ಡಿಸೆಂಬರ್‌ 6ಕ್ಕೆ ನಂದಿ ಅವಾರ್ಡ್ಸ್ ಸಮಾರಂಭ: ಕರ್ನಾಟಕ ರಾಜ್ಯ ಪ್ರಶಸ್ತಿ

Nandi Awards: ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಂದಿ ಅವಾರ್ಡ್ಸ್‌ ಆರಂಭವಾಗಿದೆ. ಈ ನಂದಿ ಪ್ರಶಸ್ತಿ ಸಮಾರಂಭ ಇದೇ ಡಿಸೆಂಬರ್‌ 6ಕ್ಕೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಯಾವಾಗ, ಎಷ್ಟೋತ್ತಿಗೆ, ಎಲ್ಲಿಗೆ ನಡೆಯಲಿದೆ ಎಂಬ ಇನ್ನುಷ್ಟು ಮಾಹಿತಿ ನಿಮ್ಮ ಮುಂದೆ ಇದೆ.  

Written by - Zee Kannada News Desk | Last Updated : Oct 27, 2023, 12:39 PM IST
  • ಕನ್ನಡದ ಮೊಟ್ಟಮೊದಲ ಬಾರಿಗೆ ʼನಂದಿʼ ಪ್ರಶಸ್ತಿ ಪಾರಂಭವಾಗಿದೆ.
  • ಕರ್ನಾಟಕ ನಂದಿ ಫಿಲ್ಮಂ ಅವಾರ್ಡ್‌ 2023ʼ ಕಾರ್ಯಕ್ರಮ ಇದೇ ಡಿಸೆಂಬರ್‌ 6ಕ್ಕೆ ನಡೆಯಲಿದೆ.
  • 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಡಿಸೆಂಬರ್‌ 6ಕ್ಕೆ ನಂದಿ ಅವಾರ್ಡ್ಸ್ ಸಮಾರಂಭ: ಕರ್ನಾಟಕ ರಾಜ್ಯ ಪ್ರಶಸ್ತಿ title=

Nandi Awards Event: ʼನಂದಿ ಅವಾರ್ಡ್‌ʼ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ತೆಲುಗು ಚಿತ್ರರಂಗ. ಸೈಮಾ, ಚಿತ್ತಾರ, ಐಫಾ, ಫಿಲ್ಮಫೇರ್‌ ಸೇರಿದಂತೆ ನಂದಿ ಪ್ರಶಸ್ತಿಗೂ ಅದರದ್ದೇಯಾದ ತೂಕವಿದೆ. ತೆಲುಗು ರಾಜ್ಯದಲ್ಲಿ ಮನೋರಂಜನಾ ಕ್ಷೇತ್ರದ ಸಾಧಕರಿಗೆ ನೀಡುವ ʼನಂದಿʼ ರಾಜ್ಯ ಪ್ರಶಸ್ತಿ, ಕರ್ನಾಟಕದಲ್ಲಿ ಇದರ ಕೊರತೆ ಕಾಡುತ್ತಿತ್ತು. ಇದಕ್ಕೆ ಪರಿಹಾರವಾಗಿ ಕರ್ನಾಟಕದಲ್ಲಿಯೂ ಸಹ ಈ ವರ್ಷ ʼನಂದಿʼ ರಾಜ್ಯ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡದ ಮೊಟ್ಟಮೊದಲ ಬಾರಿಗೆ ʼನಂದಿʼ ಪ್ರಶಸ್ತಿ ಪಾರಂಭವಾಗಿದೆ. 

ಈ ʼನಂದಿʼ ಪ್ರಶಸ್ತಿಯ ಲಾಂಛನವನ್ನು, ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ಸಹ ನಂದಿ ಎಂದೆ ಕರೆಯಲಾಗುತ್ತದೆ. ನಂದಿ ಎಂಬ ಪದ ಕನ್ನಡದ ಪಾಲಿಗೂ ಸಹ ಒಂದು ಪವರ್‌ಫುಲ್‌ ಇಮೇಜ್ ನೀಡುವ ಲಾಛನವಾಗಿದೆ. ಈ ಕಾರಣದಿಂದ ಕನ್ನಡದ ಪ್ರಶಸ್ತಿಗೂ ನಂದಿ ಎಂದೆ ಹೆಸರಿಡಲಾಗಿದೆ. ಈ ಪ್ರಶಸ್ತಿ ಘೋಷಣೆಯಾಗಿರುವುದು ಕನ್ನಡಕ್ಕೆ ಸಿನಿಮಾರಂಗಕ್ಕೆ ಹೊಸ ಭರವಸೆ  ಸಿಕ್ಕಂತಾಗಿದೆ. 

ಇದನ್ನು ಓದಿ: ಮೀನು ಬೇಟೆಗೆ ಹೊರಟ ನಾಯಕ ಗೌರಿಶಂಕರ್; ಕುತೂಹಲ ಹೆಚ್ಚಿಸಿದ 'ಕೆರೆಬೇಟೆ' ಮೋಷನ್ ಪೋಸ್ಟರ್

ʼಕರ್ನಾಟಕ ನಂದಿ ಫಿಲ್ಮಂ ಅವಾರ್ಡ್‌ 2023ʼ ಕಾರ್ಯಕ್ರಮ ಇದೇ ಡಿಸೆಂಬರ್‌ 6ಕ್ಕೆ ನಡೆಯಲಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯಾನ್‌ ಮಾಲ್‌ನಲ್ಲಿ ಆಯೋಜಿಸಲಾಗಿದೆ. ಈ ಮೂಲಕ ಕನ್ನಡದ ಪ್ರತಿಭೆಗಳನ್ನು ಗುರುತಿಸಿ, ಬೆನ್ನು ತಟ್ಟುವ ಕೆಲಸ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಿನಿಮಾರಂಗದ ಹಲವಾರು ಗಣ್ಯರು ಹಾಗೂ ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ  ಈ ವರ್ಷದ 'ನಂದಿ ಫಿಲ್ಮಂ ಅವಾರ್ಡ್' ಸಂಸ್ಥಾಪರಾಗಿದ್ದಾರೆ. ಹಾಗೆ ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಅಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.

ʼಕರ್ನಾಟಕ ನಂದಿ ಫಿಲ್ಮಂ ಅವಾರ್ಡ್-2023ʼ ಪ್ರಶಸ್ತಿಗಳಿಗೆ ಕಳೆದ 2022ನೇ ಸಾಲಿನ ಮೂಡಿಬಂದಿರುವ ಚಿತ್ರಗಳು ಅನ್ವಯಿಸುತ್ತದೆ. ನಂದಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾಗಳ ಜೊತಗೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಬಂಜಾರ. ಬ್ಯಾರಿ ಹಾಗು ಕೊಂಕಣಿ ಭಾಷೆಯ ಸಿನಿಮಾಗಳಿಗೂ ಸಹ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ಕನ್ನಡ ಸಾಹಿತ್ಯ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಗೂ ಈ ನಂದಿ ಪ್ರಶಸ್ತಿ ಕೊಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ' ಎಂದು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ಬಿಗ್‌ಬಾಸ್‌ ಮನೆಯಲ್ಲಿ ದೊಡ್ಡ ಟ್ವಿಸ್ಟ್‌ : ಕಾರ್ತಿಕ್‌ಗೆ ರಾಖಿ ಕಟ್ಟಿದ ಸಂಗೀತಾ

ಸದ್ಯ ನಂದಿ ಪ್ರಶಸ್ತಿಯನ್ನು ಕನ್ನಡದ ಯಾವೆಲ್ಲಾ ಕಲಾವಿದರು, ತಂತ್ರಜ್ಞರು ಪಡೆದುಕೊಳ್ಳಬಹುದು ಎಂಬ ಚರ್ಚೆ ನಡೆಯುತ್ತಿದ್ದು, ಕನ್ನಡಿಗರಿಗೆ ಇದೊಂದು ಖುಷಿಯ ವಿಚಾರವಾಗಿದೆ. ಈ ಬಾರಿ ಯಾರೆಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಯಾವೆಲ್ಲಾ ವಿಭಾಗದಲ್ಲಿ ನಂದಿ ರಾಜ್ಯ ಪ್ರಶಸ್ತಿ ದೊರಕಲಿದೆಂಬುದು ಕರ್ನಾಟಕ ನಂದಿ ಫಿಲ್ಮಂ ಅವಾರ್ಡ್-2023 ಕಾರ್ಯಕ್ರಮಕ್ಕಾಗಿ ಕಾದು ಭಾಗಿಯಾಗಿ ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News