ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಭೀತಿ! 36 ವರ್ಷಗಳ ಹಳೆಯ ದಾಖಲೆ ಹೇಳುತ್ತಿದೆ ಈ ಸತ್ಯಾಂಶ

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯವು ಅಕ್ಟೋಬರ್ 8 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. 2013ರಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.

Written by - Bhavishya Shetty | Last Updated : Oct 7, 2023, 02:34 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ
    • 36 ವರ್ಷಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ಇದೇ ಮೈದಾನದಲ್ಲಿ ಮುಖಾಮುಖಿಯಾಗಿತ್ತು
    • ಅಕ್ಟೋಬರ್ 8 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕಾದಾಟ
ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಭೀತಿ! 36 ವರ್ಷಗಳ ಹಳೆಯ ದಾಖಲೆ ಹೇಳುತ್ತಿದೆ ಈ ಸತ್ಯಾಂಶ title=
World Cup 2023

India vs Australia: ಟೀಂ ಇಂಡಿಯಾ ವಿಶ್ವಕಪ್ 2023 ರ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. 10 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆಲ್ಲಲು ಭಾರತಕ್ಕೆ ಇದು ಉತ್ತಮ ಅವಕಾಶ ಎನ್ನಬಹುದು. ಇದಕ್ಕೂ ಮುನ್ನವೇ ವಿಚಿತ್ರ ಕಾಕತಾಳೀಯವೊಂದು ತಂಡದ ಅಭಿಮಾನಿಗಳನ್ನು ಕಾಡುತ್ತಿದೆ.

ಇದನ್ನೂ ಓದಿ: ಬಿಸಿಲಿನ ದಾಹಕ್ಕೆ ಸುಸ್ತಾಗಿ ಗ್ಲಾಸ್’ನಲ್ಲಿದ್ದ ನೀರನ್ನು ಗಟಗಟನೆ ಕುಡಿದ ಕರಿನಾಗರ: ವಿಡಿಯೋ ವೈರಲ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯವು ಅಕ್ಟೋಬರ್ 8 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. 2013ರಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಪಂದ್ಯ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. 36 ವರ್ಷಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ ಇದೇ ಮೈದಾನದಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿರುವುದು ವಿಶಿಷ್ಟ ಕಾಕತಾಳೀಯ. ಭಯ ಹುಟ್ಟಿಸುತ್ತಿರುವ ಸಂಗತಿಯೆಂದರೆ ಆ ಪಂದ್ಯದಲ್ಲಿ ಭಾರತ 1 ರನ್‌’ನಿಂದ ಸೋಲನ್ನು ಎದುರಿಸಬೇಕಾಯಿತು. ಹೀಗಿರುವಾಗ ಈ ಬಾರಿಯೂ ಅದೇ ರೀತಿ ಆಗಬಹುದೇ? ಎಂಬ ಭಯ ಅಭಿಮಾನಿಗಳದ್ದು.

ಇದನ್ನೂ ಓದಿ: ಟೀಂ ಇಂಡಿಯಾದ ಐವರು ಸ್ಟಾರ್ ಪ್ಲೇಯರ್ಸ್’ಗೆ ಇದೇ ಕೊನೆಯ ವಿಶ್ವಕಪ್! ನಂತರ ನಿವೃತ್ತಿ ಘೋಷಣೆ

ಇದು 1987ರ ಪಂದ್ಯದ ಸ್ಥಿತಿ…

1987 ರ ವಿಶ್ವಕಪ್‌’ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಕುರಿತು ಮಾತನಾಡುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರು ವಿಕೆಟ್‌’ಗೆ 270 ರನ್ ಗಳಿಸಿತು. ಜೆಫ್ ಮಾರ್ಷ್ ತಂಡದ ಪರ ಗರಿಷ್ಠ 110 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್‌’ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು. ಇವುಗಳ ಹೊರತಾಗಿ ಡೇವಿಡ್ ಬೂನ್ 49 ರನ್ ಮತ್ತು ಡೀನ್ ಜೋನ್ಸ್ 39 ರನ್‌’ಗಳ ಇನ್ನಿಂಗ್ಸ್ ಆಡಿದ್ದರು. ಆಸ್ಟ್ರೇಲಿಯಾ ನೀಡಿದ ಗುರಿ ಬೆನ್ನತ್ತಿದ ಭಾರತ ತಂಡ 269 ರನ್‌’ಗಳಿಗೆ ಆಲೌಟ್ ಆಗಿದ್ದು, ಕೇವಲ 1 ರನ್‌’ಗಳ ಅಂತರದಿಂದ ಸೋಲನುಭವಿಸಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News