ICC World Cup 2023 Final ಕುರಿತು ಜೋತಿಷ್ಯ ಪಂಡಿತರು ನುಡಿದ ಭವಿಷ್ಯವಾಣಿ ಇಲ್ಲಿದೆ! ಈ ತಂಡ ಗೆಲ್ಲುತ್ತಂತೆ!

ICC World Cup 2023 Final Horoscope: ಐಸಿಸಿ ವಿಶ್ವಕಪ್ 2023 ಪ್ರಶಸ್ತಿಯನ್ನು ಗೆಲ್ಲಲು ತಂಡಗಳ ನಡುವೆ ಹಣಾಹಣಿ ಮುಂದುವರೆದಿದೆ. ಇನ್ನೊಂದೆಡೆ, ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ತಜ್ಞರು ಗೆಲ್ಲುವ ತಂಡದ ಕುರಿತು ತನ್ನದೇ ಆದ ವಾದ-ತರ್ಕಗಳನ್ನು ಮಂಡಿಸುತ್ತಿದ್ದಾರೆ. ಈ ವಿಷಯದಲ್ಲಿ ಇದೀಗ ಜೋತಿಷ್ಯ ಪಂಡಿತರು ಕೂಡ ಹಿಂದೆ ಬಿದ್ದಿಲ್ಲ ಮತ್ತು ಚಾಂಪಿಯನ್ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ಬನ್ನಿ ಈ ಬಾರಿ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ತಿಳಿದುಕೊಳ್ಳೋಣ, (Spiritual News In Kannada) 

Written by - Nitin Tabib | Last Updated : Nov 16, 2023, 04:10 PM IST
  • ಜೋತಿಷ್ಯ ಪಂಡಿತರ ಪ್ರಕಾರ ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಕಠಿಣ ಪೈಪೋಟಿ ಕಂಡುಬರಲಿದೆ ಎನ್ನಲಾಗಿದೆ.
  • ಈ ಎರಡೂ ತಂಡಗಳ ಗ್ರಹಗಳು ಬಲಿಷ್ಠವಾಗಲಿವೆ,
  • 19 ನವೆಂಬರ್ 2023 ರಂದು ನಡೆಯಲಿರುವ ಅಂತಿಮ ಪಂದ್ಯವು ಈ ಎರಡು ತಂಡಗಳ ನಡುವೆ ನಡೆಯುವ ನಿರೀಕ್ಷೆಯಿದೆ.
ICC World Cup 2023 Final ಕುರಿತು ಜೋತಿಷ್ಯ ಪಂಡಿತರು ನುಡಿದ ಭವಿಷ್ಯವಾಣಿ ಇಲ್ಲಿದೆ! ಈ ತಂಡ ಗೆಲ್ಲುತ್ತಂತೆ! title=

ಬೆಂಗಳೂರು: ICC ವಿಶ್ವಕಪ್ 2023 ಅಕ್ಟೋಬರ್ 5 ರಂದು ಪ್ರಾರಂಭವಾಗಿದೆ. ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ಸತತ 10 ಗೆಲುವುಗಳ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. ಇಂದು ಎರಡನೇ ಸೆಮಿಫೈನಲ್ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ತಂಡಗಳು ಮುಖಾಮುಖಿಯಾಗಿವೆ. ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ವಿಶ್ವಕಪ್‌ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು, ಕೊನೆಯ ಪಂದ್ಯ ಅಹ್ಮದಾಬಾದ್ ನಲ್ಲಿ ನಡೆಯಲಿದೆ. (Spiritual News In Kannada) 

1983ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗುವ ತನ್ನ ಕನಸನ್ನು ಟೀಂ ಇಂಡಿಯಾ ನನಸಾಗಿಸಿತ್ತು. ಇದಾದ ಬಳಿಕ 2011ರಲ್ಲಿ ತಮ್ಮದೇ ಮೈದಾನದಲ್ಲಿ ತಮ್ಮ ಬಲ ಪ್ರದರ್ಶಿಸಿ ಐಸಿಸಿ ಟ್ರೋಫಿಯನ್ನು ಟೀಮ್ ಇಂಡಿಯ ವಶಪಡಿಸಿಕೊಂಡಿತ್ತು. ಈ ಬಾರಿಯೂ ಇತಿಹಾಸ ಮರುಕಳಿಸಲು ಭಾರತ ತಂಡ ಕಣಕ್ಕಿಳಿಯಲಿದೆ. ಅದೇ ಸಮಯದಲ್ಲಿ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡದ ಮೇಲೆ ಎಲ್ಲರ ಕಣ್ಣು ಕೂಡ ನೆಟ್ಟಿದೆ. ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ತಜ್ಞರು ತಮ್ಮದೇ ಆದ ವಾದ ಮತ್ತು ತರ್ಕಗಳನ್ನು ಹೊಂದಿದ್ದಾರೆ. ಈ ಎಲ್ಲಾ ವಾದಗಳ ನಡುವೆ ಗ್ರಹಗಳ ಚಲನವಲನಗಳ ಕುರಿತು ಜೋತಿಷ್ಯ ಪಂಡಿತರು ಕೂಡ ತನ್ನ ತರ್ಕವನ್ನು ಮಂಡಿಸಿದ್ದಾರೆ. ಹಾಗಾದರೆ ಬನ್ನಿ ಈ ಬಾರಿ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂಬುದನ್ನು ತಿಳಿದುಕೊಳ್ಳೋಣ, 

ಆಸ್ಟ್ರೇಲಿಯಾದ ಗ್ರಹ-ನಕ್ಷತ್ರಗಳು ಕೂಡ ಬಲಿಷ್ಟವಾಗಿವೆ
1975 ರಿಂದ ಆಸ್ಟ್ರೇಲಿಯಾ 5 ಬಾರಿ ವಿಶ್ವಕಪ್ ಟ್ರೋಫಿ ಗೆದ್ದಿದೆ ಎಂದು ಜೋತಿಷ್ಯ ಪಂಡಿತರು ಹೇಳಿದ್ದಾರೆ. ಇದಲ್ಲದೆ ಭಾರತ ಎರಡು ಬಾರಿ, ವೆಸ್ಟ್ ಇಂಡೀಸ್ ಎರಡು ಬಾರಿ, ಇಂಗ್ಲೆಂಡ್ ಒಂದು ಬಾರಿ ಮತ್ತು ಪಾಕಿಸ್ತಾನ ಒಂದು ಬಾರಿ ಚಾಂಪಿಯನ್ ಆಗಿದೆ. ಇದರಲ್ಲಿ ವಿಶೇಷವೆಂದರೆ ಆಸ್ಟ್ರೇಲಿಯ ಗೆದ್ದಾಗಲೆಲ್ಲಾ ಶನಿಯು ಮಂಗಳನ ರಾಶಿಯಲ್ಲಿ ಇದ್ದನು ಎಂಬುದು ಅವರ ಅಭಿಮತವಾಗಿದೆ.

ಗುರು ಮತ್ತು ಶನಿ ಭಾರತಕ್ಕೆ ಗೆಲುವು ತಂದುಕೊಡಲಿದ್ದಾರೆಯೇ?
ಈ ಕುರಿತು ಮಾಹಿತಿ ನೀಡಿರುವ ಜೋತಿಷ್ಯ ಪಂಡಿತರು 1983 ರಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಗೆದ್ದಾಗ, ಆ ಸಮಯದಲ್ಲಿ ಗುರುವು ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿದ್ದ ಮತ್ತು ಶನಿ ಅದರ ಉಚ್ಛ ರಾಶಿಯಾಗಿರುವ ತುಲಾ ರಾಶಿಯಲ್ಲಿ ಇದ್ದ ಎಂದು ಅವರು ಹೇಳಿದ್ದಾರೆ. 2011ರಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದಾಗ ಕೂಡ. ಗುರುವು ಮೇಷ ಮತ್ತು ಶನಿಯು ಕನ್ಯಾರಾಶಿಯಲ್ಲಿದ್ದರು. ಈ ಬಾರಿಯೂ ವಿಶ್ವಕಪ್ ಆರಂಭದೊಂದಿಗೆ ಕಾಕತಾಳೀಯವಾಗಿ ಗುರು ಗ್ರಹವು ಮಂಗಳನ ರಾಶಿಯಾಗಿರುವ, ಮೇಷ ರಾಶಿಯಲ್ಲಿದೆ ಮತ್ತು ಶನಿಯು ತನ್ನ ಮೂಲ ತ್ರಿಕೋನ ಕುಂಭದಲ್ಲಿ ಕುಳಿತಿದ್ದಾನೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ಭಾರತ ಚಾಂಪಿಯನ್ ಆಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ ಎಂಬುದು ಅವರ ಅಭಿಪ್ರಾಯವಾಗಿದೆ. 

ಇದನ್ನೂ ಓದಿ-ಜಯ್ ಷಾ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳು ಮಾಡುತ್ತಿದ್ದಾರೆ, ಬಿಸಿಸಿಐ ಕಾರ್ಯದರ್ಶಿ ವಿರುದ್ಧ ರಣತುಂಗ ಆರೋಪ!

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕಠಿಣ ಪೈಪೋಟಿ ನಡೆಯಲಿದೆಯೇ?
ಜೋತಿಷ್ಯ ಪಂಡಿತರ ಪ್ರಕಾರ ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಕಠಿಣ ಪೈಪೋಟಿ ಕಂಡುಬರಲಿದೆ ಎನ್ನಲಾಗಿದೆ. ಈ ಎರಡೂ ತಂಡಗಳ ಗ್ರಹಗಳು ಬಲಿಷ್ಠವಾಗಲಿವೆ, 19 ನವೆಂಬರ್ 2023 ರಂದು ನಡೆಯಲಿರುವ ಅಂತಿಮ ಪಂದ್ಯವು ಈ ಎರಡು ತಂಡಗಳ ನಡುವೆ ನಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ-'ಒಂದು ವೇಳೆ ನಾನು ಐಶ್ವರ್ಯಾ ರೈ ಜೊತೆ ವಿವಾಹ ಮಾಡಿಕೊಂಡು...' ಪಾಕ್ ಕ್ರಿಕೇಟಿಗನ ಉದ್ಧಟತನಕ್ಕೆ, ಚಪ್ಪಾಳೆ ಹೊಡೆದ ಆಫ್ರಿದಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News