Rashmika Mandanna: ವಿಜಯ್ ದೇವರಕೊಂಡ ಜೊತೆಗೆ ಟರ್ಕಿ ಸುತ್ತಾಟ...! ಸೀಕ್ರೆಟ್ ಬಯಲು ಮಾಡಿದ ಫೋಟೋ

Rashmika-Vijay: ಮದುವೆ ವಿಚಾರವಾಗಿ ತಳುಕುಹಾಕಿಕೊಳ್ಳುತ್ತಿರುವ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಇದೀಗ ಹಳೆಯ ಪೋಟೋ ಶೇರ್‌ ಮಾಡಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ  

Written by - Savita M B | Last Updated : Oct 8, 2023, 11:50 AM IST
  • ಅಭಿಮಾನಿಗಳ ಸಖತ್‌ ಫೇವರೆಟ್‌ ಆಗಿರುವ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ
  • ಈ ಹಿಂದೆ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಲ್ಲಿದ್ದರು.
  • ಈಗ ಮತ್ತೆ ಅದೇ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಕನ್‌ಫ್ಯೂಸ್‌ ಮಾಡಿದ್ದಾರೆ.
Rashmika Mandanna: ವಿಜಯ್ ದೇವರಕೊಂಡ ಜೊತೆಗೆ ಟರ್ಕಿ ಸುತ್ತಾಟ...! ಸೀಕ್ರೆಟ್ ಬಯಲು ಮಾಡಿದ ಫೋಟೋ title=

Rashmika Mandanna: ಗೀತಾ ಗೋವಿಂದಂ, ಡಿಯರ್‌ ಕಾಮ್ರೇಡ್‌ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಅಭಿಮಾನಿಗಳ ಸಖತ್‌ ಫೇವರೆಟ್‌ ಆಗಿರುವ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಲ್ಲಿದ್ದರು. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಹಲವಾರು ಸೂಚನೆಗಳು ಸಿಕ್ಕರು ನಾವು ಬರೀ ಪ್ರೆಂಡ್ಸ್‌ ಎಂದು ಹೇಳಿ ಅದಕ್ಕೆ ಫುಲ್‌ ಸ್ಟಾಪ್‌ ಹಾಕುತ್ತಿದ್ದರು. 

ಈಗ ಮತ್ತೆ ನಟಿ ರಶ್ಮಿಕಾ ಮಂದಣ್ಣ ಹಳೆಯ ಪೋಟೋ ಹಾಗೂ ವಿಡಿಯೋಂದನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದು ಹಳೆಯ ಪೋಟೋನೇ ಎಂದು ಅಭಿಮಾನಿಗಳು ನಿಖರವಾಗಿ ಸಾಕ್ಷಿ ಸಮೇತ ಗುರುತಿಸುವುದರ ಜೊತೆಗೆ ಇದು ವಿಜಯ್‌ ದೇವರಕೊಂಡ ಅವರೊಂದಿಗೆ ಟರ್ಕಿ ಪ್ರವಾಸಕ್ಕೆ ತೆರಳಿದ್ದಾಗ ತೆಗೆದುಕೊಂಡಿರುವ ಪೋಟೋ ಎಂದು ಸಹ ಕಾಮೆಂಟ್‌ ಮಾಡುತ್ತಿದ್ದಾರೆ. 

ಇದನ್ನೂ ಓದಿ-Bigg Boss: ಗಾಸಿಪ್‌ ಬೇಡ.. ನಾವು ಬಿಗ್‌ಬಾಸ್‌ಗೆ ಹೋಗ್ತಿಲ್ಲ: ಕ್ಲಾರಿಟಿ ಕೊಟ್ಟ ತಾರೆಯರಿವರು

ಈ ಹಿಂದೆ ಹಂಚಿಕೊಂಡಿದ್ದ ಒಂದೇ ಬ್ಯಾಕ್‌​ಗ್ರೌಂಡ್ ಇರುವ ಪೋಟೋ ನೋಡಿದ ನೆಟ್ಟಿಗರು ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಈಗ ಮತ್ತೆ ಅದೇ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಕನ್‌ಫ್ಯೂಸ್‌ ಮಾಡಿದ್ದಾರೆ. 

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಟರ್ಕಿಯಲ್ಲಿ ತಾನು ಕಳೆದ ರಜಾ ದಿನಗಳ ನೆನಪಿನಲ್ಲಿ ಪೋಟೋ ಮತ್ತು ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡು ಆಕರ್ಷಕ ಕ್ಯಾಪ್ಷನ್‌ನ್ನು ನೀಡಿದ್ದಾರೆ. ಟರ್ಕಿಯಲ್ಲಿ ಈ ಹಿಂದೆ ವಿಜಯ್ ದೇವರಕೊಂಡ ಅವರ ಇತ್ತೀಚಿನ ಚಿತ್ರ 'ಖುಶಿ' ಚಿತ್ರೀಕರಣ ನಡೆದಿತ್ತು. ಆಗ ಇಬ್ಬರು ಅಲ್ಲಿಗೆ ಹೋಗಿದ್ದರು ಎಂದು ಆ ಚಿತ್ರ ತೋರಿಸುತ್ತಿದೆ. 

ಇದನ್ನೂ ಓದಿ-ಮೆಗಾ ಪವರ್‌ ಸ್ಟಾರ್‌ ರಾಮ್ ಚರಣ್ ಫಿಟ್ನೆಸ್ ಗುಟ್ಟೇನು ಗೊತ್ತಾ..? ಮಿಸ್‌ ಮಾಡದೇ ಓದಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News