Alia Bhatt: ಫಸ್ಟ್ ಲವ್ ಎಂದಿಗೂ ಮರೆಯಲ್ಲ ಎಂದ ಆಲಿಯಾ ಭಟ್‌.. ಇವರೇ ಮೊದಲ ಪ್ರಿಯಕರ!

Alia Bhatt First Love : ಆಲಿಯಾ ಭಟ್ ಅವರು ಕಾಫಿ ವಿತ್ ಕರಣ್ 8 ರಲ್ಲಿ 5 ನೇ ಸಂಚಿಕೆಗೆ ಅತಿಥಿಗಳಾಗಿ ಆಗಮಿಸಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಮೊದಲ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. 

Written by - Chetana Devarmani | Last Updated : Nov 23, 2023, 03:35 PM IST
  • ಕಾಫಿ ವಿತ್ ಕರಣ್ 8 ರ 5 ನೇ ಸಂಚಿಕೆ
  • ಅತಿಥಿಯಾಗಿ ಆಗಮಿಸಿದ್ದ ಸಿದ್ಧಾರ್ಥ್ ಮಲ್ಹೋತ್ರಾ
  • ಇತ್ತೀಚೆಗೆ ಆಲಿಯಾ ಹೇಳಿದ ಮಾತು ವೈರಲ್‌
Alia Bhatt: ಫಸ್ಟ್ ಲವ್ ಎಂದಿಗೂ ಮರೆಯಲ್ಲ ಎಂದ ಆಲಿಯಾ ಭಟ್‌.. ಇವರೇ ಮೊದಲ ಪ್ರಿಯಕರ! title=
Alia Bhatt

Alia Bhatt On Sidharth Malhotra: ಆಲಿಯಾ ಭಟ್‌ ಬಾಲಿವುಡ್‌ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ಸಿನಿರಂಗಕ್ಕೆ ಕಾಲಿಟ್ಟ ದಿನದಿಂದಲೂ ಜನರ ಮನ ಗೆದ್ದವರು. ಆಲಿಯಾ ಭಟ್‌ ಅವರು ರಣಬೀರ್‌ ಕಪೂರ್‌ ಜೊತೆ ಮದುವೆಗೂ ಮುನ್ನ ಕೆಲವು ನಟರ ಜೊತೆ ಡೇಟಿಂಗ್‌ ಮಾಡಿದ್ದರೆಂಬ ವದಂತಿಗಳಿವೆ. ಸ್ಟೂಡೆಂಟ್‌ ಆಫ್‌ ದಿ ಇಯರ್‌ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಇತ್ತೀಚೆಗೆ ಆಲಿಯಾ ಹೇಳಿದ ಮಾತು ವೈರಲ್‌ ಆಗ್ತಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಗುರುವಾರದ ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ್ದಾರೆ. ಆಲಿಯಾ ಭಟ್ ಅವರು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಬಗ್ಗೆ ವಿಡಿಯೋದ ಮೂಲಕ ಮಾತನಾಡಿದ್ದಾರೆ. 

ಇದೇ ವೇಳೆ ಆಲಿಯಾ ಭಟ್ ತಮ್ಮ ಮೊದಲ ಪ್ರೀತಿಯ ಬಗ್ಗೆ ರಿವೀಲ್‌ ಮಾಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರು ಆಲಿಯಾ ಭಟ್‌ಗೆ ವಿಶೇಷ ಗಿಫ್ಟ್‌ ಕೊಟ್ಟಿದ್ದರು. ಆಲಿಯಾ ಭಟ್ ಅವರ ಬೆಕ್ಕು ಎಡ್ವರ್ಡ್ ಸಿದ್ಧಾರ್ಥ್‌ ಕೊಟ್ಟ ಉಡುಗೊರೆಯಾಗಿದೆ. 

ಇದನ್ನೂ ಓದಿ : ಮಾಫಿಯಾ ಟೀಸರ್‌ಗೆ ಡೇಟ್‌ ಫಿಕ್ಸ್:‌ ಕುತೂಹಲ ಹೆಚ್ಚಿಸಿದ ಬಹುನಿರೀಕ್ಷಿತ ಚಿತ್ರ! 

ಸಿದ್ದಾರ್ಥ್ ಬಗ್ಗೆ ಮಾತನಾಡಿದ ಆಲಿಯಾ, ಅವರ ಒಳ್ಳೆಯ ಸ್ವಭಾವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿದ್ ನಿಜವಾಗಿಯೂ ಒಳ್ಳೆಯ ಗಾಯಕ. ಅವನು ಪಾರ್ಟಿ ಮಾಡುವುದೇ ಇಲ್ಲ. ಆದರೆ ಅವನೊಂದಿಗೆ ನಾವು ಖುಷಿಯಿಂದ ಪಾರ್ಟಿ ಮಾಡಬಹುದು. ಜನರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅವನಿಗೆ ತಿಳಿದಿದೆ. ಅವನು ನಿಜವಾಗಿಯೂ ಒಳ್ಳೆಯವನು ಎಂದು ಅಲಿಯಾ ಹೇಳಿದ್ದಾರೆ.

ಸಿದ್ ಓಪನ್‌ ಅಪ್‌ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ತುಂಬಾ ಧೈರ್ಯಶಾಲಿ, ತುಂಬಾ ಒಳ್ಳೆಯ ನಡತೆ ಇರುವ ವ್ಯಕ್ತಿ. ಸಿದ್ ಅವರಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಏಕೆಂದರೆ ಅವನು ನನಗೆ ನನ್ನ ಜೀವನದ ಮೊದಲ ಪ್ರೀತಿಯನ್ನು ನೀಡಿದ್ದಾನೆ. ಅದು ಎಡ್ವರ್ಡ್ ಎಂದು ಆಲಿಯಾ ಭಟ್‌ ಹೇಳಿದ್ದಾರೆ. ಎಡ್ವರ್ಡ್ ಅವರು ಡೇಟಿಂಗ್ ಮಾಡುವಾಗ ಆಲಿಯಾಗೆ ಸಿದ್ಧಾರ್ಥ್ ನೀಡಿದ ಬೆಕ್ಕು ಎನ್ನಲಾಗಿದೆ.

ಆಲಿಯಾ ಈಗ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ. ರಾಹಾ ಎಂಬ ಮಗಳಿದ್ದಾಳೆ. ಸಿದ್ಧಾರ್ಥ್ ಈ ವರ್ಷದ ಆರಂಭದಲ್ಲಿ ನಟಿ ಕಿಯಾರಾ ಅಡ್ವಾಣಿ ಅವರನ್ನು ವಿವಾಹವಾದರು. 

ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗೆ ಪ್ರೆಗ್ನೆನ್ಸಿ ಟೆಸ್ಟ್ ! ಸಹ ಸ್ಪರ್ಧಿ ಹೇಳಿದ್ದೇನು ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News