ಹವಾಮಾನ ವೈಪರೀತ್ಯ ಹಿನ್ನೆಲೆ ರೇಷ್ಮೆ ಬೆಳೆ ರಕ್ಷಣೆಗೆ ಸಲಹೆಗಳನ್ನು ನೀಡಿದ ರೇಷ್ಮೆ ಇಲಾಖೆ

ಕೊಪ್ಪಳ ಜಿಲ್ಲೆಯಲ್ಲಿ ಪ್ರಸ್ತುತ ರೇಷ್ಮೆ ಹುಳುಗಳು ಜೀವಿತಾವಧಿಯನ್ನು ಹೆಚ್ಚಿಸಿಕೊಂಡು ಗೂಡು ಕಟ್ಟದೇ ಸಾಯುತ್ತಿರುವುದನ್ನು ಇಲಾಖಾ ಅಧಿಕಾರಿಗಳು/ಸಿಬ್ಬಂದಿ ರೇಷ್ಮೆ ಬೆಳೆಗಾರರ ಹಿಪ್ಪುನೇರಳೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Written by - Manjunath N | Last Updated : Dec 11, 2023, 12:07 AM IST
  • ಈ ಸಮಸ್ಯೆಯು ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿಯೂ ಅಧಿಕವಾಗಿ ಕಾಣಿಸಿಕೊಂಡಿದೆ.
  • ಹುಳುಗಳ ಜೀವಿತಾವಧಿ ವಿಸ್ತರಣೆಗೊಂಡು ಗೂಡು ಕಟ್ಟದೇ ಸಾಯುತ್ತಿರುವ ಕುರಿತು ಅಧ್ಯಯನ ನಡೆಸಿವೆ
ಹವಾಮಾನ ವೈಪರೀತ್ಯ ಹಿನ್ನೆಲೆ ರೇಷ್ಮೆ ಬೆಳೆ ರಕ್ಷಣೆಗೆ ಸಲಹೆಗಳನ್ನು ನೀಡಿದ ರೇಷ್ಮೆ ಇಲಾಖೆ title=
ಸಾಂಧರ್ಭಿಕ ಚಿತ್ರ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಪ್ರಸ್ತುತ ರೇಷ್ಮೆ ಹುಳುಗಳು ಜೀವಿತಾವಧಿಯನ್ನು ಹೆಚ್ಚಿಸಿಕೊಂಡು ಗೂಡು ಕಟ್ಟದೇ ಸಾಯುತ್ತಿರುವುದನ್ನು ಇಲಾಖಾ ಅಧಿಕಾರಿಗಳು/ಸಿಬ್ಬಂದಿ ರೇಷ್ಮೆ ಬೆಳೆಗಾರರ ಹಿಪ್ಪುನೇರಳೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಶಾಕ್: ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲ್ಲ ಈ ಪವರ್ ಫುಲ್ ವೇಗಿ!

ಪ್ರಸಕ್ತ ವರ್ಷ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೇಷ್ಮೆ ಹುಳುಗಳು ಜೀವಿತಾವಧಿ ವಿಸ್ತರಣೆಗೊಂಡು ಗೂಡು ಕಟ್ಟದೆ ಸಾಯುತ್ತಿರುವುದನ್ನು ಗಮನಿಸಲಾಗಿದ್ದು, ಕ್ರಿಮಿನಾಶಕ ಬಳಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಳೆ ಕೊರತೆ, ಬಿಸಿಲಿನ ಪ್ರಮಾಣ ಏರಿಳಿತವಾದ ಕಾರಣ ರೇಷ್ಮೆ ಹುಳುಗಳ ಮೇಲೆ ಪರಿಣಾಮ ಬೀರುತ್ತಿರಬಹುದು ಎಂದು ಅಂದಾಜಿಸಲಾಗಿದೆ.  ಅಲ್ಲದೆ ಹಿಪ್ಪುನೇರಳೆ ತೋಟದ ಅಕ್ಕಪಕ್ಕದ ಹೊಲಗಳಲ್ಲಿನ ಬೇರೆ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಅಥವಾ ಗೊಬ್ಬರ/ಪೋಷಕಾಂಶಗಳ ಕಣಗಳು ಗಾಳಿಯಲ್ಲಿ ತೇಲಾಡುತ್ತಾ, ಹಿಪ್ಪುನೇರಳೆ ಬೆಳೆ ಮೇಲೆ ಕುಳಿತು, ಇದನ್ನು ರೇಷ್ಮೆ ಹುಳುಗಳು ತಿನ್ನುವುದರಿಂದ ಹುಳುಗಳ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತಿರಬಹುದೆಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಸೊಸೆ ಐಶ್ವರ್ಯಾರನ್ನ ಅನ್’ಫಾಲೋ ಮಾಡಿದ ಬೆನ್ನಲ್ಲೇ ಅಮಿತಾಬ್ ವಿಚಿತ್ರ ಪೋಸ್ಟ್!

ಈ ಸಮಸ್ಯೆಯು ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿಯೂ ಅಧಿಕವಾಗಿ ಕಾಣಿಸಿಕೊಂಡಿದೆ.ರಾಜ್ಯದ ರೇಷ್ಮೆ ಸಂಶೋಧನಾ ಅಭಿವೃದ್ಧಿ ಸಂಸ್ಥೆ, ಕೇಂದ್ರ ರೇಷ್ಮೆ ಸಂಸ್ಥೆಗಳ ವಿಜ್ಞಾನಿಗಳ ತಂಡಗಳು ಬೇರೆ ಬೇರೆ ತೋಟಗಳಿಗೆ ಭೇಟಿ ನೀಡಿ ಹುಳುಗಳ ಜೀವಿತಾವಧಿ ವಿಸ್ತರಣೆಗೊಂಡು ಗೂಡು ಕಟ್ಟದೇ ಸಾಯುತ್ತಿರುವ ಕುರಿತು ಅಧ್ಯಯನ ನಡೆಸಿವೆ.ಹಿಪ್ಪುನೇರಳೆಯಲ್ಲಿ ಪೌಷ್ಠಿಕಾಂಶ ಕೊರತೆ, ಕೀಟಗಳ ನಿರ್ವಹಣೆ, ಜೈವಿಕ ನಿಯಂತ್ರಣಗಳು, ಎಲೆ ಶಿಲೀಂಧ್ರ ರೋಗ, ದುಂಡಾಣು ರೋಗ, ಬೇರು ಕೊಳೆ ರೋಗ, ಮಣ್ಣಿನಿಂದ ಹರಡುವ ರೋಗಗಳ ನಿಯಂತ್ರಣ, ಹಿಪ್ಪುನೇರಳೆ ಕೀಟಗಳ ನಿರ್ವಹಣೆ, ಹಿಪ್ಪುನೇರಳೆ ರೋಗಗಳ ನಿರ್ವಹಣೆ, ರೇಷ್ಮೆ ಹುಳು ಸಾಕಾಣಿಕೆ ಮನೆ/ಶೆಡ್/ಹಾಸಿಗೆ ಸೋಂಕು ನಿವಾರಕಗಳ ಬಳಕೆ ಕುರಿತು ಸಿ.ಎಸ್.ಆರ್.ಟಿ.ಐ., ಕೆ.ಎಸ್.ಎಸ್.ಆರ್.ಡಿ.ಐ., ಮತ್ತು ಎ.ಪಿ.ಎಸ್.ಎಸ್.ಆರ್.ಡಿ.ಐ. ಇಲಾಖೆಗಳಿಂದ ಶಿಫಾರಸ್ಸು ಮಾಡಿದ ಸೋಂಕು ನಿವಾರಕ, ಸಸ್ಯ ಸಂವರ್ಧಕ ಹಾಗೂ ಹಾಸಿಗೆ ಸೋಂಕು ನಿವಾರಕಗಳನ್ನೇ ಮಾತ್ರ ರೇಷ್ಮೆ ಬೆಳೆಗಾರರು ಬಳಸಬೇಕು. ಮಾರುಕಟ್ಟೆಗಳಲ್ಲಿ ಸಿಗುವ ಇತರೆ ಯಾವುದೇ ನಕಲಿ ಉತ್ಪನ್ನಗಳನ್ನು ಬಳಸಬಾರದು.ರೇಷ್ಮೆ ಹುಳುಗಳು ಗೂಡು ಕಟ್ಟುತ್ತಿಲ್ಲದ ಕುರಿತು/ಇತರೆ ಸಮಸ್ಯೆಗಳ ಕುರಿತು ಹೆಚ್ಚಿನ ಮಾಹಿತಿ ಸಲಹೆ ಸೂಚನೆಗಳನ್ನು ಹತ್ತಿರದ ರೇಷ್ಮೆ ಇಲಾಖೆಯ ಕಾರ್ಯಾಲಯಕ್ಕೆ ಭೇಟಿ ನೀಡಿ ಅಥವಾ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News