Henna Applying Tips: ಬಿಳಿ ಕೂದಲನ್ನು ಮುಚ್ಚಿಹಾಕಲು, ಕೂದಲಿಗೆ ಉತ್ತಮ ಕಲರ್ ನೀಡಲು ಸಾಕಷ್ಟು ಜನ ಹೆನ್ನಾ ಅಥವಾ ಮೆಹೆಂದಿಯನ್ನು ಬಳಸುತ್ತಾರೆ. ಮೆಹೆಂದಿ ಸೊಪ್ಪನ್ನು ತಂದು ಅರಿದು ಹಚ್ಚವಷ್ಟು ಸಮಯ ಯಾರಲ್ಲೂ ಇಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆನ್ನಾವನ್ನು ಹಚ್ಚುತ್ತಾರೆ. ಕೂದಲಿಗೆ ಮೆಹೆಂದಿ ಹಚ್ಚಿದಾಗ ಕೂದಲು ಉತ್ತಮ ಕಲರ್ ಪಡೆದುಕೊಳ್ಳುತ್ತದೆ. ಆದರೆ ಕೆಲವೊಮ್ಮೆ ನಮ ಬಯಕೆಗೆ ತಕ್ಕನಾದ ಫಲಿತಾಂಶ ಸಿಗುವುದಿಲ್ಲ ಅದಕ್ಕೆ ಕಾರಣ ನಾವು ಮಾಡುವ ಈ ಸಣ್ಣ ತಪ್ಪುಗಳು....
ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲರೂ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆ ಬಿಳಿ ಕೂದಲನ್ನು ಮರೆಮಾಚಲು ಮೆಹೆಂದಿಯನ್ನು ಹಚ್ಚುತ್ತಾರೆ. ಕೂದಲು ಹೊಳೆಯುವಂತೆ ಮಾಡಲು ಹೆನ್ನಾ ಅಗತ್ಯ ಆದರೆ ಅದನ್ನು ಬಳಸುವಾಗ ಕೆಲವು ತಪ್ಪುಗಳನ್ನು ಮಾಡಬೇಡಿ.
ಕೆಲವರು ಹೆನ್ನಾ ಅಥವಾ ಮೆಹೆಂದಿಯನ್ನು ಮೊಸರಿನ ಜೊತೆ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆದರೆ ಮೆಹೆಂದಿಗೆ ಮೊಸರು ಮಿಕ್ಸ್ ಮಾಡಲೇಬಾರದು ಇದರಿಂದ ಕೂದಲಿಗೆ ಹೆನ್ನಲಾದಲ್ಲಿರುವ ಪ್ರೋಟಿನ್ ಕೂದಲಿಗೆ ಲಭ್ಯವಾಗುವುದಿಲ್ಲ.
ಹೆನ್ನಾ ಅಥವಾ ಮೆಹೆಂದಿಯನ್ನು ಕೂದಲಿಗೆ ಹಚ್ಚುವಾಗ ಅದನ್ನು ಕಲಿಸಿ 10-12 ಗಂಟೆ ನೆನೆಯಲು ಬಿಡಬೇಕು. ನೆನಸಿಲ್ಲವಾದರೇ ಅದು ಉತ್ತಮ ಫಲಿತಾಂಶ ನೀಡುವುದಿಲ್ಲ.
ಹೆನ್ನಾ ಹಚ್ಚುವ ಮುನ್ನ ಕೆಲವು ತಲೆಗೆ ಎಣ್ಣೆ ಹಚ್ಚಿಕೊಳ್ಳುತ್ತಾರೆ. ಆದರೆ ಕೂದಲಿಗೆ ಎಣ್ಣೆ ಹಚ್ಚದಾಗ ಮೆಹೆಂದಿಯನ್ನು ಕೂದಲು ಹೀರಿಕೊಳ್ಳುವುದಿಲ್ಲ ಇದರಿಂದ ನೀವು ಹೆನ್ನಾ ಹಚ್ಚಿದರೂ ಹಚ್ಚಲಾರದಂತೆ ಗೋಚರಿಸುತ್ತದೆ.
ಮೆಹೆಂದಿಯನ್ನು ಬರೀ ನೀರಿನೊಂದಿಗೆ ಕಲಿಸುವುದನ್ನು ಬಿಡಿ. ಏಕೆಂದರೆ ಇದರಿಂದ ಅಷ್ಟಾಗಿ ಉತ್ತಮ ಫಲಿತಾಂಶ ಸಿಗುವುದಿಲ್ಲ. ಮಹೆಂದಿ ಉತ್ತಮವಾಗಿ ಹೊಳಪು ನೀಡುವಂತೆ ಮಾಡಲು ಅದರಲ್ಲಿ ಕಾಫಿ ಪುಯ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 10 ಗಂಟೆ ಬಳಿಕ ಹಚ್ಚಿ. ಇದರಿಂದ ಕೂದಲು ಅಧಿಕ ಕಪ್ಪಾಗಿ ಹೊಳೆಯುವಂತೆ ಕಾಣುತ್ತವೆ.