Nushrratt Bharuccha: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ನಟಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌..!

Nushrratt Bharuccha Return to India: ಪ್ಯಾಲೆಸ್ತೀನ್‌ ಉಗ್ರಗಾಮಿ ಗುಂಪು ಹಮಾಸ್‌ ಹಾಗು ಇಸ್ರೇಲ್‌ ಇಬ್ಬರ ಮಧ್ಯೆ ಯುದ್ದದಲ್ಲಿ ಬಾಲಿವುಡ್‌ ನಟಿ ಸಿಕ್ಕಿಕೊಂಡಿದ್ದರು. ಯುದ್ದ ಪೀಡಿತ ಇಸ್ರೇಲ್‌ನಲ್ಲಿ ನಟಿ ನುಶ್ರತ್‌ ಭರುಚಾ ಸಿಲುಕಿಕೊಂಡದ್ದು, ಭಾರತದ ಚಿತ್ರರಂಗಕ್ಕೆ ಆತಂಕದ ವಿಷಯವಾಗಿತ್ತು. ಈ ನಟಿಯ ಸದ್ಯದ ಪರಿಸ್ಥಿತಿ ಬಗ್ಗೆ ತಿಳಿದು ಬಂದಿದೆ. ಇಲ್ಲಿದೆ ಅದರ ಕಂಪ್ಲೀಟ್‌ ಡೀಟೇಲ್ಸ್‌.

Written by - Savita M B | Last Updated : Oct 8, 2023, 03:35 PM IST
  • ನಟಿ ನುಶ್ರುತ್‌ ಹೈಫಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭಾಗವಹಿಸಲು ಇಸ್ರೇಲ್‌ಗೆ ತೆರಳಿದ್ದರು
  • ನಟಿ ನುಶ್ರುತ್‌ ಶನಿವಾರ ಮಧ್ಯಾಹ್ನ 12.30 ರ ವರೆಗೂ ಅವರು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿದ್ದರು
  • ಸುರಕ್ಷತಾ ದೃಷ್ಠಿಯಿಂದ ಈ ನಟಿಯ ಹೆಚ್ಚಿನ ವಿವರಗಳನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ.
Nushrratt Bharuccha: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ನಟಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌..!  title=

Nushrratt Bharuccha: ನಟಿ ನುಶ್ರುತ್‌ ಹೈಫಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭಾಗವಹಿಸಲು ಇಸ್ರೇಲ್‌ಗೆ ತೆರಳಿದ್ದರು. ಅಲ್ಲಿ ಹಮಾಸ್‌ ಹಾಗು ಇಸ್ರೇಲ್‌ ಯುದ್ದದಲ್ಲಿ 200 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಇನ್ನು 1000ಕ್ಕೂ ಹೆಚ್ಚು ಜನ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಈ ಸಂಘರ್ಷದ ಮದ್ಯೆ ನಮ್ಮ ಭಾರತದ ಬಾಲಿವುಡ್‌ ನಟಿ ನುಶ್ರುತ್‌ ಹೈಫಾ ಸಹ ಸಿಲುಕಿಕೊಂಡಿದ್ದರು. ಅಲ್ಲಿನ ಸದಸ್ಯರು ಹೇಳುವ ಪ್ರಕಾರ ನುಶ್ರತ್‌ ಶನಿವಾರ ಮಧ್ಯಾನ 12.30ಕ್ಕೆ ಮಾತನಾಡಿದ್ದಾರೆಂದು ತಿಳಿಸಿದ್ದಾರೆ.

ಇದನ್ನೂ ಓದಿ-90ರ ದಶಕದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಯಾರು ಗೊತ್ತಾ..! ಇಂದು ಅವರ ತಂಗಿ ಬಿಗ್‌ಸ್ಟಾರ್‌

ಅಕ್ಟೋಬರ್‌ 7ರಂದು ಶನಿವಾರ, ಗಾಜಾ ಪಟ್ಟಿಯಲ್ಲಿರುವ ಉಗ್ರಗಾಮಿ ಗುಂಪು ಹಮಾಸ್ ಮತ್ತು ಇಸ್ರೇಲ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಗಿದೆ. ಇಸ್ರೇಲಿ ಸೇನೆಯ ಪ್ರಕಾರ ಹಮಾಸ್ ಉಗ್ರಗಾಮಿಗಳು ಗಾಜಾ ಪಟ್ಟಿಯಿಂದ ಇಸ್ರೇಲ್‌ ಮೇಲೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದಾರೆ. ಇದರ ಜೊತೆಗೆ ಗಡಿಯ ಬಳಿ ಕಾವಲಿಗೆ ಇದ್ದ ಹಲವಾರು ಇಸ್ರೇಲಿ ಸೈನಿಕರನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ನಟಿ ನುಶ್ರುತ್‌ ಶನಿವಾರ ಮಧ್ಯಾಹ್ನ 12.30 ರ ವರೆಗೂ ಅವರು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿದ್ದರು. ಸುರಕ್ಷತಾ ದೃಷ್ಠಿಯಿಂದ ಈ  ನಟಿಯ ಹೆಚ್ಚಿನ ವಿವರಗಳನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಮತ್ತೆ ಇದಾದ ನಂತರ ಸಂಪರ್ಕಕ್ಕೂ  ಸಾಧ್ಯವಾಗುತ್ತಿರಲಿಲ್ಲ. ನುಶ್ರತ್ ಭರುಚಾ ತಂಡದ ಸದಸ್ಯರು, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದೇವೆ. ಹಾಗೆ ಅವರು ಉತ್ತಮ ಆರೋಗ್ಯ ಮತ್ತು ಯಾವುದೇ ಕಷ್ಟಕ್ಕೆ ಒಳಗಾಗದೆ ಹಿಂತಿರುಗುತ್ತಾರೆ ಎಂದು ವಿಶ್ವಾಸದಿಂದ ಹೇಳಿಕೆ ನೀಡಿದರು. 

ಸದ್ಯಕ್ಕೆ ನಟಿ ನುಶ್ರುತ್‌ ಸುರಕ್ಷಿತೆವಾಗಿ ಇದ್ದಾರೆ ಎಂದು ತಿಳಿದು ಬಂದಿದೆ. ಹಾಗೆ ಅವರು ಭಾರತಕ್ಕೆ ಹಿಂತಿರುಗಿ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯ ಭಾರತೀಯರೆಲ್ಲರಿಗೂ ಖುಷಿ ಕೊಡುವ ಸುದ್ದಿ. ಈಗ ನುಶ್ರುತ್‌ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇಸ್ರೇಲ್‌ನ ರಾಯಾಭಾರಿ ಕಚೇರಿಯ ಸಹಾಯದಿಂದ ಭಾರತಕ್ಕೆ ಯಾವ ಪ್ರಾಣಾಪಾಯವಿಲ್ಲದೆ ಅವರ ಮನೆಗೆ ಸೇರುತ್ತಿದ್ದಾರೆ. ಅವರಿಗೆ ಡೈರೆಕ್ಟ್‌ ಫ್ಲೈಟ್‌  ಸಿಗದ ಕಾರಣ ಕನೆಕ್ಟಿಂಗ್ ವಿಮಾನದ ವ್ಯವಸ್ಥೆ ಮಾಡಿಕೊಂಡು ಅವರ ಮನೆ ತಲುಪುತ್ತಿದ್ದಾರೆ. ಈ ಮಾಹಿತಿ ನುಶ್ರುತ್‌ ಭರುಚಾ ಪ್ರಚಾರಕರು ತಿಳಿಸಿದ್ದಾರೆ.

ಇದನ್ನೂ ಓದಿ-ಇಂದಿನಿಂದ ಶುರುವಾಗ್ತಿದೆ ಬಿಗ್‌ ಬಾಸ್‌ ಕನ್ನಡ 10: JioCinema ದಲ್ಲಿವೆ ಹತ್ತು ಹಲವು ವಿಶೇಷಗಳು!

ಭಾರತಕ್ಕೆ ನುಶ್ರುತ್‌ ವಾಪಾಸ್‌ ಆಗದ ಕಾರಣ, ಹೆಚ್ಚಿನ ಮಾಹಿತಿಯನ್ನು ಹೊರಹಾಕುತ್ತಿಲ್ಲ. ಈ ನಟಿ ಸುರಕ್ಷತೆಯಗಾಗಿ ಯಾವ ಮಾಹಿತಿ ನೀಡದೆ, ಅವರು ಭಾರತಕ್ಕೆ ತಲುಪಿದ ನಂತರ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಪ್ರಚಾರಕರು ಹೇಳಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News