ಅಹ್ಮದಾಬಾದ್: ಭಾರತೀಯ ಕ್ರಿಕೆಟ್ ತಂಡ 2023ರ ವಿಶ್ವಕಪ್ ಫೈನಲ್ ಗೆ ತಲುಪಿದೆ. ಫೈನಲ್ ನಲ್ಲಿ ಭಾರತ ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಭಾರತ ತಂಡ ತನ್ನದೇ ನೆಲದಲ್ಲಿ ಶ್ರೀಲಂಕಾವನ್ನು ಎಂಎಸ್ ಧೋನಿ ನೇತೃತ್ವದಲ್ಲಿ ಬಗ್ಗುಬಡಿದು ಎರಡನೇ ಬಾರಿ ವಿಶ್ವಕಪ್ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಅದ್ಭುತ ಸಿಕ್ಸರ್ ಹೊಡೆಯುವ ಮೂಲಕ ಧೋನಿ ಭಾರತವನ್ನು 28 ವರ್ಷಗಳ ಮತ್ತೊಮ್ಮೆ ಚಾಂಪಿಯನ್ ಆಗಿಸಿದ್ದರು. ಹೀಗಿರುವಾಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಮೂರನೇ ಬಾರಿಗೆ ಟೀಮ್ ಇಂಡಿಯ ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ ನಿಂತಿದೆ. ಪ್ರಸ್ತುತ ವಿಶ್ವಕಪ್ ನಲ್ಲಿ ಇದುವರೆಗೆ ಟೀಮ್ ಇಂಡಿಯ ಅಜೇಯವಾಗಿ ಉಳಿದಿದೆ. ಎಲ್ಲಾ ಹತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ತಂಡ ಫೈನಲ್ ತಲುಪಿದೆ. ಹೀಗಿರುವಾಗ ಭಾರತೀಯ ಕ್ರಿಕೆಟ್ ಪ್ರೇಮಿಗಳ ಉತ್ಸಾಹ ಮುಗಿಲುಮುಟ್ಟಿದೆ.
ಪ್ರತಿಯೊಬ್ಬರು ಟೀಮ್ ಇಂಡಿಯವನ್ನು ಪ್ರೋತ್ಸಾಹಿಸುತ್ತಿದ್ದಾರೆ
ಈ ಬಾರಿಯ ವಿಶ್ವಕಪ್ ನಲ್ಲಿ ಭಾರತೀಯ ತಂಡವನ್ನು ಗೆಲುವಿಗಾಗಿ ಎಲ್ಲರೂ ಕೂಡ ತನ್ನದೇ ಆದ ರೀತಿಯಲ್ಲಿ ಪ್ರೋತ್ಸಾಹನ ನೀಡುತ್ತಿದ್ದಾರೆ. ಹೀಗಿರುವಾಗ ಒಂದು ಆಸ್ಟ್ರೋ ಸ್ಟಾರ್ಟ್ ಅಪ್ ಕಂಪನಿಯಾಗಿರುವ ಆಸ್ಟ್ರೋ ಟಾಕ್ ಫೌಂಡರ್ ಮತ್ತು ಸಿಇಓ ಪುನೀತ್ ಗುಪ್ತಾ ಕೂಡ ವಿಶ್ವಕಪ್ ಗೆ ಸಂಬಂಧಿಸಿದಂತೆ ಒಂದು ಮಹತ್ವದ ಘೋಷಣೆ ಮೊಲಗಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ 2011 ರಲ್ಲಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ತನ್ನ ನೆನಪುಗಳನ್ನು ಮೆಲುಕುಹಾಕಿದ್ದಾರೆ. ಇದೇ ಪೋಸ್ಟ್ ನಲ್ಲಿ ಅವರು ತಮ್ಮ ಆಸ್ಟ್ರೋ ಟಾಕ್ ಆಪ್ ಬಳಸುವ ಬಳಕೆದಾರರಿಗಾಗಿ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಹೌದು, ಒಂದು ವೇಳೆ ಟೀಮ್ ಇಂಡಿಯ ಈ ಬಾರಿ ಕೂಡ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾದರೆ. ಅವರ ಕಂಪನಿ ತನ್ನ ಆಪ್ ಬಳಕೆದಾರರಿಗೆ 100 ಕೋಟಿ ರೂ. ಹಂಚಿಕೆ ಮಾಡಲಿದೆ ಎಂದು ಹೇಳಿದ್ದಾರೆ.
2011ರ ವಿಶ್ವಕಪ್ ಗೆಲುವಿನ ತಮ್ಮ ನೆನಪುಗಳನ್ನು ಹಂಚಿಕೊಂಡ ಪುನೀತ್, 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ತಾವು ಕಾಲೇಜ್ ನಲ್ಲಿರುವುದಾಗಿ ಹೇಳಿದ್ದಾರೆ. ಆ ದಿನ ನನ್ನ ಜೀವನದ ಅತ್ಯಂತ ಖುಷಿಯಾಗಿರುವ ದಿನಗಳಲ್ಲಿ ಒಂದಾಗಿದೆ. ಕಾಲೇಜ್ ಹತ್ತಿರದಲ್ಲಿರುವ ಒಂದು ಸ್ಟೇಡಿಯಂನಲ್ಲಿ ಸ್ನೇಹಿತರ ಜೊತೆಗೂಡಿ ಆ ಪಂದ್ಯ ವೀಕ್ಷಿಸಿದ್ದಾಗಿ ಪುನೀತ್ ಹೇಳಿದ್ದಾರೆ. ಇಡೀ ದಿನ ನಾವೆಲ್ಲರೂ ತುಂಬಾ ಒತ್ತಡದಲ್ಲಿದೆವು ಮತ್ತು ಪಂದ್ಯದ ಮುನ್ನಾ ರಾತ್ರಿ ನಾವೆಲ್ಲರೂ ಪಂದ್ಯದ ರಣತಂತ್ರದ ಕುರಿತು ಚರ್ಚೆ ನಡೆಸಿದ್ದೆವು ಮತ್ತು ಇಡೀ ರಾತ್ರಿ ನಾವು ಮಲಗಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ-World Cup 2023 Final: ಭಾರತದ ಈ ಕ್ರಿಕೆಟ್ ದಿಗ್ಗಜನ ಮಾತು ರೋಹಿತ್ ಪಡೆ ಕೇಳಿದರೆ ಗೆಲುವು ಪಕ್ಕಾ ನಮ್ದೆ!
ಟೀಮ್ ಇಂಡಿಯಾ ಗೆಲುವಿನ ಬಳಿಕ ರೋಮಾಂಚನಗೊಂಡಿದ್ದೆವು
ಟೀಮ್ ಇಂಡಿಯ ಗೆಲುವಿನ ರೋಮಾಂಚದ ಕುರಿತು ಬಣ್ಣಿಸಿರುವ ಪುನೀತ್. ಪಂದ್ಯ ಗೆಲುವಿನ ಬಳಿಕ ದೀರ್ಘಕಾಲದವರೆಗೆ ಮೈನವಿರೇದ್ದಿತ್ತು ಎಂದಿದ್ದಾರೆ. ಅವರು ತಮ್ಮ ಸ್ನೇಹಿತರನ್ನು ಅಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಪಂದ್ಯದ ಬಳಿಕ ಬೈಕ್ ಗಳನ್ನು ತೆಗೆದುಕೊಂಡು ಚಂಡೀಗಢದ ರಸ್ತೆಗಳಲ್ಲಿ ಸುತ್ತುತ್ತ ಪರಿಚಯವಿಲ್ಲದ ಹಲವಾರು ಜನರ ಜೊತೆಗೆ ಭಾಂಗ್ರಾ ನೃತ್ಯ ಮಾಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ-ICC World Cup 2023 Final ಕುರಿತು ಜೋತಿಷ್ಯ ಪಂಡಿತರು ನುಡಿದ ಭವಿಷ್ಯವಾಣಿ ಇಲ್ಲಿದೆ! ಈ ತಂಡ ಗೆಲ್ಲುತ್ತಂತೆ!
ಬಳಕೆದಾರರಿಗೆ ಆಪ್ ವ್ಯಾಲೆಟ್ ನಲ್ಲಿ 100 ಕೋಟಿ ಹಂಚುವುದಾಗಿ ಹೇಳಿದ ಪುನೀತ್
ಕೊನೆಯದಾಗಿ ಈ ಅವರು ತಮ್ಮ ಆಪ್ ಬಳಕೆದಾರರಿಗೆ 100 ಕೋಟಿ ರೂ. ಹಂಚುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಬರೆದುಕೊಂಡ ಪುನೀತ್, 'ಇಂದು ಬೆಳಗ್ಗೆ ನಾನು ನನ್ನ ಫೈನಾನ್ಸ ತಂಡದ ಜೊತೆಗೆ ಚರ್ಚೆ ನಡೆಸಿದ್ದು. ಒಂದು ವೇಳೆ ಟೀಮ್ ಇಂಡಿಯಾ ಈ ವಿಶ್ವಕಪ್ ಅನ್ನು ಗೆದ್ದರೆ, ಬಳಕೆದಾರರ ವ್ಯಾಲೆಟ್ ಗಳಲ್ಲಿ 100 ಕೋಟಿ ರೂ ಹಂಚಿಕೆ ಮಾಡಲು ಹೇಳಿದ್ದೇನೆ. ಬನ್ನಿ ಟೀಮ್ ಇಂಡಿಯಾ ಗೆಲುವಿಗಾಗಿ ಪ್ರಾರ್ಥಿಸೋಣ ಮತ್ತು ಅವರ ಉತ್ಸಾಹವನ್ನು ಹೆಚ್ಚಿಸೋಣ' ಎಂದಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.