ರಕ್ಷಣಾ ತಜ್ಞರಾದ ಕಮರ್ ಆಘಾ ಅವರು ಭಾರತ ಏನಾದರೂ ಸಮರ್ಥ ಮತ್ತು ಆಧುನಿಕ ಸೇನಾಪಡೆಯನ್ನು ಒಳಗೊಂಡ ಅಭಿವೃದ್ಧಿ ಹೊಂದಿದ ರಾಷ್ಟ್ರ ಎನಿಸಿಕೊಳ್ಳಬೇಕಾದರೆ, ಅದಕ್ಕೆ ಸದೃಢ ಆರ್ಥಿಕತೆ, ತಡೆರಹಿತ ಕಚ್ಚಾ ತೈಲ ಪೂರೈಕೆ ಮತ್ತು ಜಾಗತಿಕ ಶಾಂತಿ ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಮರ್ ಆಘಾ ಅವರು ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಮಾತುಗಳಿಗೆ ಸಹಮತಿ ಸೂಚಿಸಿದ್ದಾರೆ. ಅವರು ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರ ಎನಿಸಿಕೊಳ್ಳಲು ಶಕ್ತಿಶಾಲಿಯಾದ, ಆಧುನಿಕವಾದ ಸೇನಾಪಡೆಯನ್ನು ಹೊಂದುವುದು ಅತ್ಯವಶ್ಯಕವಾಗಿದೆ ಎಂದಿದ್ದಾರೆ.
ಆದರೆ, ರಕ್ಷಣಾ ಸಚಿವರ ಹೇಳಿಕೆಯನ್ನು ವಿಶ್ಲೇಷಿಸುವಾಗ, ಹಲವಾರು ಇತರ ಅಂಶಗಳನ್ನು ಗಮನಿಸುವುದು ಅವಶ್ಯಕವಾಗಿದೆ ಎಂದು ಆಘಾ ಅಭಿಪ್ರಾಯ ಪಟ್ಟಿದ್ದಾರೆ.
ಹಲವು ಇತರ ಅಂಶಗಳಾದ ಜಾಗತಿಕ ಚಕಮಕಿಗಳು, ಅನಿಯಮಿತ ಮುಂಗಾರು ಮಳೆ, ನೈಸರ್ಗಿಕ ವಿಕೋಪಗಳು, ಅಥವಾ ಕೋವಿಡ್ - 19 ನಂತಹ ಸಾಂಕ್ರಾಮಿಕಗಳು ಒಟ್ಟಾರೆಯಾಗಿ ಭಾರತೀಯ ಸಮಾಜ ಮತ್ತು ದೇಶ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದ್ದರೂ, ಅದರ ಮೇಲೆ ಸಂಪೂರ್ಣ ಪರಿಣಾಮ ಬೀರಬಲ್ಲವು.
ಇದನ್ನೂ ಓದಿ-MS Swaminathan: ಭಾರತದ ‘ಹಸಿರು ಕ್ರಾಂತಿ’ಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ವಿಧಿವಶ
ಭಾರತ ಈಗ ತನ್ನ ಸೇನಾಪಡೆಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆಯೇ ಎಂಬ ಕುರಿತು ಆಘಾ ಅವರು ಅದು ಆರ್ಥಿಕ ಮತ್ತು ಇತರ ಅವಶ್ಯಕ ಸಂಪನ್ಮೂಲಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.
ಪ್ರಸ್ತುತ ಭಾರತ ಉತ್ತಮ ಸ್ಥಿತಿಯಲ್ಲಿದ್ದು, ಕದನದ ಸಂದರ್ಭದಲ್ಲಿ ಸಂಭಾವ್ಯ ವಿರೋಧಿಗಳ ವಿರುದ್ಧ ಸೆಣಸಲು ಸಮರ್ಥವಾಗಿದೆ. ಆದರೆ, ಭಾರತದ ಮುಂದಿನ ಹಾದಿಯಲ್ಲಿ ಸಾಕಷ್ಟು ಕೆಲಸಗಳನ್ನು ನಿರ್ವಹಿಸುವ ಅವಶ್ಯಕತೆಯಿದೆ. ಮೇಲೆ ಹೇಳಿದ ಎಲ್ಲ ಅಂಶಗಳನ್ನು ನಿರ್ವಹಿಸಲು ಸಾಧ್ಯವಿದೆ ಎಂದರೆ, ಭಾರತ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೋರ್ವ ತಜ್ಞರ ಪ್ರಕಾರ, ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ಸ್ಥಾನ ಸಂಪಾದಿಸಲು ಬೇಕಾದ ಎಲ್ಲ ಪೂರ್ವಾಪೇಕ್ಷಿತ ಅಂಶಗಳನ್ನು ಹೊಂದಿದೆ.
ಈ ಗುರಿಯನ್ನು ಸಾಧಿಸಲು, ಭಾರತ ತನ್ನ ಯುವ ಜನತೆಗೆ ತರಬೇತಿ ನೀಡಲು, ಆರ್ಥಿಕ ಅಭಿವೃದ್ಧಿ ಸಾಧಿಸಲು ಮತ್ತು ಸೇನಾಪಡೆಗಳನ್ನು ಇನ್ನಷ್ಟು ಬಲಪಡಿಸಿ, ಅಭಿವೃದ್ಧಿಯ ಹಾದಿಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ಎದುರಿಸಲು ಸಿದ್ಧತೆಗಳನ್ನು ನಡೆಸಬೇಕು ಎಂದು ನಿವೃತ್ತ ಮೇಜರ್ ಜನರಲ್ ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ-Watch: ಈಶ್ಯಾನ್ಯ ರಾಜ್ಯದ ಮಹಿಳೆಯ ಮೇಲೆ ಸ್ಪಾ ಸೆಂಟರ್ ಮಾಲೀಕನ ಹಲ್ಲೆ
ಅವರು ರಕ್ಷಣಾ ಸಚಿವರ ಮಾತುಗಳಿಗೆ ತನ್ನ ಸಹಮತಿ ಸೂಚಿಸಿದ್ದು, ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ಭಾರತ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದಿದ್ದಾರೆ.
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಒಂದು ಸುಭದ್ರ ಆರ್ಥಿಕತೆ ಮತ್ತು ಬಲಿಷ್ಠ ಸೇನೆಯನ್ನು ಹೊಂದುವ ಅವಶ್ಯಕತೆಯಿದೆ. ಭಾರತ ಜಗತ್ತಿನಲ್ಲೇ ಅತ್ಯುತ್ತಮ ರಕ್ಷಣಾ ಸಿಬ್ಬಂದಿಗಳನ್ನು ಹೊಂದಿದ್ದು, ಪ್ರಬಲ ರಾಜಕೀಯ ಇಚ್ಛಾಶಕ್ತಿಯೊಂದಿಗೆ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ಸ್ಥಾನವನ್ನು ಸಂಪಾದಿಸಬಹುದು ಎಂದು ಅವರು ತಿಳಿಸಿದ್ದಾರೆ.
"ಭಾರತದ ಪ್ರಗತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಭಾರತದ ದೀರ್ಘಕಾಲೀನ ಮಿತ್ರ ರಾಷ್ಟ್ರವಾದ ರಷ್ಯಾ ಮಾತ್ರವಲ್ಲದೆ, ಅಮೆರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಮ್, ಹಾಗೂ ವಿವಿಧ ಯುರೋಪಿಯನ್ ರಾಷ್ಟ್ರಗಳು ಭಾರತದೊಡನೆ ಕೈಜೋಡಿಸಿ, ರಕ್ಷಣಾ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಮುಂದೆ ಬಂದಿವೆ" ಎಂದಿದ್ದಾರೆ.
ಅವರು ಭಾರತ ತನ್ನ ನಾಗರಿಕರಿಗೆ ಸೂಕ್ತ ತರಬೇತಿ ನೀಡಲು ಹಣ ಹೂಡಿಕೆ ಮಾಡಿ, ಆ ಮೂಲಕ ಅವರನ್ನೂ 2047ರ ಮೊದಲು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವತ್ತ ಕಾರ್ಯಾಚರಿಸುವಂತೆ ಮಾಡಬೇಕು ಎಂದಿದ್ದಾರೆ.
ನಿವೃತ್ತ ಮೇಜರ್ ಜನರಲ್, ಭಾರತದ 65% ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇಂತಹ ಯುವಜನತೆಯ ಕೌಶಲ್ಯಾಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಕಾರ್ಯಾಚರಿಸಿ, ರಾಷ್ಟ್ರದ ಉತ್ಪಾದಕತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದ್ದಾರೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.