Rahu Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ದುಷ್ಟ ಗ್ರಹ ಎಂದು ಕರೆಯಲ್ಪಡುವ ರಾಹು ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವಾಗಿ ಐದು ರಾಶಿಯವರಿಗೆ ಭಾರೀ ಸಂಕಷ್ಟ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹವನ್ನು ಕ್ರೂರ, ದುಷ್ಟ, ಪಾಪ ಗ್ರಹ ಎಂದು ಕರೆಯಲಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದ ರಾಹು ಇತ್ತೀಚೆಗಷ್ಟೇ ತನ್ನ ರಾಶಿಚಕ್ರವನ್ನು ಬದಲಾಯಿಸಿದ್ದಾನೆ.
ಸದಾ ಹಿಮ್ಮುಖವಾಗಿ ಸಂಚರಿಸುವ ರಾಹು ಅಕ್ಟೋಬರ್ 30, 2023 ರಂದು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿದ್ದಾನೆ. 18 ತಿಂಗಳಿಗೊಮ್ಮೆ ಎಂದರೆ ಬರೋಬ್ಬರಿ ಒಂದೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುವ ರಾಹು ಮೇ 18, 2025 ರವರೆಗೆ ಮೀನ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ.
ರಾಹು ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಸದ್ಯ ಮೀನ ರಾಶಿಯನ್ನು ಪ್ರವೇಶಿಸಿರುವ ರಾಹು ಮುಂದಿನ 18 ತಿಂಗಳುಗಳ ಕಾಲ ಐದು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ನೋಡೋಣ...
ಇತ್ತೀಚೆಗಷ್ಟೇ ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಿರುವ ರಾಹು ಈ ರಾಶಿಯವರ ಜೀವನದಲ್ಲಿ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಲಿದ್ದಾನೆ. ಮಾತ್ರವಲ್ಲ, ನೀವು ಕಷ್ಟಪಟ್ಟು ದುಡಿದ ಹಣ ಬೇರೆಡೆ ಸಿಲುಕಬಹುದು. ಹಾಗಾಗಿ ಬೇರೆಯವರಿಗೆ ಸಾಲ ನೀಡುವುದನ್ನು ತಪ್ಪಿಸಿ
ರಾಹು ರಾಶಿ ಪರಿವರ್ತನೆಯು ಸಿಂಹ ರಾಶಿಯವರ ಜೀವನದಲ್ಲೂ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದೊಳಗೆ ವಿವಾದಗಳು ಉಂಟಾಗಬಹುದು. ಯಾವುದೇ ರೀತಿಯ ವಾದ-ವಿವಾದಗಳಿಂದ ದೂರವಿರಿ.
ರಾಹು ರಾಶಿ ಬದಲಾವಣೆಯು ಧನು ರಾಶಿಯವರಿಗೆ ಮಾನಸಿಕ ಒತ್ತಡವನ್ನು ಹೆಚ್ಚಿಸಲಿದೆ. ಮಾತ್ರವಲ್ಲ, ನಿಮ್ಮ ಸಹೋದರ ವರ್ಗದವರೊಂದಿಗೆ ಭಿನ್ನಾಭಿಪ್ರಾಯ ಸಾಧ್ಯತೆಗಳೂ ಹೆಚ್ಚಾಗಿರುವುದರಿಂದ ನಿಮ್ಮ ಮಾತಿನ ಬಗ್ಗೆ ಎಚ್ಚರಿಕೆ ವಹಿಸಿ.
ರಾಹು ರಾಶಿ ಪರಿವರ್ತನೆಯು ಕುಂಭ ರಾಶಿಯ ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡಲಿದೆ. ಇದರಿಂದಾಗಿ ಹಣಕಾಸಿನ ಸ್ಥಿತಿಯೂ ಬೀಗದಾಯಿಸಬಹುದು. ಕುಟುಂಬದವರೊಂದಿಗೆ, ನಿಮ್ಮ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು.
ಸ್ವ ರಾಶಿಯಲ್ಲಿರುವ ರಾಹು ಮೀನ ರಾಶಿಯವರಿಗೂ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು. ಇದಲ್ಲದೆ, ಕೆಲಸದಲ್ಲಿ ನಿಮ್ಮ ಸೋಮಾರಿತನವೇ ನಿಮಗೆ ಮುಳುವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಇದಲ್ಲದೆ, ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಬಾಧಿಸಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.