ಬೆಂಗಳೂರು: ಮುಂಬರುವ ಅಮೇರಿಕಾ ಪ್ರವಾಸ ಅನಧಿಕೃತವಾಗಿದೆ ಮತ್ತು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಪ್ರಯಾಣಿಸುತ್ತಿರುವುದಾಗಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ತೆರಿಗೆದಾರರ ಹಣವನ್ನು ಅನಧಿಕೃತ ಉದ್ದೇಶಗಳಿಗಾಗಿ ಖರ್ಚು ಮಾಡಲಾಗಿದೆಯೆಂದು ಟೀಕೆಗಳು ಬಂದ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರ ಈ ಹೇಳಿಕೆ ಬಂದಿದೆ.
Karnataka CM HD Kumaraswamy at Ujalamba village in Bidar district: I am travelling to New Jersey to participate in a foundation laying ceremony of Adichunchanagiri Mutt. It is not an official tour. I travelling on my personal expenses. (File pic) pic.twitter.com/W4hbMCKU6D
— ANI (@ANI) June 28, 2019
'ಆದಿಚುಂಚನಗಿರಿ ಮಠದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಲು ನಾನು ನ್ಯೂಜೆರ್ಸಿಗೆ ಪ್ರಯಾಣಿಸುತ್ತಿದ್ದೇನೆ. ಇದು ಅಧಿಕೃತ ಪ್ರವಾಸವಲ್ಲ. ಆದ್ದರಿಂದ ನನ್ನ ವೈಯಕ್ತಿಕ ಖರ್ಚಿನಲ್ಲಿ ನಾನು ಪ್ರಯಾಣಿಸುತ್ತಿದ್ದೇನೆ" ಎಂದು ಬೀದರ್ ಜಿಲ್ಲೆಯ ಉಜಲಮಾಬಾ ಗ್ರಾಮದಲ್ಲಿ ತಮ್ಮ ಗ್ರಾಮವಾಸ್ತವ್ಯ ಕಾರ್ಯಕ್ರಮದ ಬಳಿಕ ನಂತರ ಕುಮಾರಸ್ವಾಮಿ ಹೇಳಿದರು.ಕಾಂಗ್ರೆಸ್ ಪಕ್ಷದ ಕ್ಯಾಬಿನೆಟ್ ಮಂತ್ರಿಗಳು ಸಹ ನನ್ನೊಂದಿಗೆ ಹಳ್ಳಿಯ ವಾಸ್ತವ್ಯದಲ್ಲಿ ಭಾಗವಹಿಸಿದ್ದರು. ಆದ್ದರಿಂದ ಮನ್ನಣೆ ಸರ್ಕಾರ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಲ್ಲುತ್ತದೆ" ಎಂದು ಅವರು ಹೇಳಿದರು.
ಗ್ರಾಮಸ್ಥರ ಮನೆಗಳಲ್ಲಿ ಅವರು ತಂಗಿದ್ದಾಗ ಪ್ರತಿಪಕ್ಷಗಳ ಮಾಡಿದ ಟೀಕೆಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಅರ್ಥಹೀನ ಪ್ರಶ್ನೆಗೆ ಮೌನವೇ ಉತ್ತರ, ಆದ್ದರಿಂದ ನಾನು ಈ ವಿಚಾರವಾಗಿ ಮಾತನಾಡಲು ಹೋಗಲಿಲ್ಲ ಎಂದರು. ಇನ್ನು ಪಂಚತಾರಾ ಹೋಟೆಲ್ ನಲ್ಲಿ ಸರ್ಕಾರಿ ಸಭೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು 'ನಾನು ಯಾವುದೇ ಖರ್ಚು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆಯೇ ? ಈ ವಿಚಾರವಾಗಿ ಬಿಜೆಪಿ ಪ್ರಮಾಣಪತ್ರದ ಅವಶ್ಯಕತೆ ನನಗಿಲ್ಲ . ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ' ಎಂದು ಕುಮಾರಸ್ವಾಮಿ ಹೇಳಿದರು.