ಎಂಟು ತಿಂಗಳುಗಳ ಬಳಿಕ ರೇವತಿ ನಕ್ಷತ್ರಕ್ಕೆ ರಾಹು ಪ್ರವೇಶ, ಹೊಸ ವರ್ಷದಲ್ಲಿ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ ಯೋಗ!

Rahu Nakshatra Parivartan 2023: ವೈದಿಕ ಪಂಚಾಗದ ಪ್ರಕಾರ ಶೀಘ್ರದಲ್ಲೇ ರಾಹು ಬುಧಾಧಿಪತ್ಯದ ನಕ್ಷತ್ರ ರೇವತಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಹಲವು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದ್ದು, ಈ ಜನರಿಗೆ ಅಪಾರ ಧನಲಾಭ ಸಿಗಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತೀಷ್ಯ ಶಾಸ್ತ್ರದಲ್ಲಿ ರಾಹುವನ್ನು ಪಾಪಿ ಹಾಗೂ ಛಾಯಾ ಗ್ರಹ ಎಂದು ಕರೆಯಲಾಗುತ್ತದೆ. ರಾಹುವಿನ ರಾಶಿ ಅಥವಾ ನಕ್ಷತ್ರ ಪರಿವರ್ತನೆಯಿಂದ ಜನರ ಲವ್ ಲೈಫ್, ವೃತ್ತಿ ಜೀವನ, ಶಿಕ್ಷಣ, ಬಿಸ್ನೆಸ್, ಆರೋಗ್ಯ ಇತ್ಯಾದಿಗಳ ಮೇಲೆ ಯಾವುದಾದರೊಂದು ಪ್ರಭಾವ ಕಂಡು ಬರುತ್ತದೆ. ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯನ್ನು ತೊರೆದು ಹಿಮ್ಮುಖ ಚಲಿಸುತ್ತ ಮತ್ತೆ ಮೀನ ರಾಶಿಗೆ ಪ್ರವೇಶಿಸಿದೆ. ಇದೇ ದಿನ ಅಂದರೆ ಅಕ್ಟೋಬರ್ 30 ರಂದು 8 ತಿಂಗಳುಗಳ ಬಳಿಕ ರಾಹು ರೇವತಿ ನಕ್ಷತ್ರ ಪ್ರವೇಶಿಸಿದ್ದಾನೆ. ರೇವತಿ ನಕ್ಷತ್ರ 27 ನಕ್ಷತ್ರಗಳಲ್ಲಿ ಕೊನೆಯ ನಕ್ಷತ್ರವಾಗಿದೆ. ಈ ನಕ್ಷತ್ರಕ್ಕೆ ಬುಧ ಅಧಿಪತಿಯಾಗಿದ್ದಾನೆ. ಇದಲ್ಲದೆ ಈ ನಕ್ಷತ್ರದ ಮೇಲೆ ಗುರುವಿನ ಪ್ರಭಾವ ಕೂಡ ಇರುತ್ತದೆ. ಇದಲ್ಲದೆ ರೇವತಿ ನಕ್ಷತ್ರದ ರಾಶಿ ಮೀನ ರಾಶಿಯಾಗಿದೆ. ಹೀಗಾಗಿ ರೇವತಿ ನಕ್ಷತ್ರಕ್ಕೆ ರಾಹುವಿನ ಪ್ರವೇಶದಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ಇನ್ನೊಂದೆಡೆ ಕೆಲ ರಾಶಿಗಳು ಎಚ್ಚರಿಕೆಯಿಂದ ಇರಬೇಕಾದ ಕಾಲ ಕೂಡ ಇದೇ. ರಾಹುವಿನ ಈ ನಕ್ಷತ್ರ ಪರಿವರ್ತನೆಯಿಂದ ಯಾವ ರಾಶಿಗಳ ಜನರಿಗೆ ಲಾಭ ಉಂಟಾಗಲಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ತುಳಸಿ ವಿವಾಹದ ದಿನ ಗಜಕೇಸರಿ ರಾಜಯೋಗ, ಶ್ರೀಹರಿಲಕ್ಷ್ಮಿ ಕೃಪೆಯಿಂದ ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 30, 2023ರಂದು ಮದ್ಯಾಹ್ನ 1 ಗಂಟೆ 33 ನಿಮಿಷಕ್ಕೆ ರಾಹು ಅಶ್ವಿನಿ ನಕ್ಷತ್ರದಿಂದ ಹೊರಬಂದು ರೇವತಿ ನಕ್ಷತ್ರವನ್ನು ಪ್ರವೇಶಿಸಿದೆ. ಇಲ್ಲಿ ಆತ ಜುಲೈ 8, 2024ರ ಸಂಜೆ 4 ಗಂಟೆ 11 ನಿಮಿಷದವರೆಗೆ ಇರಲಿದ್ದು, ಬಳಿಕ ಉತ್ತರಾ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈಗ ಅದೃಷ್ಟವಂತ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ,   

2 /5

ಮಿಥುನ ರಾಶಿ: ರಾಹು ನಿಮ್ಮ ಜಾತಕದ ದಶಮ ಭಾವದಲ್ಲಿ ರೇವತಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇದರಿಂದ ಈ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. ಮಿಥುನ ರಾಶಿಗೆ ಬುಧ ಅಧಿಪತಿಯಾಗಿರುವ ಕಾರಣ ರಾಹು ನಿಮಗೆ ಲಾಭವೋ ಲಾಭ ಕರುಣಿಸಲಿದ್ದಾನೆ, ಏಕೆಂದರೆ, ಬುಧ ಹಾಗೂ ರಾಹುವಿನ ನಡುವೆ ಸ್ನೇಹ ಭಾವದ ಸಂಬಂಧವಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಉಂಟಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ಆರ್ಥಿಕ ಸ್ಥಿತಿ ಬಲಿಷ್ಠವಾಗಿರಲಿದೆ. ಇದಲ್ಲದೆ ಸಮಾಜದಲ್ಲಿ ನಿಮ್ಮ ಘನತೆ-ಗೌರವದ ಜೊತೆಗೆ ಸ್ಥಾನಮಾನ ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. 

3 /5

ಕರ್ಕ ರಾಶಿ: ರಾಹು ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ರೇವತಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಹೀಗಿರುವಾಗ ನಿಮಗೆ ವಿದೇಶಯಾತ್ರೆಯ ಯೋಗ ಕೂಡಿಬರುವ ಸಾಧ್ಯತೆ ಇದೇ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಲು ಇಚ್ಚಿಸುವವರ ಆಸೆ ಈಡೇರಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಜನರಿಗೆ ಹಲವು ಅವಕಾಶಗಳು ಒದಗಿ ಬರಲಿವೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನ ಉತ್ತಮವಾಗಿದ್ದಾರೆ. ವೃತ್ತಿಜೀವನದ ಮೇಲೆ ರಾಹು ಸಕಾರಾತ್ಮಕ ಪ್ರಭಾವ ಬೀರಳಿದ್ದಾನೆ. ಹೀಗಿರುವಾಗ ಒಳ್ಳೆಯ ನೌಕರಿಯ ಅವಕಾಶ ನಿಮಗೆ ಒದಗಿಬರುವ ಸಾಧ್ಯತೆ ಇದೇ. ಆದರೆ, ಮಾನಸಿಕ ಚಿಂತೆ ಎದುರಾಗುವ ಸಾಧ್ಯತೆ ಇದೆ. ಇಷ್ಟ ದೇವರನ್ನು ಧ್ಯಾನಿಸುವುದು ಉತ್ತಮ. 

4 /5

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ರಾಹು ರೇವತಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ರೇವತಿ ನಕ್ಷತ್ರ ಹಾಗೂ ಕನ್ಯಾ ರಾಶಿ ಎರಡಕ್ಕೂ ಬುಧ ಅಧಿಪತಿಯಾಗಿದ್ದಾನೆ. ಹೀಗಾಗಿ ನಿಮಗೆ ವಿಶೇಷ ಲಾಭ ಸಿಗಲಿದೆ. ಬಿಸ್ನೆಸ್ ಮಾಡುವವರಿಗೆ ಅಪಾರ ಧನ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಉತ್ಸಾಹದಿಂದ ತುಂಬಿರುವಿರಿ. ಇದರಿಂದ ನೀವು ನಿಮ್ಮ ಗುರಿಯನ್ನು ಸಾಧಿಸುವಲ್ಲಿ ಸಾಕಷ್ಟು ಪ್ರಯತ್ನಿಸುವಿರಿ, ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮ್ಮ ಕೆಲಸವನ್ನು ನೋಡಿ ಹಿರಿಯ ಅಧಿಕಾರಿಗಳು ನಿಮಗೆ ಪದೋನ್ನತಿ ಹಾಗೂ ಇಂಕ್ರಿಮೆಂಟ್ ಭಾಗ್ಯ ಕರುಣಿಸಲಿದ್ದಾರೆ. ಇದರ ಜೊತೆಗೆ ದೊಡ್ಡ ಜವಾಬ್ದಾರಿಯೂ ಕೊಡ ನಿಮ್ಮ ಹೆಗಲಿಗೇರಲಿದೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)