Skin Care Home Remedies: ಇಂದಿನ ಯುಗದಲ್ಲಿ ಮಹಿಳೆಯರು ಮಾತ್ರವಲ್ಲ, ಪುರುಷರೂ ಸಹ ತಮ್ಮ ಚರ್ಮದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
ಹೌದು, ಬದಲಾದ ಜೀವನಶೈಲಿಯಿಂದಾಗಿ ಮುಖದಲ್ಲಿ ಮೊಡವೆ, ಕಲೆಗಳು, ಪಿಗ್ಮೆಂಟೇಶನ್ ನಂತಹ ಚರ್ಮ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಿರಬಹುದು. ಆದರೆ, ಇವೆಲ್ಲದಕ್ಕೂ ಎರಡೇ ಎರಡು ಪದಾರ್ಥಗಳನ್ನು ಬಳಸಿ ಸುಲಭ ಪರಿಹಾರ ಪಡೆಯಬಹುದು.
ಆಯುರ್ವೇದದ ಪ್ರಕಾರ, ನಿತ್ಯ ರಾತ್ರಿ ಮಲಗುವ ಐದು ನಿಮಿಷಗಳ ಮೊದಲು ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ಮೊಡವೆ, ಪಿಗ್ಮೆಂಟೇಶನ್, ಚರ್ಮದ ಸುಕ್ಕು, ಚರ್ಮ ಒಡೆಯುವಿಕೆ, ವೈಟ್ ಹೆಡ್ಸ್, ಬ್ಲಾಕ್ ಹೆಡ್ಸ್ ಸೇರಿದಂತೆ ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಿ ಯಂಗ್ ಆದ, ಕೋಮಲವಾದ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಬಹುದು.
ಇದನ್ನೂ ಓದಿ- ಡಾರ್ಕ್ ಸರ್ಕಲ್ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರ ನೀಡುತ್ತೇ ಈ ಒಂದು ಸಸ್ಯ
ಚರ್ಮ ಸಮಸ್ಯೆಗೆ ಮನೆ ಮದ್ದು:
ಬೇಕಾಗುವ ಸಾಮಾಗ್ರಿಗಳು:
* ಅಲೋವೆರಾ:
ಅಲೋವೆರಾದಲ್ಲಿರುವ ಸೌಂದರ್ಯವರ್ಧಕ ಅಂಶಗಳು ನಮ್ಮ ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಸ್ಕಿನ್ ಅನ್ನು ಹೈಡ್ರೆಟ್ ಮಾಡಿ ಉತ್ತಮ ಮಾಶ್ಚುರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಪಿಗ್ಮೆಂಟೇಶನ್ ಬರದಂತೆ ತಡೆಯುತ್ತದೆ.
* ಕಡಲೆ ಹಿಟ್ಟು:
ಕಡಲೆ ಹಿಟ್ಟು ನಮ್ಮ ಚರ್ಮದಲ್ಲಿರುವ ಡೆಡ್ ಸ್ಕಿನ್, ವೈಟ್ ಹೆಡ್ಸ್, ಬ್ಲಾಕ್ ಹೆಡ್ಸ್ ಎಕ್ಸ್ ಗಳನ್ನು ನಿವಾರಿಸಿ ಚರ್ಮವನ್ನು ಪೋಲಿಯೆಟ್ ಮಾಡುವ ಮೂಲಕ ಚರ್ಮವನ್ನು ಬೆಳ್ಳಗಾಗಿಸುತ್ತದೆ.
ಇದನ್ನೂ ಓದಿ- ಓಪನ್ ಪೋರ್ಸ್‌ಗೆ ಹೇಳಿ ಬೈ ಬೈ..! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
ತಯಾರಿಸುವ ವಿಧಾನ:
ಮೊದಲಿಗೆ ಅಲೋವೆರಾ ಎಲೆಗಳಿಂದ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ. ಸಾಧ್ಯವಾದಷ್ಟು ಫ್ರೇಶ್ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳುವುದು ಒಳಿತು. ನಿಮಗೆ ಸಾಧ್ಯವಾಗದಿದ್ದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿಮೆಡ್ ಅಲೋವೆರಾ ಜೆಲ್ ತೆಗೆದುಕೊಂಡು ಅದರಲ್ಲಿ ಅಗತ್ಯವಿರುವಷ್ಟು ಕಡಲೆಹಿಟ್ಟನ್ನು ಬೆರೆಸಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಬಳಸುವ ವಿಧಾನ:
ನಿತ್ಯ ರಾತ್ರಿ ಮಲಗುವ ಮೊದಲು ಮೇಲೆ ತಿಳಿಸಿದಂತೆ ಅಲೋವೆರಾ ಜೆಲ್, ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಎರಡರಿಂದ ಮೂರು ನಿಮಿಷಗಳ ಕಾಲ ಲಘುವಾಗಿ ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆದು ಮಲಗಿ. ಫೇಸ್ ವಾಶ್ ಮಾಡಿದ ಬಳಿಕ ಯಾವುದೇ ಕ್ರೀಂ ಹಚ್ಚುವ ಅಗತ್ಯವಿಲ್ಲ.
ಪ್ರಯೋಜನಗಳು:
ನಿತ್ಯ ಈ ಅಲೋವೆರಾ ಜೆಲ್, ಕಡಲೆ ಹಿಟ್ಟನ್ನು ಈ ರೀತಿ ಬಳಸುವುದರಿಂದ ಅಲೋವೆರಾ ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕಡಲೆ ಹಿಟ್ಟು ಚರ್ಮವನ್ನು ಸ್ವಚ್ಛಗೊಳಿಸಿ ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್, ಡೆಡ್ ಸ್ಕಿನ್ ಗಳನ್ನು ನಿವಾರಿಸಿ, ಹೊಳೆಯುವ ಚರ್ಮವನ್ನು ನಿಮ್ಮದಾಗಿಸುತ್ತದೆ. ಇದರಿಂದ ಮುಖದಲ್ಲಿ ಮೊಡವೆ, ಪಿಗ್ಮೆಂಟೇಶನ್ ಮೂಡುವುದನ್ನು ಕೂಡ ತಡೆಯಲು ಸಾಧ್ಯವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.