ದಿನಭವಿಷ್ಯ 03-01-2025: ಶುಕ್ರವಾರದಂದು ಧನಿಷ್ಠಾ ನಕ್ಷತ್ರದಲ್ಲಿ ವಜ್ರ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ

Today Horoscope 03rd January 2025: ಶುಕ್ರವಾರದ ಈ ದಿನ ಧನಿಷ್ಠಾ ನಕ್ಷತ್ರ, ವಜ್ರ ಯೋಗ, ವಣಿಜ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jan 3, 2025, 08:04 AM IST
  • ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಶುಕ್ರವಾರ
  • ಈ ದಿನ ಧನಿಷ್ಠಾ ನಕ್ಷತ್ರ, ವಜ್ರ ಯೋಗ, ವಣಿಜ ಕರಣ.
  • ಇಂದು ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಎಚ್ಚರಿಗೆ ಅಗತ್ಯ ತಿಳಿಯಿರಿ.
ದಿನಭವಿಷ್ಯ 03-01-2025:  ಶುಕ್ರವಾರದಂದು ಧನಿಷ್ಠಾ ನಕ್ಷತ್ರದಲ್ಲಿ ವಜ್ರ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ  title=

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಶುಕ್ರವಾರದ ಈ ದಿನ ಧನಿಷ್ಠಾ ನಕ್ಷತ್ರ, ವಜ್ರ ಯೋಗ, ವಣಿಜ ಕರಣ. ಇಂದು ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಎಚ್ಚರಿಗೆ ಅಗತ್ಯ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ನಿಮ್ಮ ಶಕ್ತಿ ಹೆಚ್ಚಾಗಬಹುದು. ಹೊಸ ಉಪಕ್ರಮವನ್ನು ಪ್ರಾರಂಭಿಸಲು ಸವಾಲುಗಳನ್ನು ಆತ್ಮವಿಶ್ವಾಸದಿಂದ ಹೆಚ್ಚಿಸಲು ಇದು ಸೂಕ್ತ ಸಮಯವಾಗಿದೆ. ವೃತ್ತಿ ರಂಗದಲ್ಲಿ ನಿಮ್ಮ ಕಾರ್ಯವೈಖರಿಯು ಇತರರಿಗೆ ಸ್ಪೂರ್ತಿಯಾಗಲಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನೀವಿಂದು ವೃತ್ತಿ ವ್ಯವಹಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಾಗ ಸ್ಥಿರವಾದ ಪ್ರಗತಿ ಮತ್ತು ಚಿಂತನಶೀಲರಾಗಿ ವರ್ತಿಸಿ. ಸವಾಲುಗಳ ಸಂದರ್ಭದಲ್ಲಿ ತಾಳ್ಮೆಯಿಂದ ವರ್ತಿಸಿ. ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡು ಬರಲಿವೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಸಾಮಾಜಿಕ ಸಂಪರ್ಕವನ್ನು ವಿಸ್ತರಿಸಲು ಇದು ಸರಿಯಾದ ಸಮಯ. ನಿಮ್ಮ ಮಧುರವಾದ ಮಾತಿನಿಂದ ಇತರರನ್ನು ನಿಮ್ಮತ್ತ ಆಕರ್ಷಿಸುವಿರಿ. ವೃತ್ತಿ ವ್ಯವಹಾರದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಕೌಟುಂಬಿಕ ಜೀವನದಲ್ಲಿ ಶಾಂತಿ ಇರುತ್ತದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನೀವು ಹೆಚ್ಚು ಭಾವನಾತ್ಮಕವಾಗಿರುವಿರಿ. ಇದು ವೈಯಕ್ತಿಕ ಸಂಬಂಧಗಳಲ್ಲಿ ಸಂಭಾವ್ಯ ಸಂಘರ್ಷಕ್ಕೆ ಕಾರಣವಾಗಬಹುದು. ಸುತ್ತಲಿನ ವಾತಾವರಣವನ್ನು ಆಹ್ಲಾದಕರವಾಗಿರಿಸಲು ಶಾಂತಿಯಿಂದ ಇರುವುದು ಉತ್ತಮ. 

ಇದನ್ನೂ ಓದಿ- ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ತೆರೆಯಲಿದೆ ಪ್ರಗತಿಯ ಹೊಸ ಹಾದಿ, ಹಿಡಿದ ಕೆಲಸಗಳಲ್ಲಿ ಸೋಲೆಂಬುದೇ ಇಲ್ಲ...!

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಮಾಜದಲ್ಲಿ ಇಂದು ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ವೈಯಕ್ತಿಕ ಮತ್ತು ವೃತ್ತಿಪರವಾಗಿ ಧನಾತ್ಮಕ ಪ್ರಗರಿಯನ್ನು ಕಾಣುವಿರಿ. ಅಗತ್ಯವಿದ್ದೆಡೆ ನಿಮ್ಮ ಪ್ರಯತ್ನವನ್ನು ಮುಂದುವರೆಸಲು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಿಂಜರಿಯಬೇಡಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವಿಶ್ಲೇಷಣಾತ್ಮಕವಾಗಿ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಇಂದು ಉತ್ತಮ ಅವಕಾಶಗಳನ್ನು ಪಡೆಯುವಿರಿ. ಯಾವುದೇ ಸಂಘಟನೆಗಳ ಬಗ್ಗೆ ಯೋಚಿಸುತ್ತಿದ್ದರೆ ಇಂದು ಸೂಕ್ತವಾದ ದಿನ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಮರಸ್ಯ ಮತ್ತು ಸಮತೋಲನಕ್ಕೆ ಆದ್ಯತೆ ನೀಡುವುದರಿಂದ ಶುಭವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬಸ್ಥರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ನಿಮ್ಮ ಸ್ಥಿತಿಸ್ಥಾಪಕತ್ವ ಮತ್ತು ನಿರ್ಣಯಗಳನ್ನು ಪರೀಕ್ಷಿಸುವಂತಹ ಕೆಲವು ಸವಾಲುಗಳು ಎದುರಾಗಬಹುದು. ಗೊಂದಲಗಳನ್ನು ತಪ್ಪಿಸಿ ನಿಮ್ಮ ಗುರಿಗಳತ್ತ ಗಮನ ಹರಿಸಿದರೆ ಜಯ ನಿಮ್ಮದೇ ಆಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವನ್ನು ಕಾಣಬಹುದು. 

ಇದನ್ನೂ ಓದಿ- ಇದು ವಿಶ್ವದಲ್ಲೇ ಅತ್ಯಂತ ಅದೃಷ್ಟದ ಸಂಖ್ಯೆ: ಈ ಡೇಟ್‌ನಲ್ಲಿ ಹುಟ್ಟಿದವರಿಗೆ ಲಕ್ಷ್ಮೀ ಯೋಗ ಜನ್ಮಜನ್ಮಕ್ಕೂ ಇರುವುದು! ಧೋನಿ, ಕತ್ರಿನಾ ಹುಟ್ಟಿದ್ದು ಕೂಡ ಇದೇ ದಿನಾಂಕದಲ್ಲಿ

ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಸಾಹಸ ಮನೋಭಾವವು ಇಂದು ಬೇರೆಯವರ ಗಮನವನ್ನು ಸೆಳೆಯಲಿದೆ. ಹೊಸ ಅವಕಾಶಗಳನ್ನು ಅನ್ವೇಷಿಸಲು, ನಿಮ್ಮ ಪರಿದಿಯನ್ನು ವಿಸ್ತರಿಸಲು ಪ್ರೋತ್ಸಾಹವನ್ನು ನೀಡಲಿದೆ. ಕೆಲಸದಲ್ಲಿ ಆಶಾವಾದದಿಂದ ಮುಂದುವರೆಯಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಶಿಸ್ತು ಮತ್ತು ಕಠಿಣ ಪರಿಶ್ರಮ ಇಂದು ನಿಮ್ಮ ಶಕ್ತಿಯಾಗಿದೆ. ದೀರ್ಘಕಾಲಿನ ಗುರಿಗಳ ಮೇಲೆ ಗಮನ ಕೇಂದ್ರೀಕರಿಸುವುದು ಒಳ್ಳೆಯದು. ವೈಯಕ್ತಿಕ ಸಂಬಂಧಗಳಲ್ಲಿ ನಿಮ್ಮ ವಿಶ್ವಾಶಾರ್ಹತೆಯನ್ನು ಪ್ರಶಂಸಿಸಲಾಗುತ್ತದೆ. ಸಾಮಾಜಿಕವಾಗಿ ಸಂಪರ್ಕಗಳು ಹೆಚ್ಚಾಗಲಿವೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನಾವೀನ್ಯತೆ ಮತ್ತು ಸೃಜನಶೀಲತೆ ಇಂದು ನಿಮ್ಮ ಕೆಲಸಗಳನ್ನು ಸಲೀಸಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡಲಿದೆ. ನಿಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸ್ಮಾರ್ಟ್ ವರ್ಕ್ ಮಾಡುವತ್ತ ಗಮನ ಹರಿಸಿ. ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಉತ್ತಮ ಸಮಯ ಕಳೆಯುವಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ಅರ್ಥಗರ್ಭಿತ ಸ್ವಭಾವವು ನಿಮ್ಮನ್ನು ಹೊಸ ಎತ್ತರಕ್ಕೆ ತಲುಪುವಂತೆ ಮಾಡಲಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಉತ್ತಮ ಮಾರ್ಗದರ್ಶನ ಪಡೆಯುವಿರಿ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News