyurappa and other BJP leaders during the party's all night dharna in Bengaluru against the JSW land deal. BJP has alleged that the state government would get kickbacks once the deal is finalized. pic.twitter.com/DUK1FmNkGM
— ANI (@ANI) June 15, 2019
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಜಿಂದಾಲ್ ಕಂಪನಿಗೆ ಜಮೀನು ಪರಭಾರೆಯಿಂದ ಸರ್ಕಾರಕ್ಕೆ ಲಂಚ ಸಿಕ್ಕಿದೆ ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಮೂಲಗಳ ಪ್ರಕಾರ ಬಿಜೆಪಿ ನಾಯಕರು ಭಾನುವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಮುತ್ತಿಗೆ ಹಾಕಲಿದ್ದಾರೆ ಎನ್ನಲಾಗಿದೆ.