ಕೇಂದ್ರದಿಂದ ಬಾರದಿರುವ ಅನುದಾನ ಕೇಳುವ ಪೌರುಷ ಬಿಜೆಪಿ ಸಂಸದರಿಗೆ ಇಲ್ಲವೇ? -ರಮೇಶ್ ಬಾಬು
ಕೇಂದ್ರದಿಂದ ಬಾರದಿರುವ ಅನುದಾನ ಕೇಳುವ ಪೌರುಷ ಅವರಿಗೆ ಇಲ್ಲವೇ? ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡೋ ನೀವು ಇದಕ್ಕೆ ಉತ್ತರಿಸಿ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರ ಮಾಧ್ಯಮಗೊಷ್ಟಿಯ ಮುಖ್ಯಾಂಶಗಳು:
ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಕರ್ನಾಟಕದಿಂದ ಆಯ್ಕೆಯಾದ 25 ಜನ ಸಂದಸದರು ಜನರ ನಂಬಿಕೆ ಕಳೆದುಕೊಂಡಿದ್ದಾರೆ.
1952 ರಲ್ಲಿ ಮೊದಲನೆ ಸಂಸತ್ ಚುನಾವಣೆಯಲ್ಲಿ ಆಗಿನ ಮೈಸೂರು ರಾಜ್ಯದ 11 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 10 ಸ್ಥಾನ ಗಳಿಸಿತ್ತು.
1972 ರಲ್ಲಿ 27 ಲೋಕಸಭಾ ಕ್ಷೇತ್ರಗಳ ಪೈಕಿ ಸಂಪೂರ್ಣವಾಗಿ 27 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ತುರ್ತು ಪರಿಸ್ಥಿತಿ ಸಂದರ್ಭದ 1977ರ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು.
ರಾಮಕೃಷ್ಣ ಹೆಗ್ಡೆ ಅವರ ಹೊಂದಾಣೆಕೆ ಚುನಾವಣೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಬಿಜೆಪಿ ಕಣ್ತೆರಿಯುವ ಕೆಲಸ ಆರಂಭ ಮಾಡಿತ್ತು. ಕಳೆದ ಚುನಾವಣೆಯಲ್ಲಿ 25 ಸ್ಥಾನ ಪಡೆದಿತ್ತು. ಅದು ಜನರು ನೀಡಿದ ತೀರ್ಪು ಅದಕ್ಕೆ ನಾವು ಗೌರವಿಸಬೇಕು.
ರಾಜ್ಯದಲ್ಲಿ ಭೀಕರ ಬರ ಇದೆ. ರಾಜ್ಯ ಸರ್ಕಾರ ಕೂಡ ಆನೇಕ ಬರ ಪರಿಹಾರ ಕೆಲಸಗಳನ್ನ ಮಾಡುತ್ತಿದೆ. ಕೇಂದ್ರಕ್ಕೆ ಮುಖ್ಯಮಂತ್ರಿ ಸೇರಿದಂತೆ ಅನೇಕೆ ಸಚಿವರು ಬರ ಅಧ್ಯಯನ ತಂಡ ಬೇಕು ಎಂದು ಮನವಿ ನಂತರ ಕೇಂದ್ರ ತಂಡ ಭೇಟಿ ನೀಡಿದೆ.
ಇದನ್ನೂ ಓದಿ: ಡಯಾಲಿಸಿಸ್ ಸಮಸ್ಯೆ ನಮ್ಮ ಸರ್ಕಾರದಿಂದ ಆಗಿದ್ದಲ್ಲ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಸರ್ಕಾರದ ಬೇಡಿಕೆಗೆ ತಕ್ಕಂತೆ ಯಾವ ಅನುದಾನವು ನೀಡಿಲ್ಲ. 27 ಜನ ಸಂಸದರು ಬಿಜೆಪಿ ಅವರೆ ಇದ್ದಾರೆ , ಸುಮಲತಾ ಅವರು ಕೂಡ ಘೂಷಣೆ ಮಾಡಿಕೊಂಡಿದ್ದಾರೆ.
28 ಜನ ಸಂಸದು 12 ಜನ ರಾಜ್ಯಸಭ ಸದಸ್ಯರಿಗೆ ಪ್ರದೇಶ ಆಭಿವೃದಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ವಾರ್ಷಿಕ 5 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು
ನಮ್ಮ ರಾಜ್ಯದ ಸಂಸದರಿಗೆ ಪ್ರಸಕ್ತ ಸಾಲಿನಲ್ಲಿ 145 ಕೋಟಿ ಬಿಡುಗಡೆ ಆಗಬೇಕಿತ್ತು. 60 ಕೋಟಿ ರಾಜ್ಯಸಭಾ ಸದಸ್ಯರಿಗೆ ಬಿಡುಗಡೆ ಆಗಬೇಕಿತ್ತು. ಆದರೆ ಕೇಂದ್ರ ಸರ್ಕಾರದಿಂದ 1 ರೂಪಾಯಿ ಹಣ ಕೂಡ ಬಿಡುಗಡೆ ಆಗಿಲ್ಲ.
ಈ ಬಗ್ಗೆ ಯಾವ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತುತ್ತಿಲ್ಲ. ಕೇಂದ್ರ ಸರ್ಕಾರದ ಅಂಕಿ ಅಂಶದ ಪ್ರಕಾರ 56 ಕಂತುಗಳಲ್ಲಿ 145 ಕೋಟಿ ಬಿಡುಗಡೆ ಆಗಬೇಕಿತ್ತು. ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ.
12 ರಾಜ್ಯಸಭಾ ಸದಸ್ಯರಿಗೆ ಬಿಡುಗಡೆ ಆಗಬೇಕಿದ್ದ ಹಣ 60 ಕೋಟಿ ಕೂಡ ಬಿಡುಗಡೆ ಮಾಡಿಲ್ಲ. ಪ್ರತಾಪ್ ಸಿಂಹ ಅವರು ಕಮಿಷನ್ ಪಡುಯಲು ಆರ್ಜಿ ಹಾಕಿ ಬಿಡುಗಡೆಗೆ ತಡೆ ಕೋರಿರಬಹುದು. ಈ ಬಗ್ಗೆ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲಾ ಸಂಸದರು ಉತ್ತರ ನೀಡಬೇಕು.
2.12.2023 ರಂದು ಯಾವ ಸಂಸದರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ದಾಖಲೆ ನೀಡಿದ್ದು, ಇದರ ಪೈಕಿ ಕರ್ನಾಟಕದ ಸಂಸದರಿಗೆ ಬಿಡುಗಡೆ ಆಗಬೇಕಿದ್ದ ಹಣ 488.5 ಕೋಟಿ. ಇಲ್ಲಿಯವರೆ ಕೇಂದ್ರದಿಂದ ಬಿಡುಗಡೆಯಾಗಿರುವ ಹಣ 225 ಕೋಟಿ ಮಾತ್ರ. ಇನ್ನು 263.5 ಕೋಟಿ ಅನುದಾನ ಬಾಕಿ ಉಳಿದಿದೆ.
ವಿಪಕ್ಷ ನಾಯಕ ಆಶೋಕ ಅವರು ಸಿದ್ದರಾಮಯ್ಯ ಸರ್ಕಾರ ಶಾಸಕರಿಗೆ ಅನುದಾನ ನೀಡಿಲ್ಲ ಅಂತಾರೆ.ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ. ಕಾಮಗಾರಿಗಳಿಗೆ ಬಿಡುಗಡೆ ಮಾಡಿದ ಅನುದಾನದಲ್ಲಿ ಬಳಕೆ ಮಾಡದೆ ಇರುವ ಹಣ 40.94 ಕೋಟಿಯಷ್ಟಿದೆ. ಬಿಡುಗಡೆಯಾದ 40.94 ಕೋಟಿ ಹಣ ಯಾಕೆ ಬಳಕೆ ಆಗಿಲ್ಲ?
ಇದನ್ನೂ ಓದಿ: Ration Card: ಹೊಸ ‘BPL, APL ಕಾರ್ಡ್’ಗೆ ಅರ್ಜಿ ಸಲ್ಲಿಕೆಗೆ ನಾಳೆ ಒಂದೇ ದಿನ ಅವಕಾಶ!
ಬಿಜೆಪಿ ಎ ಮತ್ತು ಬಿ ಟೀಂ ನಾಯಕರು ಎಲ್ಲಿದ್ದೀರ? ಯಾಕೆ ಇದರ ವಿರುದ್ಧ ಯಾಕೆ ಧ್ವನಿ ಎತ್ತಿಲ್ಲ? ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ ಉತ್ತರ ನೀಡಬೇಕು.
ಈಗಾಗಲೆ ಚುನಾವಣೆ ಹತ್ತರ ಬರುತ್ತಿದೆ, ಮಾರ್ಚ್ ನಲ್ಲಿ ಚುನಾವಣೆ ಘೋಷಣೆ ಸಾಧ್ಯತೆ ಇದೆ. ಚುನಾನಣೆ ನೀತಿ ಸಮಿತಿ ಜಾರಿ ಆದರೆ ಹಣ ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಪರವಾಗಿ ನಾನು ನಿಮಗೆ ಒತ್ತಾಯ ಮಾಡುತ್ತೇನೆ ದಯಮಾಡಿ ಕರ್ನಾಟಕದ ಪರವಾಗಿ ದನಿ ಎತ್ತಬೇಕು.
ಕರ್ನಾಟಕಕ್ಕೆ ಸಿಬೇಕಾದ ಅನುದಾನ, ರೈಲ್ವೆ, ಜಿಎಸ್ಟಿ ತೆರಿಗೆ ಪಾಲನ್ನ ಕೇಳಿ. ಇಲ್ಲವಾದಲ್ಲಿ ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಬರುವ ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ.
ಪ್ರದೇಶ ಅಭಿವೃಧಿ ಯೋಜನೆಗಳಿಗೆ 5 ಕೋಟಿ ಬಿಡುಗಡೆ ಮಾಡುವುದನ್ನ ಯುಪಿಎ ಸರ್ಕಾರ ಜಾರಿ ಮಾಡಿದ್ದು, 25 ವರ್ಷಗಳ ಹಿಂದಿನ ಅನುದಾನವನ್ನೆ ಈಗಲೂ ಮುಂದುವರೆಸಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಒಬ್ಬೊಬ್ಬ ಸಂಸದರಿಗೂ 25 ಕೋಟಿ ಬಿಡುಗಡೆ ಮಾಡಬೇಕು. ಆದರೆ ಇಷ್ಟು ಹಣ ಕೇಂದ್ರ ಸರ್ಕಾರ ನೀಡುತ್ತಿಲ್ಲ.
ನಿರ್ಮಲ ಸೀತಾರಾಮನ್ ಅವರು ಮೈಸೂರು ಸಿಲ್ಕ್ ಸೀರೆ ಕೋಳ್ಳಲು ಕರ್ನಾಟಕಕ್ಕೆ ಬರುತ್ತಾರೆ. ಕೇಂದ್ರ ಪ್ಲಾನಿಂಗ್ ಕಮಿಷನ್ ವರದಿ ಸುಳ್ಳು ಎಂದು ಅವರೆ. ತಿಳಿಸಲಿ ಆದರೆ ಇದನ್ನ ಹೆಚ್ಚು ಮಾಡಿಲ್ಲ ಕೇಂದ್ರ ಸರ್ಕಾರ ದೀವಾಳಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.