ಇಂದಿನಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ!

ಭಾನುವಾರ ಬಿಜೆಪಿ ಸಂಸದೀಯ ನಾಯಕರ ಸಭೆ ನಡೆಸಿತು. ಈ ಮೂಲಕ, 'ಎಲ್ಲರೂ ಒಟ್ಟಾಗಿ, ಎಲ್ಲರ ಅಭಿವೃದ್ಧಿ, ಎಲ್ಲರ ನಂಬಿಕೆ' ಎಂಬ ಮನೋಭಾವವನ್ನು ಪ್ರತಿಬಿಂಬಿಸುವ ಇಂತಹ ಮಸೂದೆಗಳನ್ನು ತರಲು ತಮ್ಮ ಸರ್ಕಾರ ಮುಂದಾಗಲಿದೆ ಎಂದು ಪ್ರಧಾನಿ ಎಲ್ಲ ಭಾರತೀಯರಿಗೆ ಭರವಸೆ ನೀಡಿದರು.

Last Updated : Jun 17, 2019, 08:40 AM IST
ಇಂದಿನಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ! title=

ನವದೆಹಲಿ: 17 ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಇಂದು ಎಲ್ಲಾ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಂಗಾಮಿ ಸ್ಪೀಕರ್ ಸಂಸದರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.  ಜೂನ್ 19 ರಂದು ಲೋಕಸಭೆ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ.  ಮರುದಿನ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣ ನಡೆಯಲಿದೆ. ಜುಲೈ 5 ರಂದು ಬಜೆಟ್ ಮಂಡಿಸಲಾಗುವುದು.

ಸುಗಮ ಕಲಾಪ ನಡೆಸುವ ಆಶಯದೊಂದಿಗೆ ಸಹಕಾರ ಕೋರಿ ಪ್ರಧಾನಿ ಮೋದಿ ಭಾನುವಾರ ಎನ್​ಡಿಎ ಮೈತ್ರಿಕೂಟ ಹಾಗೂ ಸರ್ವ ಪಕ್ಷಗಳ ಪ್ರತ್ಯೇಕ ಸಭೆ ನಡೆಸಿದರು. ಜೂನ್ 19 ರಂದು ಅವರು 'ಒಂದು ರಾಷ್ಟ್ರ, ಒಂದು ಚುನಾವಣೆ' ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಎಲ್ಲಾ ಪಕ್ಷಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದಾರೆ.

ಲೋಕಸಭೆಯಲ್ಲಿ ಈ ಬಾರಿ ಅನೇಕ ಹೊಸ ಮುಖಗಳಿವೆ ಎಂಬ ಅಂಶವನ್ನು ಒತ್ತಿಹೇಳಿದ ಪ್ರಧಾನಿ, ಕೆಳಮನೆಯ ಮೊದಲ ಅಧಿವೇಶನವು ಹೊಸ ಉತ್ಸಾಹ ಮತ್ತು ಚಿಂತನೆಯೊಂದಿಗೆ ಪ್ರಾರಂಭವಾಗಬೇಕು ಎಂದು ಹೇಳಿದರು. 

Trending News