ಲೋಕಸಭೆಯಲ್ಲಿ ನೂತನ ತ್ರಿವಳಿ ತಲಾಖ್ ಮಸೂದೆ ಮಂಡನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಿರೋಧ ಪಕ್ಷಗಳ ಕೋಲಾಹಲದ ನಡುವೆ ಲೋಕಸಭೆಯಲ್ಲಿ ನೂತನ  ಟ್ರಿಪಲ್ ತಲಾಖ್ ಮಸೂದೆಯನ್ನು ಶುಕ್ರವಾರ ಮಂಡಿಸಿತು. 

Last Updated : Jun 21, 2019, 04:35 PM IST
ಲೋಕಸಭೆಯಲ್ಲಿ ನೂತನ ತ್ರಿವಳಿ ತಲಾಖ್ ಮಸೂದೆ ಮಂಡನೆ title=
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಿರೋಧ ಪಕ್ಷಗಳ ಕೋಲಾಹಲದ ನಡುವೆ ಲೋಕಸಭೆಯಲ್ಲಿ ನೂತನ ತ್ರಿವಳಿ ತಲಾಖ್ ಮಸೂದೆಯನ್ನು ಶುಕ್ರವಾರ ಮಂಡಿಸಿತು. ಆ ಮೂಲಕ ನರೇಂದ್ರ ಮೋದಿ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ಸಂಸತ್ತಿನಲ್ಲಿ ಮೊದಲ ಮಸೂದೆ ಮಂಡಿಸಿದೆ. ಕೇಂದ್ರ ಸರ್ಕಾರವು ಈ ಮಸೂದೆ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುತ್ತದೆ ಎಂದು ಸಮರ್ಥಿಸಿಕೊಂಡರೆ, ವಿರೋಧ ಪಕ್ಷಗಳು ಇದು ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದವು .

ಕೇಂದ್ರದಲ್ಲಿ ಸಚಿವ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದು, ದೇಶದಲ್ಲಿ 543 ಟ್ರಿಪಲ್ ತಲಾಖ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್ ಇದನ್ನುನಿಷೇಧಿಸಿದ ನಂತರವೂ 200 ತ್ರಿವಳಿ ತಲಾಖ್ ಪ್ರಕರಣಗಳು ನಡೆದಿವೆ ಎಂದು ಹೇಳಿದರು. 

"ಇದು ಮಹಿಳೆಯರ ಘನತೆಯ ಪ್ರಶ್ನೆಯಾಗಿದೆ ಮತ್ತು ಅದನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುವುದು.ಇದು ಮಹಿಳೆಯರ ನ್ಯಾಯ ಮತ್ತು ಸಬಲೀಕರಣದ ಪ್ರಶ್ನೆಯಾಗಿದೆ. ಕಾನೂನು ಮಾಡಲು ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಕಾನೂನುಗಳನ್ನು ರೂಪಿಸುವುದು ನಮ್ಮ ಕೆಲಸ. ತ್ರಿವಳಿ ತಲಾಖ್ ಸಂತ್ರಸ್ತರಿಗೆ ಈ ಕಾನೂನು ನ್ಯಾಯ ಒದಗಿಸುತ್ತದೆ" ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. 

ಮಸೂದೆಯನ್ನು ಮಂಡಿಸುವುದನ್ನು ವಿರೋಧಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್" ಹೆಂಡತಿ ಮತ್ತು ಕಾನೂನನ್ನು ತ್ಯಜಿಸುವವರನ್ನು ಸಾರ್ವತ್ರಿಕವಾಗಿ ಶಿಕ್ಷಿಸುವ ಕಾನೂನನ್ನು ಮಾಡಿ. ಸುಪ್ರೀಂಕೋರ್ಟ್ ಈಗಾಗಲೇ ಈ ಕೃತ್ಯವನ್ನು ಅಪರಾಧ ಎಂದು ಹೇಳಿದೆ ಆದ್ದರಿಂದ ಕೇವಲ ಒಂದು ಸಮುದಾಯದ ಮೇಲೆ ಮಾತ್ರ ಏಕೆ ಗಮನಹರಿಸಬೇಕು. ಮಸೂದೆಯನ್ನು ರಕ್ಷಿಸುವ ಬದಲು ಮುಸ್ಲಿಂ ಮಹಿಳೆಯರನ್ನು ದುರ್ಬಲರನ್ನಾಗಿ ಮಾಡುತ್ತದೆ. ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳಲು ಅನುಕೂಲಕರವಾಗಿದೆ, ”ಎಂದು ತರೂರ್ ಹೇಳಿದರು.

ಎಐಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೂಡ ಮಸೂದೆಯ ಬಗ್ಗೆ ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿ  "ಬಿಜೆಪಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ತುಂಬಾ ಪ್ರೀತಿ ಇದೆ. ಆದರೆ, ಹಿಂದೂ ಮಹಿಳೆಯರ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸುವ ಹಕ್ಕನ್ನು ಅದು ವಿರೋಧಿಸಿದೆ" ಎಂದು ಹೇಳಿದರು.

Trending News